Advertisement

ಮೋದಿಗೆ ಖಾಸಗಿ ವಿಲ್ಲಾದಲ್ಲಿ ಜಪಾನ್‌ ಪಿಎಂ ಔತಣಕೂಟ

08:45 AM Oct 26, 2018 | Team Udayavani |

ಹೊಸದಿಲ್ಲಿ: ಇದೇ 28ರಿಂದ ಜಪಾನ್‌ಗೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿಗೆ ಜಪಾನ್‌ ಪ್ರಧಾನಿ ಶಿಂಜೋ ಅಬೆ ಖಾಸಗಿ ವಿಲ್ಲಾದಲ್ಲಿ ಔತಣಕೂಟ ಏರ್ಪಡಿಸಿದ್ದಾರೆ. ಶಿಂಜೋ ಅಬೆ ಭಾರತಕ್ಕೆ ಆಗಮಿಸಿದಾಗ ಪ್ರಧಾನಿ ಮೋದಿ ಒದಗಿಸಿದ ಅದ್ದೂರಿ ಔತಣಕೂಟದ ಮಾದರಿಯಲ್ಲೇ ಯಮನಶಿಯಲ್ಲಿರುವ ವಿಲ್ಲಾದಲ್ಲಿ ಮೋದಿಗೆ ಔತಣ ಕೂಟ ಏರ್ಪಡಿಸಲಾಗಿದೆೆ. ಜಪಾನ್‌ನ ಕೆಲವೇ ಪ್ರಮುಖ ನಾಯಕರು ಮತ್ತು ಸಂಸದರಿಗೆ ಈ ಔತಣಕೂಟಕ್ಕೆ ಹಾಜರಾಗುವಂತೆ ಆಹ್ವಾನ ನೀಡಲಾಗಿದೆ.

Advertisement

ಜಪಾನ್‌ ಭೇಟಿಯಲ್ಲಿ ರಕ್ಷಣೆ ಹಾಗೂ ಪ್ರಾದೇಶಿಕ ಭದ್ರತೆ ಕುರಿತ ವಿಚಾರಕ್ಕೆ ಸಂಬಂಧಿಸಿ ಉಭಯ ನಾಯಕರು ಚರ್ಚಿಸಲಿದ್ದಾರೆ. ಅ.28ರಂದು ಬೆಳಗ್ಗೆ ಯಮನಶಿಗೆ ಭೇಟಿ ನೀಡಲಿರುವ ಮೋದಿ, ಅಬೆ ಜೊತೆ ಮಾತುಕತೆ ನಡೆಸಲಿದ್ದಾರೆ. ಅಲ್ಲಿಂದ ಯಮನಶಿ ಎಫ್ಎಎನ್‌ಯುಸಿ ರೊಬೊಟಿಕ್ಸ್‌ ಘಟಕಕ್ಕೆ ಭೇಟಿ ನೀಡಿ, ಸಂಜೆ ಔತಣ ಕೂಟಕ್ಕೆ ಹಾಜರಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next