Advertisement

ಇಸ್ರೇಲ್: ಪ್ರಥಮ ವಿಶ್ವಯುದ್ಧದ ಭಾರತೀಯ ಹುತಾತ್ಮ ಯೋಧರಿಗೆ ಮೋದಿ ನಮನ

03:28 PM Jul 06, 2017 | Sharanya Alva |

ಟೆಲ್ ಅವೀವ್: ಇಸ್ರೇಲ್ ಪ್ರಧಾನಿ ಮೋದಿ ಅವರು ಗುರುವಾರ ಹೈಫಾ (ಮೊದಲನೇ ವಿಶ್ವ ಯುದ್ಧ) ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.

Advertisement

ಪ್ರಥಮ ವಿಶ್ವಯುದ್ಧದಲ್ಲಿ ಸುಮಾರು 44 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.  ಹೈಫಾ ಇಸ್ರೇಲ್ ನ ಉತ್ತರಭಾಗದಲ್ಲಿರುವ ಬಂದರು ನಗರಿಯಾಗಿದೆ. ಹೈಫಾದಲ್ಲಿ ಭಾರತೀಯ ಹುತಾತ್ಮ ಯೋಧರ ಸ್ಮಾರಕ ನಿರ್ಮಿಸಲಾಗಿದೆ.

ಇಸ್ರೇಲ್ ಪ್ರಧಾನಿ ನೆತನ್ಯಾಹು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಥ್ ನೀಡಿದ್ದರು. ಪ್ರಥಮ ವಿಶ್ವಯುದ್ಧದ ಹೀರೋ ದಲ್ಪತ್ ಸಿಂಗ್ ಅವರ ವೀರಗಾಥೆಯ ಬರಹವನ್ನೊಳಗೊಂಡ ವಿವರವನ್ನು ಉಭಯ ನಾಯಕರು ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು. 

1918ರ ಪ್ರಥಮ ಜಾಗತಿಕ ಯುದ್ಧದಲ್ಲಿ ಬಂದರು ನಗರಿ ಹೈಫಾವನ್ನು ಸ್ವತಂತ್ರಗೊಳಿಸುವ ಹೋರಾಟದಲ್ಲಿ ಮೇಜರ್ ದಲ್ಪತ್ ಸಿಂಗ್ ಶೇಖಾವತ್ ಅವರ ಪಾತ್ರ ಅವಿಸ್ಮರಣೀಯವಾದದ್ದು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next