Advertisement

ದಾವೋಸ್‌ನಲ್ಲಿ ಮೋದಿ ಮೋಡಿ

06:00 AM Jan 22, 2018 | Team Udayavani |

ಹೊಸದಿಲ್ಲಿ: ಭಾರತದ ಆರ್ಥಿಕ ಸುಸ್ಥಿ ರತೆಯನ್ನು ವಿಶ್ವಮಟ್ಟದಲ್ಲಿ ಪ್ರಚುರಗೊಳಿಸಲು ಸ್ವಿಟ್ಸರ್ಲೆಂಡ್‌ನ‌ ದಾವೋಸ್‌ನಲ್ಲಿ ಆರಂಭವಾಗ ಲಿರುವ ವಿಶ್ವ ಆರ್ಥಿಕ ವೇದಿಕೆಯ 48ನೇ ವಾರ್ಷಿಕ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ.

Advertisement

1997ರಲ್ಲಿ ಆಗಿನ ಪ್ರಧಾನಿ ಎಚ್‌.ಡಿ. ದೇವೇ ಗೌಡರ ಬಳಿಕ ಈ ಸಮ್ಮೇಳನಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊದಲ ಭಾಷಣದ ಗೌರವ ಸಿಕ್ಕಿದೆ. ಈ ಭಾಷಣ ದಲ್ಲಿ ಕುಸಿಯುತ್ತಿರುವ ಜಾಗತಿಕ ಆರ್ಥಿಕತೆ
ಯನ್ನು ಉತ್ತೇಜಿಸಲು ಭಾರತವೇ ಸೂಕ್ತ ಎಂಜಿನ್‌ ಎಂಬ ಸಂದೇಶವನ್ನು ಸಾರಲಿದ್ದಾರೆ.

ಯೋಗ ಕಾರ್ಯಕ್ರಮ: ವಿಶ್ವ ಮಟ್ಟದಲ್ಲಿ ಯೋಗ ವನ್ನು ಪ್ರಚುರಪಡಿಸುವ ಉದ್ದೇಶದಿಂದ ಯೋಗ ತರಗತಿಯನ್ನು ದಾವೋಸ್‌ನಲ್ಲಿ ಗಣ್ಯರಿಗೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಪ್ರತಿ ದಿನ ಎರಡು ಬಾರಿ, ಸಂಜೆ ಹಾಗೂ ಬೆಳಗ್ಗೆ ಭಾರತದ ಇಬ್ಬರು ಯೋಗ ಶಿಕ್ಷಕರು ಗಣ್ಯರಿಗೆ ಯೋಗ ಪಾಠ ಮಾಡಲಿದ್ದಾರೆ.

24 ಗಂಟೆಗಳಲ್ಲಿ ನೂರಾರು ಗಣ್ಯರ ಭೇಟಿ: ಪ್ರಧಾನಿ ಮೋದಿ ದಾವೋಸ್‌ ಪ್ರವಾಸದ ಅವಧಿ ಕೇವಲ 24 ಗಂಟೆ! ಆದರೆ ಈ ಪ್ರವಾಸ ಅತ್ಯಂತ ಪ್ರಮುಖವಾಗಿರಲಿದೆ. ಅಷ್ಟೇ ಅಲ್ಲ, ನೂರಕ್ಕೂ ಹೆಚ್ಚು ಗಣ್ಯರನ್ನು ಈ ಅವಧಿಯಲ್ಲಿ ಭೇಟಿ ಮಾಡಲಿದ್ದಾರೆ. ಸೋಮವಾರ ರಾತ್ರಿ ವಿವಿಧ ದೇಶಗಳ ಪ್ರಮುಖ ಸಿಇಒಗಳ ಜತೆ ಔತಣ ಕೂಟದಲ್ಲಿ ಭಾಗವಹಿಸಲಿದ್ದಾರೆ.

ಇದರಲ್ಲಿ ಭಾರತದ 20 ಮತ್ತು ಇತರ ದೇಶಗಳ 40 ಉದ್ಯಮಿಗಳು ಭಾಗವಹಿಸಲಿದ್ದಾರೆ. ಮಂಗಳ ವಾರ ಆರಂಭಿಕ ಭಾಷಣ ಮಾಡಲಿರುವ ಮೋದಿ, ಭಾರತದ ಆರ್ಥಿಕತೆಯ ಸುಸ್ಥಿರತೆ ಮತ್ತು ಜಾಗತಿಕ ಆರ್ಥಿಕತೆಗೆ ಭಾರತ ನೀಡಬಹುದಾದ ಕೊಡುಗೆಯ ಬಗ್ಗೆ ಮಾತನಾಡಲಿದ್ದಾರೆ. ಅಲ್ಲದೆ ವಿಶ್ವ ಆರ್ಥಿಕ ವೇದಿಕೆಯ ಅಂತಾರಾಷ್ಟ್ರೀಯ ವ್ಯಾಪಾರ ಸಮುದಾಯದ 120 ಸದಸ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ.

