ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲೇ ಕಾಶ್ಮೀರಕ್ಕೆ ಆಜಾದಿ ಅಥವಾ ಸ್ವಾಯತ್ತತೆ ನೀಡಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ಸಿಗರು ಪಾಕಿಸ್ತಾನ ದವರಂತೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ನಿನ್ನೆ ಮೊನ್ನೆಯಷ್ಟೇ ಅಧಿಕಾರದಲ್ಲಿದ್ದ ಅವರು, ಕಾಶ್ಮೀರದ ಸ್ವಾಯತ್ತತೆ ಬಗ್ಗೆ ಮಾತನಾಡಿರಲೇ ಇಲ್ಲ. ಆದರೆ ಈಗ ಅಧಿಕಾರದಿಂದ ಕೆಳಗಿಳಿದ ಮೇಲೆ ಯು-ಟರ್ನ್ ತೆಗೆದುಕೊಂಡು ಸ್ವಾಯತ್ತತೆ ನೀಡಬೇಕು ಎಂದು ಕೇಳುತ್ತಿದ್ದಾರೆ. ದೇಶದ ಸಮಗ್ರತೆ ಮತ್ತು ಏಕತೆ ವಿಚಾರದಲ್ಲಿ ಬಿಜೆಪಿ ಎಂದಿಗೂ ಇನ್ನೊಂದು ಯೋಚನೆ ಮಾಡುವುದೇ ಇಲ್ಲ ಎಂದು ಸ್ವಷ್ಟವಾಗಿ ಹೇಳಿದರು. ಶನಿವಾರವಷ್ಟೇ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರುಕಾಶ್ಮೀರದ ಆಜಾದಿ ಮತ್ತು ಸ್ವಾಯತ್ತತೆ ನೀಡುವ ಕುರಿತಂತೆ ಹೇಳಿಕೆ ನೀಡಿದ್ದರು. ಇದನ್ನು ಪ್ರಶ್ನಿಸಿದ ನರೇಂದ್ರ ಮೋದಿ ಅವರು, ನಿನ್ನೆಯಷ್ಟೇ ಅಧಿಕಾರದಲ್ಲಿದ್ದ ಅವರು ಎಲ್ಲವನ್ನು ಮರೆತು ಮಾತನಾಡುತ್ತಿದ್ದಾರೆ. ಇಂಥ ಮಂದಿಯಿಂದಲೇ ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಇಂದಿಗೂ ಅಪಾಯವಿರುವ ಸನ್ನಿವೇಶ ಸೃಷ್ಟಿಯಾ ಗಿದೆ ಎಂದು ಆರೋಪಿಸಿದರು. ಇಂದು ದೇಶಕ್ಕೆ ಕಾಂಗ್ರೆಸ್‌ನಿಂದ ಯಾವುದೇ ಉಪಯೋಗವಿಲ್ಲ ಎಂದ ಅವರು, ಇವರಿಗೆ ಬುದಿಟಛಿ ಹೇಳುವಂಥ ಬುದಿಟಛಿಜೀವಿಗಳು ಬೇಕಾಗಿದ್ದಾರೆ. ಸತತವಾಗಿ ಸೋಲುತ್ತಲೇ ಇರುವ ಕಾಂಗ್ರೆಸ್‌ನ್ನು ಅವರ ಬುದಿಟಛಿಮಾತಿ ನಿಂದಾದರೂ ಮೇಲೆತ್ತಬಹುದು ಎಂದು ವ್ಯಂಗ್ಯವಾಡಿದರು.
ವಲ್ಲಭಬಾಯ್ ಪಟೇಲ್ ದೇಶದ ರಕ್ಷಣೆಗಾಗಿ ಮುಖ್ಯ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಸಾವಿರಾರು ಸೈನಿಕರು ಬಲಿದಾನ ಮಾಡಿದ್ದಾರೆ. ಮಾತೃಭೂಮಿಯ ರಕ್ಷಣೆಗಾಗಿ, ಕಾಶ್ಮೀರದ ಜನರ ರಕ್ಷಣೆಗಾಗಿ ಪ್ರತಿ ಕ್ಷಣವೂ ಸೈನಿಕರು ಪ್ರಾಣದ ಹಂಗನ್ನು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಇದ್ದಕ್ಕಿದ್ದಂತೆ ಯು ಟರ್ನ್ ಹೊಡೆದಿದ್ದಾರೆ. ಯಾವುದೇ ನಾಚಿಕೆ ಇಲ್ಲದೇ ಪ್ರತ್ಯೇಕತಾವಾದಿಗಳ ಜತೆ ಕೈಜೋಡಿಸಿರುವ ನಾಯಕರಿಂದ ದೇಶದ ಉದಾಟಛಿರ ಸಾಧ್ಯವೇ ಎಂದು ಸಬೀಕರಲ್ಲಿ ಮೋದಿ ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರಿಗೆ ನಾಚಿಕೆ ಇಲ್ಲ: ಕಾಶ್ಮೀರದ ಪ್ರತ್ಯೇಕ ಸ್ಥಾನಮಾನದ ಬಗ್ಗೆ ಮಾತನಾಡುವ ಕಾಂಗ್ರೆಸ್‌ಗೆ ಉತ್ತರ ನೀಡಬೇಕಿದೆ. ಕಾಶ್ಮೀರದ ಉಳಿವಿಗಾಗಿ ಬಲಿದಾನ ಮಾಡಿದ ಸೈನಿಕರ ತಂದೆ, ತಾಯಿ, ತಂಗಿ ತಮ್ಮ ಹಾಗೂ ಮಕ್ಕಳು ಪ್ರಶ್ನೆ ಕೇಳುತ್ತಿದ್ದಾರೆ. ಕಾಂಗ್ರೆಸ್ ನಾಚಿಕೆ ಇಲ್ಲದೆ ಇಂತಹ ಭಾಷೆಯಲ್ಲಿ ಮಾತನಾಡುವ ಮೂಲಕ ಪಾಕಿಸ್ತಾನಕ್ಕೆ ಬೆಂಬಲ ನೀಡುವಂತಿದೆ. ಸರ್ದಾರ್ ಪಟೇಲರ ಭೂಮಿಯಲ್ಲಿ ಏಕತೆ ಜತೆ ರಾಜಿಗೆ ಅವಕಾಶ ಇಲ್ಲ ಎಂದು ಎಚ್ಚರಿಸಿದರು.
ಸರ್ಜಿಕಲ… ಸ್ಟ್ರೈಕ್‌ನಲ್ಲಿ ನಮ್ಮ ಸೈನಿಕರು ಶತ್ರುಗಳ ಹುಟ್ಟಡಗಿಸಿದ್ದನ್ನು, ಕಾಂಗ್ರೆಸ್ಸಿಗರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಭಾರತದ ರಾಜತಾಂತ್ರಿಕ ಶಕ್ತಿ ಮತ್ತು ಧೈರ್ಯವನ್ನು ವಿಶ್ವ ಡೋಕ್ಲಮ್‌ನಲ್ಲಿ ನೀಡಿದೆ. ಭಾರತದ
ಸಾಮರ್ಥ್ಯವನ್ನು ವಿಶ್ವ ನೋಡುತ್ತಿದ್ದರೂ, ಕಾಂಗ್ರೆಸ್‌ನವರು ಡೋಕ್ಲಮ್ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿ¨ªಾರೆ ಎಂದು ಹೇಳಿದರು.