ಜಿನಿವಾ: ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ವಿಶ್ವದ ಇತರ ನಾಯಕರಿಗಿಂತ ಮುಂದೆ ಇದ್ದಾರೆ ಎನ್ನುವುದು ಸರ್ವ ವಿದಿತ. ಬರ್ಸನ್ ಕೋನ್ ಮತ್ತು ವೋಲ್ಫ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಟ್ರಂಪ್‌ಗಿಂತ ಮೋದಿ ಯವರೇ ಫೇಸ್‌ಬುಕ್‌ನಲ್ಲಿ ಎರಡರಷ್ಟು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಫೇಸ್‌ಬುಕ್‌ನಲ್ಲಿ ಸದ್ಯಕ್ಕೆ 4.32 ಕೋಟಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಟ್ರಂಪ್ 2.31 ಕೋಟಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ನಾನಾ ದೇಶಗಳ ಆಯ್ದ 650 ವಿಶ್ವಮಟ್ಟದ ನಾಯಕರ ಫೇಸ್‌ಬುಕ್ ಪುಟಗಳನ್ನು 2017ರ ಜನವರಿ 1ರಿಂದ 14 ತಿಂಗಳುಗಳ ಕಾಲ ಅಧ್ಯಯನ ಮಾಡಲಾಗಿದೆ.
ಇನ್ನು, ಫೇಸ್‌ಬುಕ್‌ನಲ್ಲಿ ಜನರೊಂದಿಗೆ ಅತಿ ಹೆಚ್ಚು ಬಾರಿ ಪ್ರತಿಕ್ರಿಯಿಸಿದ ಹೆಗ್ಗಳಿಕೆ ವಿಚಾರದಲ್ಲಿ ಮೋದಿ ಎರಡನೇ ಸ್ಥಾನ ಗಳಿಸಿದ್ದಾರೆ. 2017ರ ಜನವರಿ 1ರಿಂದ ಈವರೆಗೆ ಮೋದಿ, 11.36 ಕೋಟಿ ಪ್ರತಿಸ್ಪಂದನೆ ನೀಡಿದ್ದಾರೆ. ಇದೇ ಅವಧಿಯಲ್ಲಿ, 20.49 ಕೋಟಿಯಷ್ಟು ಪ್ರತಿಕ್ರಿಯೆ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ.
4.32 ಕೋಟಿಫೇಸ್‌ಬುಕ್‌ನಲ್ಲಿ ಮೋದಿ ಹೊಂದಿರುವ ಹಿಂಬಾಲಕರ ಸಂಖ್ಯೆ
11.36 ಕೋಟಿ ಹದಿನಾಲ್ಕು ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ ಮೋದಿ ನೀಡಿದ ಪ್ರತಿಕ್ರಿಯೆ ಸಂಖ್ಯೆ
650 ಅಧ್ಯಯನಕ್ಕೆ ಬಳಸಿಕೊಂಡ ವಿಶ್ವ ನಾಯಕರ ಫೇಸ್‌ಬುಕ್ ಪುಟಗಳ ಸಂಖ್ಯೆ