Advertisement

ಮೋದಿ, ಸಿಂಗ್‌ ವಿದೇಶ ಪ್ರವಾಸ‌ ಮಾಹಿತಿಗೆ ನಕಾರ

04:00 AM Jul 16, 2017 | Team Udayavani |

ಲಕ್ನೋ: ಹಾಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಂದಿನ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಕೈಗೊಂಡ ವಿದೇಶ ಪ್ರವಾಸದ ವೇಳೆಯಲ್ಲಿ ಉಂಟಾದ ವಿವಿಧ ಖರ್ಚಿನ ವಿವರದ ಮಾಹಿತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ತಿರಸ್ಕೃತಗೊಂಡಿದೆ. 

Advertisement

ಕೇಳಲಾಗಿರುವ ಮಾಹಿತಿಯಲ್ಲಿ ಸ್ಪಷ್ಟತೆ ಇಲ್ಲ ಎಂಬ ಕಾರಣಕ್ಕಾಗಿ ಅರ್ಜಿಯನ್ನು ಮಾನ್ಯ ಮಾಡಲಾಗಿಲ್ಲ ಎಂದು ಅರ್ಜಿದಾರ ನೂತನ್‌ ಠಾಕೂರ್‌ ಶನಿವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹಾಲಿ ಮತ್ತು ಮಾಜಿ ಪ್ರಧಾನಿಗಳು ಕೈಗೊಂಡ ಪ್ರವಾಸದ ಅವಧಿಯ ವಿದೇಶ ಪ್ರವಾಸದ ವಿವಿಧ ಖರ್ಚಿನ ಬಗ್ಗೆ ಮಾಹಿತಿ ಕೋರಿದ್ದರು. 2010ರ ಜನವರಿಯಿಂದ ಅನ್ವಯವಾಗುವಂತೆ ವಿವರಗಳನ್ನು ನೀಡಬೇಕು ಎಂದು ಕೋರಿಕೊಂಡಿದ್ದರು. ಆದರೆ  ಅದನ್ನು ಪರಿಶೀಲಿಸಿದ ಪ್ರಧಾನಮಂತ್ರಿ ಕಾರ್ಯಾಲಯದ ಪ್ರಧಾನ ಮಾಹಿತಿ ಅಧಿಕಾರಿ ಪ್ರವೀಣ್‌ ಕುಮಾರ್‌ ಕೇಳಲಾಗಿರುವ ಮಾಹಿತಿ ಸ್ಪಷ್ಟವಾಗಿಲ್ಲ ಮತ್ತು ವಿಶಾಲ ವ್ಯಾಪ್ತಿಯದ್ದಾಗಿದೆ ಎಂಬ ಕಾರಣ ನೀಡಿ ಅರ್ಜಿ ತಿರಸ್ಕರಿಸಿದ್ದಾರೆ. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅರ್ಜಿದಾರ ತಿಳಿಸಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next