ನವದೆಹಲಿ: ಕೃಷಿ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿ ಯಿಂದ ಮೂರು ನೂತನ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಇದು ರೈತರ ಬದುಕನ್ನು ಬದಲಾಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬುಧವಾರ (ಫೆ10) ರಂದು ಲೋಕಸಭೆಯಲ್ಲಿ ರಾಷ್ಟ್ರ ಪತಿ ಭಾಷಣಕ್ಕೆ ಧನ್ಯವಾದ ಅರ್ಪಿಸಿ ಮಾತನಾಡಿರುವ ಅವರು ಕೋವಿಡ್ ಸಮಯದಲ್ಲಿಯೂ ರೈತರ ಏಳಿಗೆಯ ಉದ್ದೇಶದಿಂದ ನೂತನ ಕೃಷಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದು ರೈತರಿಗೆ ಅತೀ ಅವಶ್ಯಕವಾಗಿರುವ ಕಾಯ್ದೆಗಳಾಗಿದ್ದು, ರೈತರ ಬದುಕನ್ನು ಅಭಿವೃದ್ಧಿ ಪಡಿಸಲಿದೆ. ಈ ಕಾಯ್ದೆಗಳಿಂದ ಯಾರಿಗೂ ತೊಂದರೆಯಾಗದು. ಒಂದು ವೇಳೆ ಈ ಕೃಷಿ ಕಾಯ್ದೆಯಿಂದ ರೈತರಿಗೆ ಸಮಸ್ಯೆ ಆದರೆ ಅದನ್ನು ಬದಲಾಯಿಸಲು ಸಿದ್ಧ ಎಂದರು.
ಸದನದಲ್ಲಿ 15 ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ. ಕೆಲವು ದಿನಗಳಲ್ಲಿ ರಾತ್ರಿ 12 ಗಂಟೆಗಳವರೆಗೂ ಚರ್ಚೆ ಮುಂದುವರೆದಿದೆ. ಈ ಸಮಯದಲ್ಲಿ ಮಹಿಳಾ ಸದಸ್ಯರನ್ನು ಒಳಗೊಂಡಂತೆ ಎಲ್ಲಾ ಸದಸ್ಯರೂ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ಎಂದು ತಮ್ಮ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ:ಕರ್ನಾಟಕವನ್ನು ‘ಅಗ್ರಿ ಸ್ಟಾರ್ಟಪ್ ಹಬ್’ ಆಗಿಸುವ ಗುರಿಯಿದೆ: ಬಿ.ಸಿ.ಪಾಟೀಲ್
ಕೋವಿಡ್ ನಂತರ ಹೊಸ ಜಗತ್ತು ನಿರ್ಮಾಣ ಗೊಂಡಿದೆ. ಕೋವಿಡ್ ಸಮಯದಲ್ಲಿ ದೇವರು ನಮ್ಮ ಸಹಾಯಕ್ಕೆ ಬಂದಿದ್ದಾರೆ. ಅವರು ವೈದ್ಯರು, ನರ್ಸ್ ಗಳನ್ನು ಒಳಗೊಂಡಂತೆ ಅಂಬ್ಯುಲೆನ್ಸ್ ಚಾಲಕರ ರೂಪದಲ್ಲಿ ಆಗಮಿಸಿ ನಮ್ಮನ್ನು ರಕ್ಷಿಸಿದ್ದಾರೆ ಎಂದಿರುವ ಪ್ರಧಾನಿ ಮೋದಿ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಭಾರತ ಬಲಿಷ್ಟ ದೇಶವಾಗಿ ಹೊರಹೊಮ್ಮಬೇಕಿದೆ ಎಂದು ನುಡಿದರು.