ಪ್ರಮಾಣ ಸ್ವೀಕಾರ ಸಮಾರಂಭದ ಬಳಿಕ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ‘ಹೊಸದಾಗಿ ನೇಮಕಗೊಂಡ ಸಿಎಂ ಮತ್ತು ಅವರ ತಂಡವು ಉತ್ತರಪ್ರದೇಶದ ಅಭಿವೃದ್ಧಿಗೆ ಪಣತೊಡುತ್ತಾರೆ ಎನ್ನುವ ನಂಬಿಕೆಯಿದೆ. ಅವರು ಉತ್ತರ ಪ್ರದೇಶವನ್ನು ಉತ್ತಮ ಪ್ರದೇಶವನ್ನಾಗಿ ಮಾರ್ಪಡಿಸಲಿದ್ದಾರೆ. ರಾಜ್ಯವು ದಾಖಲೆಯ ಪ್ರಗತಿ ಕಾಣಲಿದೆ. ಯಾವಾಗ ಉತ್ತರಪ್ರದೇಶ ಅಭಿವೃದ್ಧಿ ಹೊಂದುತ್ತದೋ, ಆಗ ಭಾರತವೂ ಅಭಿವೃದ್ಧಿ ಹೊಂದುತ್ತದೆ. ಯುಪಿಯ ಯುವಕರ ಸೇವೆ ಮಾಡಲು ಮತ್ತು ಅವರಿಗೆ ಅನೇಕ ಅವಕಾಶಗಳನ್ನು ಕಲ್ಪಿಸಲು ನಾವು ಬಯಸುತ್ತೇವೆ,’ ಎಂದಿದ್ದಾರೆ. ಜತೆಗೆ, ಅಭಿವೃದ್ಧಿಯೇ ನಮ್ಮ ಏಕೈಕ ಉದ್ದೇಶ ಮತ್ತು ಧ್ಯೇಯ ಎನ್ನುವ ಮೂಲಕ ಮೋದಿ ಅವರು ಯೋಗಿ ಆಯ್ಕೆ ನಂತರ ಎದ್ದಿರುವ ಕೆಲವು ಆತಂಕ ಹಾಗೂ ಅನುಮಾನಗಳಿಗೆ ಉತ್ತರಿಸಲು ಯತ್ನಿಸಿದ್ದಾರೆ. ಅಲ್ಲದೆ, ‘ಭವ್ಯ ಹಾಗೂ ದಿವ್ಯ ಭಾರತದ ಸೃಷ್ಟಿಯ ಪ್ರಯತ್ನ ಮುಂದುವರಿಯಲಿದೆ. ಹೊಸ ಮತ್ತು ಪರಿವರ್ತನೀಯ ಭಾರತದ ಉದಯಕ್ಕೆ ಜನಶಕ್ತಿಯ ಬಲ ಸಿಗುತ್ತಿದೆ’ ಎಂದೂ ಹೇಳಿದ್ದಾರೆ.