Advertisement

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

04:07 AM Aug 10, 2020 | Hari Prasad |

ಹೊಸದಿಲ್ಲಿ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ಜನರ ಅನುರಾಗ, ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಿದೆ.

Advertisement

ಹಾಗಾಗಿ, ಮುಂದಿನ ಪ್ರಧಾನಿಯಾಗಿ ಪುನಃ ನರೇಂದ್ರ ಮೋದಿಯವರನ್ನೇ ನೋಡಲು ಅನೇಕ ಜನರು ಇಷ್ಟಪಡುತ್ತಿದ್ದಾರೆಂದು ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಮೂಡ್‌ ಆಫ್ ದ ನೇಷನ್‌ (ಎಂಒಟಿಎನ್‌) ಹೆಸರಿನ ಸಮೀಕ್ಷಾ ವರದಿ ತಿಳಿಸಿದೆ.

ಇತ್ತೀಚೆಗೆ ನಡೆಸಲಾದ ಈ ಸಮೀಕ್ಷೆಯಲ್ಲಿ ಹೆಚ್ಚಿನವರು ಮೋದಿಯವರೇ ಮುಂದಿನ ಪ್ರಧಾನಿಯಾಗಲಿ ಎಂದು ಬಯಸಿದ್ದರೆ, ಕೆಲವರು ರಾಹುಲ್‌ ಗಾಂಧಿಯವರು ಮುಂದಿನ ಪ್ರಧಾನಿಯಾಗಲಿ ಎಂದಿದ್ದಾರೆ.

ಮತ್ತೂ ಕೆಲವರು ಸೋನಿಯಾ ಗಾಂಧಿಯವರೇ ಪ್ರಧಾನಿ ಹುದ್ದೆ ಅಲಂಕರಿಸುವ ಬಗ್ಗೆ ಒಲವು ತೋರಿದ್ದಾರೆ. ಆದರೆ, ಮೋದಿಯವರನ್ನು ಪ್ರಧಾನಿಯನ್ನಾಗಿ ನೋಡುವವರ ಸಂಖ್ಯೆಗೂ ಮತ್ತು ರಾಹುಲ್‌ ಅಥವಾ ಸೋನಿಯಾರನ್ನು ಪ್ರಧಾನಿಯಾಗಿ ನೋಡುವವರ ಸಂಖ್ಯೆಗೂ ಭಾರೀ ವ್ಯತ್ಯಾಸವಿದೆ.

ಅರ್ಥಾತ್‌, ಮೋದಿಯವರನ್ನು ಪ್ರಧಾನಿ ಸ್ಥಾನದಲ್ಲಿ ಕಾಣಲು ಶೇ. 66ರಷ್ಟು ಜನರು ಒಲವು ತೋರಿದ್ದರೆ, ರಾಹುಲ್‌ ಅವರನ್ನು ಆ ಸ್ಥಾನದಲ್ಲಿ ನೋಡಲು ಕೇವಲ ಶೇ. 8ರಷ್ಟು ಜನ ಹಾಗೂ ಸೋನಿಯಾ ಅವರನ್ನು ಪ್ರಧಾನಿಯನ್ನಾಗಿ ನೋಡಲು ಕೇವಲ ಶೇ. 6ರಷ್ಟು ಜನರು ಇಷ್ಟಪಟ್ಟಿದ್ದಾರೆ. ಹಾಗಾಗಿ, ಸಮೀಕ್ಷಾ ವರದಿಯಲ್ಲಿ ಈ ಮೂವರೇ ಟಾಪ್‌ ಮೂರು ಸ್ಥಾನಗಳಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next