ದಾವೋಸ್: ಭಾರತ ಟೆಕ್ನಾಲಜಿ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿದೆ. 1997ರ ಮಟ್ಟಿಗೆ ತಂತ್ರಜ್ಞಾನ ಅಷ್ಟರ ಮಟ್ಟಿಗೆ ಬೆಳೆದಿರಲಿಲ್ಲ. ಈಗ ಚಿತ್ರಣ ಬದಲಾಗಿದೆ. 1997ರ ನಂತರ ಆರು ಪಟ್ಟು ಭಾರತದ ಜಿಡಿಪಿ ಹೆಚ್ಚಾಗಿದೆ
ಮಂಗಳವಾರ ಸ್ವಿಡ್ಜರ್ ಲ್ಯಾಂಡ್ ನ ದಾವೋಸ್ ನಲ್ಲಿ 48ನೇ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರು, ಸಿಇಒಗಳನ್ನು ಉದ್ದೇಶಿಸಿ ಭಾಷಣ ಮಾಡಿದರು. ಮೋದಿ ಅವರು ಹಿಂದಿಯಲ್ಲಿ ಭಾಷಣ ಮಾಡಿದರು. ಭಾಷಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರನ್ನು ಸ್ಮರಿಸಿದರು.
ದಾವೋಸ್ ಇಂದು ವಿಶ್ವಮಟ್ಟದಲ್ಲಿ ಹೆಚ್ಚು ಪ್ರಸಿದ್ಧಿಯಾಗಿರುವ ನಗರ. ಆರ್ಥಿಕ ಭದ್ರತೆ, ರಾಜಕೀಯ ಸಮತೋಲನ ಕಾಯ್ದುಕೊಳ್ಳುವಲ್ಲಿ ಸ್ವಿಡ್ಜರ್ ಲೆಂಡ್ ಯಶಸ್ವಿಯಾಗಿದೆ ಎಂದರು. ಭಾರತ ವೇಗವಾಗಿ ಬೆಳೆಯುವತ್ತಿರುವ ದೇಶವಾಗಿದೆ, ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಬಂಡವಾಳ ಹೂಡುವಂತೆ ಮನವಿ ಮಾಡಿಕೊಂಡರು.
ರಾಷ್ಟ್ರಗಳ ನಡುವೆ ಇರುವ ಬಿರುಕುಗಳನ್ನು ಕಡಿಮೆ ಮಾಡಲು ನಾವೆಲ್ಲ ಪ್ರಯತ್ನಿಸಬೇಕು. ನಮ್ಮದು ವಸುದೈವ ಕುಟುಂಬಕಂ ಇಡೀ ಜಗತ್ತು ಒಂದು ಕುಟುಂಬವಿದ್ದಂತೆ. ಈ ಜಗತ್ತೇ ಒಂದು ಕುಟುಂಬ. ನಾವೆಲ್ಲಾ ಸಹೋದರರು, ಸಹೋದರಿಯರಂತೆ ಬದುಕಬೇಕಾಗಿದೆ ಎಂದು ಹೇಳಿದರು.
ತಂತ್ರಜ್ಞಾನ ಜೀವನ ಮಟ್ಟವನ್ನು ಬದಲಾಯಿಸುತ್ತಿದೆ. ತಂತ್ರಜ್ಞಾನ ಆಧಾರಿತ ಸಂಶೋಧನೆಗಳು ಹೆಚ್ಚಾಗಬೇಕಾಗಿದೆ. ಸೈಬರ್ ಸೆಕ್ಯೂರಿಟಿ ಈಗಿನ ಅತಿ ದೊಡ್ಡ ಸವಾಲಾಗಿದೆ. ಎಲ್ಲರೂ ಒಟ್ಟಿಗೆ ಸೇರಿ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ಮೋದಿ ವಿಶ್ಲೇಷಿಸಿದರು.
*ವಿಶ್ವದ ಎದುರು ಈಗ ಶಾಂತಿ, ಸುವ್ಯವಸ್ಥೆ, ಸುರಕ್ಷತೆಯ ಸವಾಲು
*ಜಾಗತಿಕ ತಾಪಮಾನ ತಡೆಗಟ್ಟುವುದು ಅತೀ ದೊಡ್ಡ ಸವಾಲು
*ಎಲ್ಲರೂ ಭೂಮಿಯ ಮಕ್ಕಳು
*ವಿಶ್ವದ ಮುಂದಿರುವ 2ನೇ ಅತಿ ದೊಡ್ಡ ಸಂಕಷ್ಟ ಭಯೋತ್ಪಾದನೆ
*ಇಂದು ನಾವು ಕಠಿಣ ನೆಟ್ ವರ್ಕ್ ನಲ್ಲಿ ಬದುಕುತ್ತಿದ್ದೇವೆ
*ತಂತ್ರಜ್ಞಾನದಿಂದ ಇಂದಿನ ಜೀವನದ ಗತಿ ಬದಲಾಗಿದೆ
* ವಿಶ್ವದ ಎದುರು ಈಗ ಮೂರು ದೊಡ್ಡ ಅಪಾಯವಿದೆ