ಕುಂದಾಪುರ: ಈವರೆಗಿನ ಸರಕಾರ ಮಾಡದ ಸೆ„ನಿಕರಿಗೆ ಸ್ಮಾರಕ ನಿರ್ಮಿಸುವ ಮೂಲಕ, ಒನ್ ರ್‍ಯಾಂಕ್ ಒನ್ ಪೆನÒನ್ ಅನುಷ್ಠಾನ ಮಾಡುವ ಮೂಲಕ ಚುನಾವಣೆಗೆ ಮೊದಲು ಕೊಟ್ಟ ಮಾತು ಉಳಿಸಿಕೊಂಡವರು ಪ್ರಧಾನಿ ಮೋದಿ ಎಂದು ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಇಲ್ಲಿನ ಕುಂದೇಶ್ವರ ದ್ವಾರದ ಎದುರು ಸೋಮವಾರ ಸಂಜೆ ನಡೆದ ಟೀಮ್ ಮೋದಿ ಕುಂದಾಪುರ ವತಿಯಿಂದ ನಡೆದ ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಕಿಸ್ಥಾನದ ಜತೆ ನೇರ ಯುದ್ಧ ಮಾಡಬೇಕಾದ ಅಗತ್ಯ ಇಲ್ಲ. ಬೇರೆ ಬೇರೆ ಸರಕಾರಿ ಮಾನ್ಯತೆ, ತೆರಿಗೆ ಹೇರಿಕೆ ಸೇರಿದಂತೆ ವಿಧಾನಗಳಿವೆ. ಆದ್ದರಿಂದ ಪಾಕ್ ನಮ್ಮ ಮೇಲೆ ಬಾಂಬ್ ಬಿಡಿ ಟೊಮೆಟೋ ಕೂಡಾ ಎಸೆಯದಂತಾಗಿದೆ. ಅಲ್ಲಿನ ಹಣಕಾಸು ಸ್ಥಿತಿ ತೀರಾ ಹದಗೆಟ್ಟಿದೆ. ದಿವಾಳಿ ಅಂಚಿನಲ್ಲಿದೆ. ಅದನ್ನು ಜಗತ್ತಿನ ಯಾವುದೇ ರಾಷ್ಟ್ರ ಬೆಂಬಲಿಸುತ್ತಿಲ್ಲ. ಅಂತಹ ರಾಜತಾಂತ್ರಿಕ ನೀತಿ ಈಗಿನ ಸರಕಾರದ್ದು. ಪಾಕ್ ಈಗ ಭಾರತಕ್ಕೆ ಹೆದರುತ್ತಿದೆ. ದಾಳಿ ಮಾಡಿದ ಜೈಶೆ ಮುಖ್ಯಸ್ಥ ಸ್ವತಃ ಹೆದರಿದ್ದಾನೆ. ಚಾಣಾಕ್ಷ ರಾಜತಾಂತ್ರಿಕ ನಡೆ ಮೂಲಕ ನಮ್ಮ ದೇಶದ ವರ್ಚಸ್ಸು ಹೆಚ್ಚುವಂತೆ ಮಾಡಿದ್ದಾರೆ ಎಂದರು.
ವಾಯುಸೇನೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ರಾಮಣ್ಣ ಶೆಟ್ಟಿ ಹೊಸ್ಮಠ ಅವರು ಸಮ್ಮಾನಕ್ಕೆ ಉತ್ತರಿಸಿ, ಮೋದಿಯವರಿಂದಾಗಿ ಇಂದು ನಿವೃತ್ತ ಯೋಧರು ಕೂಡಾ ಉತ್ತಮ ನಿವೃತ್ತಿ ವೇತನ ಪಡೆವಂತಾಗಿದೆ. ಸೇನ ಸೇರುವ ಯೋಧರಿಗೆ ಕೂಡಾ ಈಗ ಉತ್ತಮ ವೇತನ ಇದೆ. ವಿದೇಶಗಳು ಕೂಡಾ ಮೋದಿಯವರನ್ನು ಹಾಡಿ ಹೊಗಳುತ್ತವೆ. ನಮ್ಮಲ್ಲಿ ಕೆಲವರು ಮೋದಿಯವರನ್ನು ಟೀಕಿಸುತ್ತಿದ್ದು ಅವರಿಗೆ ಯೋಗ್ಯತೆ ಇಲ್ಲ. ಆದ್ದರಿಂದ ಮೋದಿ ಇನ್ನೊಮ್ಮೆ ಅನಿವಾರ್ಯ ಎಂದರು.
ಸಮ್ಮಾನದ ವೇಳೆ ಅನಂತಕೃಷ್ಣ ಕೊಡ್ಗಿ ಉಪಸ್ಥಿತರಿದ್ದರು.ಟೀಂ ಮೋದಿ ಸಂಚಾಲಕ ವಿನೋದ್‌ರಾಜ್ ಪ್ರಸ್ತಾವಿಸಿದರು. ಶಂಕರ ಅಂಕದಕಟ್ಟೆ ಸ್ವಾಗತಿಸಿದರು. ಸತೀಶ್ ಪೂಜಾರಿ ನಿರ್ವಹಿಸಿ, ಸುನಿಲ್ ಶೆಟ್ಟಿ ಹೇರಿಕುದ್ರು ವಂದಿಸಿದರು.