Advertisement

ಖೇಲೋ ಇಂಡಿಯಾಗೆ ಮೋದಿ ಚಾಲನೆ

06:20 AM Feb 01, 2018 | Team Udayavani |

ಹೊಸದಿಲ್ಲಿ: ಭವಿಷ್ಯದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಆರ್ಥಿಕ ನೆರವು ನೀಡಿ, ಉನ್ನತ ತರಬೇತಿ ನೀಡುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ “ಖೇಲೋ ಇಂಡಿಯಾ ಸ್ಕೂಲ್‌ ಗೇಮ್ಸ್‌’ಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

Advertisement

ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಉತ್ತಮ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡಲಾಗುವುದು. ಅಗತ್ಯ ಬಿದ್ದರೆ ವಿದೇಶಕ್ಕೆ ಕಳುಹಿಸಿ ಉನ್ನತ ತರಬೇತಿ ಕೊಡಿಸಲಾಗುವುದು. ಇನ್ನು ಮುಂದೆ ಬಡತನದ ಕಾರಣಕ್ಕೆ ಕ್ರೀಡಾಪಟುಗಳು ಕ್ರೀಡೆಯಿಂದ ಹಿಂದೆ ಸರಿಯದಂತೆ ಈ ಯೋಜನೆ ನೋಡಿಕೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಆ್ಯತ್ಲಿಟ್‌ಗಳಿಗೆ ವಾರ್ಷಿಕ 5 ಲಕ್ಷ ರೂ.

17 ವರ್ಷದೊಳಗಿನ ಕ್ರೀಡಾಪಟುಗಳಿಗೆ ಶಾಲಾ ಮಟ್ಟದ ಕ್ರೀಡಾಕೂಟವನ್ನು ನಡೆಸಲಾಗುತ್ತದೆ. ಒಟ್ಟು 16 ಕ್ರೀಡೆಯಲ್ಲಿ ದೇಶಾದ್ಯಂತ ಒಂದು ಸಾವಿರ ಕ್ರೀಡಾಪ್ರತಿಭೆಗಳನ್ನು ಗುರುತಿಸಲಾಗುತ್ತದೆ. ಈ ಕ್ರೀಡಾಪಟುಗಳಿಗೆ ವಾರ್ಷಿಕ 5 ಲಕ್ಷ ರೂ. ಶಿಷ್ಯ ವೇತನ ನೀಡಲಾಗುತ್ತದೆ. ನುರಿತ ಕೋಚ್‌ಗಳ ಮೂಲಕ ತರಬೇತಿ ನೀಡಲಾಗುತ್ತದೆ. ಮುಂಬರುವ ಒಲಿಂಪಿಕ್ಸ್‌ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತ ಉನ್ನತ ಸಾಧನೆ ಮಾಡಬೇಕು ಅನ್ನುವ ಉದ್ದೇಶದಿಂದ ಈ ಯೋಜನೆ ಜಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next