Advertisement

ಸ್ವಿಟ್ಸರ್ಲೆಂಡ್‌ ಅಧ್ಯಕ್ಷ ಅಲಿಯನ್‌ ಬೆರ್ಸೆಟ್‌, ಇತರ ಮುಖಂಡರೊಂದಿಗೆ ಪ್ರತ್ಯೇಕ ಮಾತುಕತೆಯನ್ನೂ ಅವರು ನಡೆಸಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ದಾವೋಸ್‌ಗೆ ಭೇಟಿ ನೀಡಲಿದ್ದು, ಮೋದಿ ಹಾಗೂ ಟ್ರಂಪ್‌ ವೇಳಾಪಟ್ಟಿ ಹೊಂದಾಣಿಕೆ ಯಾಗದ್ದರಿಂದ ಇಬ್ಬರ ಭೇಟಿ ಸಾಧ್ಯವಾಗುವುದಿಲ್ಲ. ಇನ್ನೊಂದೆಡೆ ಪಾಕ್‌ ಪ್ರಧಾನಿ ಶಾಹಿದ್‌ ಕಖಾನ್‌ ಅಬ್ಟಾಸಿ ಕೂಡ ದಾವೋಸ್‌ಗೆ ಪ್ರಯಾಣಿಸ ಲಿದ್ದಾರೆ. ಇವರನ್ನೂ ಮೋದಿ ಭೇಟಿ ಮಾಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶಾರುಖ್‌ ಖಾನ್‌ಗೆ ಸನ್ಮಾನ: ಸೋಮವಾರ ಸಂಜೆ ವಿಶ್ವ ಆರ್ಥಿಕ ವೇದಿಕೆಯ ಚೇರ¾ನ್‌ ಕ್ಲಾಸ್‌ ಶ್ವಾಬ್‌ ಸ್ವಾಗತ ಸಂದೇಶವನ್ನು ಓದುವ ಮೂಲಕ ಕಾರ್ಯಕ್ರಮ ಅನಾವರಣಗೊಳ್ಳಲಿದೆ. ಬಳಿಕ ಬಾಲಿವುಡ್‌ ನಟ ಶಾರುಖ್‌ ಖಾನ್‌ಗೆ ಕ್ರಿಸ್ಟಲ್‌ ಅವಾರ್ಡ್ಸ್ ನೀಡಿ ಪುರಸ್ಕರಿಸಲಾಗುತ್ತದೆ. ವಿಶ್ವಕ್ಕೆ ನೀಡಿದ ಕೊಡುಗೆಗಾಗಿ ಈ ಪುರಸ್ಕಾರ ನೀಡಲಾಗುತ್ತಿದ್ದು, ಶಾರುಖ್‌ ಜತೆಗೆ ಆಸ್ಟ್ರೇಲಿಯ ನಟಿ ಕೇಟ್‌ ಬ್ಲಾನ್‌ಚೆಟ್‌ ಮತ್ತು ಸಂಗೀತಗಾರ ಎಲ್ಟನ್‌ ಜಾನ್‌ ಕೂಡ ಪುರಸ್ಕರಿಸಲ್ಪಡಲಿದ್ದಾರೆ.

ದಾವೋಸ್‌ನಲ್ಲಿ  ಏನೇನು ನಡೆಯುತ್ತೆ?
–  ಡಬುÉ éಇಎಫ್ ಸದಸ್ಯರಿಗೆ ಭಾರತದಿಂದ ಸ್ವಾಗತ ಕೂಟ ಆಯೋಜನೆ, 1,500 ಗಣ್ಯರು ಭಾಗವಹಿಸಿ ಭಾರತದ ಸಂಸ್ಕೃತಿ, ಆಹಾರ ಹಾಗೂ ಪರಂಪರೆಯನ್ನು ಆಸ್ವಾದಿಸುವ ನಿರೀಕ್ಷೆ

– 23ರಂದು ಸಭೆಯನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ. 190 ದೇಶಗಳ ಒಟ್ಟು  2,000 ಗಣ್ಯರು ಭಾಗವಹಿಸುವ ನಿರೀಕ್ಷೆ

–  ಸ್ವಿಟ್ಸರ್ಲೆಂಡ್‌ ಅಧ್ಯಕ್ಷ ಅಲೈನ್‌ ಬೆರ್ಸೆಟ್‌ಜತೆ ಮೋದಿ ಮಾತುಕತೆ.

–  ಜ. 22ರಂದು ಪ್ರಮುಖ 60 ಸಿಇಒ ಗಳೊಂದಿಗೆ ಮೋದಿ ಔತಣಕೂಟ

–  ಜ. 23ರಂದು ಹೂಡಿಕೆ ಸಮುದಾಯದ  120 ಸದಸ್ಯರ ಜತೆ ಮೋದಿ ಸಂವಾದ‌.

–  ಜನರಲ್‌ ಮೋಟಾರ್ಸ್‌, ಸೇಲ್ಸ್‌ಫೋರ್ಸ್‌, ನೆಸ್ಲೆ, ಜೆಪಿ ಮಾರ್ಗನ್‌ನಂತಹ ಬೃಹತ್‌ ಕಂಪೆನಿಗಳ ಅಧಿಕಾರಿಗಳ ಜತೆಗೆ ಭಾರತದಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಮಾತುಕತೆ.

–  ಸಚಿವರಾದ ಅರುಣ್‌ ಜೇಟಿÉ , ಸುರೇಶ್‌ ಪ್ರಭು, ಧರ್ಮೇಂದ್ರ ಪ್ರಧಾನ್‌, ಪಿಯೂಶ್‌ ಗೋಯಲ್‌, ಜಿತೇಂದ್ರ ಸಿಂಗ್‌ ಮತ್ತು ಎಂ.ಜೆ. ಅಕºರ್‌ ಸಂವಾದಗಳಲ್ಲಿ ಭಾಗಿ.

– ಡಬುÉ éಇಎಫ್ ಸಭೆಯಲ್ಲಿ 400 ಸಂವಾದ ನಡೆಯಲಿದ್ದು, 2,000 ಸಿಇಒಗಳು, ಜಾಗತಿಕ ಸಂಸ್ಥೆಗಳು, ಸರಕಾರಿ ಮುಖ್ಯಸ್ಥರು ಭಾಗಿ.

Advertisement

Udayavani is now on Telegram. Click here to join our channel and stay updated with the latest news.

Next