Advertisement

ಹೈದರಾಬಾದ್‌ ನಿಜಾಮನಿಗಿದ್ದ ಕಳಕಳಿ ಮೋದಿ, ಸಿದ್ದುಗಿಲ್ಲ

07:10 AM Aug 17, 2017 | Team Udayavani |

ರಾಮನಗರ: ಸ್ವಾತಂತ್ರ್ಯಪೂರ್ವದಲ್ಲಿ ಹೈದರಾಬಾದ್‌ ಪ್ರಾಂತ್ಯದಲ್ಲಿ ನಿರಂತರ ಎರಡು ವರ್ಷಗಳ ಕಾಲ ಬರಗಾಲ ಸಂಭವಿಸಿದರೆ ಅಲ್ಲಿನ ದೊರೆ ನಿಜಾಮ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡುತ್ತಿದ್ದ. ತೆರಿಗೆಯನ್ನು ಕಟ್ಟಿಸಿಕೊಳ್ಳುತ್ತಿರಲಿಲ್ಲ. ಇಷ್ಟು ಕನಿಷ್ಠ ಜ್ಞಾನ, ಕಳಕಳಿ ಕೂಡ ಪ್ರಧಾನಿ ನರೇಂದ್ರ ಮೋದಿಗಾಗಲಿ, ಮುಖ್ಯಮಂತ್ರಿ ಸಿದ್ದರಾಮಯ್ಯಗಾಗಲಿ ಇಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಹೊರವಲಯದಲ್ಲಿರುವ ಜಾನಪದ ಲೋಕದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದ ನಿಯಮಗಳು ಸಹ ಇವನ್ನೇ ಹೇಳುತ್ತವೆ. ನಿರಂತರ ಮೂರು ವರ್ಷಗಳ ಕಾಲ ಬರಗಾಲವಿದ್ದರೆ, ರೈತನ ನೆರವಿಗೆ ಬರಬೇಕಾಗಿದೆ. ಆದರೆ ಯಾವ ಬ್ಯಾಂಕು, ಸರ್ಕಾರಗಳಾಗಲಿ ರೈತರ ನೆರವಿಗೆ ಧಾವಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಗ್ರಾಮೀಣ ಭಾಗಗಳಲ್ಲಿ ರೈತ ಮಹಿಳೆಯರು ಸಿOಉà ಶಕ್ತಿ ಗುಂಪುಗಳನ್ನು ರಚಿಸಿಕೊಂಡಿದ್ದಾರೆ. ಈ ಗುಂಪುಗಳಿಗೆ ಅಲ್ಪ ಪ್ರಮಾಣದ ಸಹಾಯಧನ ಕೊಟ್ಟ ಸರ್ಕಾರ, ಗುಂಪಿನ ಸದಸ್ಯರು ತಮ್ಮಲ್ಲೇ ಸಾಲ ಮಾಡಿಕೊಂಡು, ಬಡಿದಾಡಿಕೊಳ್ಳುವಂತೆ ಮಾಡಿದೆ. ಗುಂಪುಗಳಲ್ಲಿ ಮಾಡಿರುವ ಸಾಲ ಕೂಡ ಕೃಷಿಗಾಗಿಯೇ. ಹೀಗಾಗಿ, ಗ್ರಾಮೀಣ ಭಾಗದ ರೈತ ಮಹಿಳೆಯರ ಗುಂಪುಗಳ ಸಾಲವನ್ನು ಸಹ ಮನ್ನಾ ಮಾಡಬೇಕಾಗಿದೆ ಎಂದು ಅವರು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next