Advertisement

ಸಂಘಪರಿವಾರಕ್ಕೆ ಇಷ್ಟವಾಗಲ್ಲ, ಆದರೆ ನನ್ನ ಪಾಲಿಗೆ ಭಾರತವೆಂದರೆ…

12:57 PM Jul 29, 2017 | Team Udayavani |

ಜಮ್ಮು-ಕಾಶ್ಮೀರ: ನನ್ನ ಪಾಲಿಗೆ ಭಾರತವೆಂದರೆ ಅದು ಇಂದಿರಾ ಗಾಂಧಿ ಎಂಬುದಾಗಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶುಕ್ರವಾರ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ಕಾಶ್ಮೀರದಲ್ಲಿ  ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ನೆಹರೂ ಮತ್ತು ಗಾಂಧಿ ಕುಟುಂಬವನ್ನು ಹೀಗಳೆಯುತ್ತಿರುವ ಸಂಘ ಪರಿವಾರವನ್ನು ಉಲ್ಲೇಖಿಸಿದ ಅವರು, ನನಗೆ ಭಾರತವೆಂದರೆ ಇಂದಿರಾಗಾಂಧಿ. ನಾನು ಪ್ರಾಯಪ್ರಬುದ್ಧಳಾಗುತ್ತಿದ್ದ ಕಾಲದಲ್ಲಿ ಇಂದಿರಾಗಾಂಧಿ ದೇಶವನ್ನು ಪ್ರತಿನಿಧಿಸುತ್ತಿದ್ದರು. ಬಹುತೇಕ ಕೆಲವು ಜನರು ಇದನ್ನು ಇಷ್ಟಪಡುವುದಿಲ್ಲ, ಆದರೆ ಭಾರತವೆಂದರೆ ಇಂದಿರಾಗಾಂಧಿ ಎಂಬುದಾಗಿ ಹೇಳಿದರು.

ಜಮ್ಮು-ಕಾಶ್ಮೀರ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಗೆಹರಿಸಲಿದ್ದಾರೆ ಎಂದು ಈ ಸಂದರ್ಭದಲ್ಲಿ ಮುಫ್ತಿ ವಿಶ್ವಾಸ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಪ್ರಧಾನಿ ಮೋದಿ ಅವರನ್ನು ಹೊಗಳಿದ ಅವರು, ಮೋದಿ ವರ್ತಮಾನದ ಮಹತ್ವದ ವ್ಯಕ್ತಿ ಎಂದು ಬಣ್ಣಿಸಿದರು. 

ಮೋದಿ ಅವರು ಮುಂದೆ ಇತಿಹಾಸವನ್ನು ನಿರ್ಮಿಸಲಿದ್ದಾರೆ. ಅವರ ನಾಯಕತ್ವ ಭಾರತಕ್ಕೆ ಅತ್ಯಂತ ಅಗತ್ಯವಾಗಿದೆ. ಅವರೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಕಾಶ್ಮೀರದ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next