Advertisement

‘ತಾನಾಜಿ’ವೀಡಿಯೋ: ಮೋದಿ, ಶಾ ಚಿತ್ರ ಹುಟ್ಟಿಸಿದ ವಿವಾದ

10:31 AM Jan 22, 2020 | Hari Prasad |

ಮುಂಬಯಿ: ಬೆಳ್ಳಿ ತೆರೆಯಲ್ಲಿ ಪ್ರದರ್ಶನಗೊಳ್ಳುತ್ತಿರುವ ಹೊಸ ಸಿನೆಮಾ ‘ತಾನಾಜಿ’ಯ ಪ್ರಮುಖ ಪಾತ್ರಗಳ ಹೆಸರಿನಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಇರುವ ರೀತಿಯಲ್ಲಿನ ವೀಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಛತ್ರಪತಿ ಶಿವಾಜಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರನ್ನು ತಾನಾಜಿ ಎಂದು ಚಿತ್ರಿಸಿರುವ ಫೋಟೋಗಳು ಹರಿದಾಡುತ್ತಿವೆ.

Advertisement

ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶಮುಖ್‌ ಇದೊಂದು ವಿಕೃತಿಯಾಗಿದೆ ಎಂದು ಈ ಬೆಳವಣಿಗೆಯನ್ನು ಖಂಡಿಸಿದ್ದಾರೆ. ಮೊದಲ ಬಾರಿಗೆ ಈ ವೀಡಿಯೋವನ್ನು ಟ್ವಿಟರ್‌ ಹ್ಯಾಂಡಲ್‌ “ಪೊಲಿ ಟಿಕಲ್‌ ಕಿಡಾ’ದಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು. ಅದರಲ್ಲಿ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರನ್ನು ಮೊಘಲ್‌ ಚಕ್ರವರ್ತಿಯ ಕೋಟೆ ಕಾವಲುಗಾರ ಉದಯಭಾನು ಸಿಂಗ್‌ ರಾಥೋಡ್‌ ಎಂಬ ಹೆಸರಿನಲ್ಲಿ ಚಿತ್ರಿಸಿದ ವೀಡಿಯೋ ಇದೆ.

ಶಿವಸೇನೆ ವಕ್ತಾರ ಸಂಜಯ ರಾವುತ್‌ ಪ್ರತಿಕ್ರಿಯೆ ನೀಡಿ, ಶಿವಾಜಿಗೆ ಆಗುವ ಅವಮಾನವನ್ನು ಸಹಿಸುವುದಿಲ್ಲ ಎಂದಿದ್ದಾರೆ. ಜ.10 ರಂದು ಶರದ್‌ ಕೇಳ್ಕರ್‌, ಅಜಯದೇವಗನ್‌, ಸೈಫ್ ಅಲಿಖಾನ್‌ ಅಭಿಯನದ ಸಿನೆಮಾ ವಿಶ್ವಾದ್ಯಂತ ಬಿಡುಗಡೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next