Advertisement

ಮೋದಿ ಆಯ್ಕೆ ವರೆಗೆ ಓಟ : ನಟಿ ಸ್ನೇಹಾ ಸಿಂಗ್‌

12:58 AM Apr 17, 2019 | sudhir |

ಉಡುಪಿ: ಇದುವರೆಗೆ ನಾವು ಸುಮಾರು 15 ಸಾವಿರ ಕಿ.ಮೀ. ಓಟವನ್ನು ಪೂರೈಸಿದ್ದು ದೇಶಾದ್ಯಂತ ಜನರು ಮೋದಿಯವರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತ ಪಡಿಸುತ್ತಿ¨ªಾರೆ. ನಮ್ಮ ಓಟ ಮುಂದಿನ ತಿಂಗಳು ಲೋಕಸಭಾ ಚುನಾವಣೆಯಲ್ಲಿ ಮೋದಿಯವರು ಮತ್ತೆ ಆಯ್ಕೆಯಾಗುವ ತನಕ ಮುಂದುವರಿಯಲಿದೆ ಎಂದು ತನ್ನ ಸಹವರ್ತಿ ಮಧ್ಯಪ್ರದೇಶದ ಹನಿ ಸಿಂಗ್‌ ಅವರೊಂದಿಗೆ ಪ್ರತೀ ದಿನ 60 ಕಿ.ಮೀ. ಓಡುತ್ತಿರುವ ರಾಜಸ್ಥಾನದ ಚಿತ್ರ ನಟಿ ಸ್ನೇಹಾ ಸಿಂಗ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಅವರು ಶುಕ್ರವಾರ ಜಿÇÉಾ ಬಿಜೆಪಿ ಕಚೇರಿಯಲ್ಲಿ ಉಡುಪಿ ವಿಧಾನ ಸಭಾ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ನಮ್ಮ ಈ ಅಭಿಯಾನಕ್ಕೆ ಪ್ರಾಯೋಜಕರನ್ನು ಅರಸುವ ಪ್ರಯತ್ನದಲ್ಲಿ¨ªಾಗ ಬಾಲಿವುಡ್‌ ಚಿತ್ರ ನಟ ಅಕ್ಷಯ್‌ ಕುಮಾರ್‌ ತಾವಾಗಿ ಮುಂದೆ ಬಂದು ಖರ್ಚು ವೆಚ್ಚದ ಜವಾಬ್ದಾರಿ ವಹಿಸಿ ಕೊಂಡಿ¨ªಾರೆ ಎಂದರು.

ಶಾಸಕ ಕೆ. ರಘುಪತಿ ಭಟ್‌ ಪ್ರಸ್ತಾವನೆಗೈದರು. ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪೇಂದ್ರ ನಾಯಕ್‌, ಜಗದೀಶ್‌ ಆಚಾರ್ಯ, ರಾಘವೇಂದ್ರ ಕಿಣಿ, ಮಹೇಶ್‌ ಠಾಕೂರ್‌, ದಾವೂದ್‌ ಅಬೂಬಕರ್‌, ಮಾರಾಳಿ ಪ್ರತಾಪ್‌ ಹೆಗ್ಡೆ, ಶ್ರೀಶ ನಾಯಕ್‌, ದಿನಕರ ಬಾಬು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next