ಹೊಸದಿಲ್ಲಿ: ಹಾಲಿ ಪ್ರಧಾನಿ ನರೇಂದ್ರ ಮೋದಿ ದೇಶ ಇದುವರೆಗೆ ಕಂಡ ಅತ್ಯುತ್ತಮ ಪ್ರಧಾನಿ ಎಂದು ಶೇ.37 ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.14ರಷ್ಟು ಮಂದಿ ಇಂದಿರಾ ಗಾಂಧಿ ಅತ್ಯುತ್ತಮ ಪ್ರಧಾನಿ ಎಂದು ಹೇಳಿ ಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ‘ಇಂಡಿಯಾ ಟುಡೇ ಗ್ರೂಪ್’ ನಡೆಸಿದ ‘ಮೂಡ್ ಆಫ್ ದ ನೇಶನ್’ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನು ಬಿಜೆಪಿಯ ಸಂಸ್ಥಾಪಕರಲ್ಲಿ ಒಬ್ಬರಾಗಿ ರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ 3ನೇ ಸ್ಥಾನ ಲಭಿಸಿದೆ. ಶೇ.11 ಮಂದಿ ಅವರು ಉತ್ತಮ ಪ್ರಧಾನಿ ಯಾಗಿದ್ದರು ಎಂದು ಹೇಳಿದ್ದಾರೆ. ದೇಶದ ಮೊದಲ ಪ್ರಧಾನಿಯಾಗಿದ್ದ ಜವಾಹರ್‌ಲಾಲ್ ನೆಹರೂ ಅವರಿಗೆ ಕೇವಲ ಶೇ.9ರಷ್ಟು ಮಂದಿ ಉತ್ತಮ ಪ್ರಧಾನಿ ಎಂದು ಹೇಳಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ರಾಜೀವ್ ಗಾಂಧಿಯವರಿಗೆ ತಲಾ ಶೇ.6ರಷ್ಟು ಮತಗಳು ಬಂದಿವೆ. ಡಾ.ಮನಮೋಹನ್ ಸಿಂಗ್ ಮತ್ತು ಗುಲ್ಜಾರಿ ಲಾಲ್ ನಂದ ಅವರಿಗೆ ಕ್ರಮವಾಗಿ ಶೇ.5 ಮತ್ತು ಶೇ.3 ಮತಗಳು ಪ್ರಾಪ್ತಿಯಾಗಿವೆ.
ಈ ಸಮೀಕ್ಷೆಯನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡುವ ನಿರ್ಧಾರ ಪ್ರಕಟಿಸುವುದಕ್ಕಿಂತ ಮೊದಲು ನಡೆಸಲಾಗಿತ್ತು. ಒಂದು ವೇಳೆ ಅದು ಪ್ರಕಟವಾದ ಬಳಿಕ ಸಮೀಕ್ಷೆ ನಡೆಸಿದ್ದರೆ ಈಗಿನ ದ್ದಕ್ಕಿಂತ ಹೆಚ್ಚಿನ ಮತ ಮೋದಿಯವರಿಗೆ ಪ್ರಾಪ್ತ ವಾಗುತ್ತಿತ್ತು ಎಂದು ಹೇಳಿಕೊಳ್ಳಲಾಗಿದೆ.
ಇಂದಿರಾರನ್ನು ಮೀರಿಸಿದ್ದು ಹೇಗೆ?: 2016ರ ಫೆಬ್ರವರಿಯಲ್ಲಿ ನಡೆಸಲಾಗಿದ್ದ ‘ಮೂಡ್ ಆಫ್ ದ ನೇಶನ್’ ಸಮೀಕ್ಷೆಯಲ್ಲಿ ಇಂದಿರಾ ಗಾಂಧಿ ಯವರೇ ದೇಶದ ಅತ್ಯುತ್ತಮ ಪ್ರಧಾನಿ ಎಂದು ಫಲಿತಾಂಶ ಪ್ರಕಟವಾಗಿತ್ತು. ಇಂದಿರಾ ಅವರ ಜನಪ್ರಿಯತೆಗೆ ಹೋಲಿಕೆ ಮಾಡಿದ್ದರೆ, ಆ ವರ್ಷ ಮೋದಿಯವರಿಗೆ ಶೇ.14ರಷ್ಟು ಮತಗಳು ಪ್ರಾಪ್ತವಾಗಿದ್ದವು. ಈ ಸಮೀಕ್ಷೆಯ ಬಳಿಕ ನರೇಂದ್ರ ಮೋದಿಯವರ ಜನಪ್ರಿಯತೆ ಹೆಚ್ಚು ತ್ತಲೇ ಸಾಗಿದೆ. 2017ರ ಆಗಸ್ಟ್‌ನಲ್ಲಿ ಶೇ.33 ಮಂದಿ ದೇಶವಾಸಿಗಳು ಅವರ ನಾಯಕತ್ವ ಮೆಚ್ಚಿ ಕೊಂಡಿದ್ದರು. ಇಂದಿರಾ ಅವರ ಮೆಚ್ಚುಗೆಯ ಪ್ರಮಾಣ ಶೇ.17ಕ್ಕೆ ಕುಸಿದಿತ್ತು. ಕರ್ನಾಟಕ ಸಹಿತ 19 ರಾಜ್ಯಗಳ 12, 126 ಮಂದಿಯನ್ನು ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿತ್ತು ಎಂದು ಸಂಸ್ಥೆ ಹೇಳಿಕೊಂಡಿದೆ.
65% ಪ್ರಧಾನಿ ಮೋದಿಯವರು 5 ವರ್ಷಗಳೊಳಗಾಗಿ ಕಾಶ್ಮೀರ ವಿವಾದ ಬಗೆಹರಿ ಸುತ್ತಾರೆ ಎಂದವರು.
57% ಸಂವಿಧಾನದ 370ನೇ ವಿಧಿ ರದ್ದು ನಿರ್ಧಾರವನ್ನು ಸ್ವಾಗತಿಸಿದವರು.
26% ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯನ್ನು ವಿರೋಧಿಸಿದವರು
ಯಾರಿಗೆಷ್ಟು ಮತ?
37% ನರೇಂದ್ರ ಮೋದಿ
14% ಇಂದಿರಾ ಗಾಂಧಿ
11% ವಾಜಪೇಯಿ
11% ವಾಜಪೇಯಿ
09% ನೆಹರೂ
05% ಮನಮೋಹನ್ ಸಿಂಗ್