Advertisement

ಮೋದಿ ದುರಾಡಳಿತದಿಂದ ಜನ ಬೇಸತ್ತಿದ್ದಾರೆ: ಭರತ್‌

09:56 AM Apr 14, 2019 | Team Udayavani |

ಸುಳ್ಯ: ಕಾಂಗ್ರೆಸ್‌ ಕಾರ್ಯಕರ್ತರು ಮನೆ-ಮನೆ ಭೇಟಿ ನೀಡುವ ವೇಳೆ ಮೋದಿ ಸರಕಾರದ ದುರಾಡಳಿತ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ. ಇಂತಹ ಜನ ವಿರೋಧಿ ಆಡಳಿತವನ್ನು ಕಿತ್ತೂಗೆಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಬಾರಿ ಮೋದಿ ಸರಕಾರ ಪತನಗೊಳ್ಳುವುದು ನಿಶ್ಚಿತ ಎಂದು ಕೆಪಿಸಿಸಿ ಕಾರ್ಯದರ್ಶಿ ಭರತ್‌ ಮುಂಡೋಡಿ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಟು ಬ್ಯಾನ್‌, ಜಿಎಸ್‌ಟಿ ಮೊದಲಾದ ನೀತಿ ನಿಯಮಗಳಿಂದ ಬಡವರು ಬೀದಿಗೆ ಬೀಳುವಂತಾದ ವಿಚಾರವಾಗಿ ಜನರು ಅಸಹನೆ ವ್ಯಕ್ತಪಡಿಸಿದ್ದಾರೆ. ಪ್ರಚಾರದ ಸಂದರ್ಭ ಕಾಂಗ್ರೆಸ್‌ ಪರ ಸ್ಪಂದನೆ ದೊರೆತಿದೆ. ದ.ಕ. ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿ ಭರ್ಜರಿ ಗೆಲುವು ದಾಖಲಿಸಲಿದ್ದಾರೆ ಎಂದು ಹೇಳಿದರು.

ನಳಿನ್‌ ಕುಮಾರ್‌ ಕಟೀಲು ವಿಫಲ ಸಂಸದ ಅನ್ನುವುದು ಜನತೆಗೆ ಖಾತರಿ ಆಗಿದೆ. ಬಿಎಸ್ಸೆನ್ನೆಲ್‌ ದುಃಸ್ಥಿತಿ ಅದಕ್ಕೆ ಒಂದು ಉದಾಹರಣೆ. ಹತ್ತು ವರ್ಷಗಳಲ್ಲಿ ಜಿಲ್ಲೆಗೆ ಮೂಲಸೌಕರ್ಯ ಒದಗಿಸದ ನಳಿನ್‌ ಅವರನ್ನು ಬದಲಾಯಿಸಿ, ವಿದ್ಯಾವಂತ, ಲೋಕಸಭೆಯಲ್ಲಿ ಧ್ವನಿ ಎತ್ತಬಲ್ಲ ಸಮರ್ಥ ಅಭ್ಯರ್ಥಿ ಮಿಥುನ್‌ ರೈ ಅವರನ್ನು ಗೆಲ್ಲಿಸಲು ಜನರು ತೀರ್ಮಾನಿಸಿದ್ದಾರೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌. ಜಯಪ್ರಕಾಶ್‌ ರೈ ಮಾತನಾಡಿ, ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರು ಯಾರೆಂದು ಗೊತ್ತಿದ್ದರೂ ಬಿಜೆಪಿ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಕಳ್ಳರಿಗೆ ರಕ್ಷಣೆ ನೀಡುವ ಈ ಪಕ್ಷದ ಧೋರಣೆ, ಭ್ರಷ್ಟಚಾರವನ್ನು ಸಮರ್ಥಿಸುವ ಮನೋಭಾವನೆಗೆ ಉದಾಹರಣೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ, ಕೆಪಿಸಿಸಿ ಸದಸ್ಯ ಡಾ| ರಘು, ಎಸ್‌. ಸಂಶುದ್ದೀನ್‌, ಗೋಕುಲ್‌ದಾಸ್‌ ಕೆ., ಜೆಡಿಎಸ್‌ ಮುಖಂಡ ಜಾಕೆ ಮಾಧವ ಗೌಡ, ಜೂಲಿಯಾನಾ ಕ್ರಾಸ್ತಾ, ಓವಿನ್‌ ಪಿಂಟೋ, ಬೀರಾ ಮೊದೀನ್‌, ವಿನೂಪ್‌ ಮಲ್ಲಾರ, ಸತೀಶ್‌ ಕೆ., ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next