Advertisement

ಸುಪ್ರೀಂ ಗೆ ಬ್ಯಾಂಕ್‌ ಸಾಲ ಸುಸ್ತಿಗಾರರ ಪಟ್ಟಿ; ಹೆಸರು ಬಹಿರಂಗ ಇಲ್ಲ

03:52 PM Apr 18, 2017 | udayavani editorial |

ಹೊಸದಿಲ್ಲಿ : ಪ್ರತೀ ಬ್ಯಾಂಕಿಗೆ 500 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸಾಲವನ್ನು ಬಾಕಿ ಇಟ್ಟಿರುವ ಎಲ್ಲ ಕಾರ್ಪೊರೇಟ್‌ ಸಂಸ್ಥೆಗಳ ಹೆಸರುಗಳಿರುವ ಪಟ್ಟಿಯನ್ನು ಪ್ರಧಾನಿ ನರೇಂದ್ರ ಮೋದಿ ಸರಕಾರ ಸುಪ್ರೀಂ ಕೋರ್ಟಿಗೆ ಎ.17ರಂದು ಸಲ್ಲಿಸಿದೆ. ಆದರೆ ಪಟ್ಟಿಯಲ್ಲಿನ ಕಂಪೆನಿಗಳ ಹೆಸರುಗಳನ್ನು ಮೋದಿ ಸರಕಾರ ಬಹಿರಂಗಪಡಿಸಿಲ್ಲ.

Advertisement

ಕೋಟಿಗಟ್ಟಲೆ ಬ್ಯಾಂಕ್‌ ಸಾಲ ಮೊತ್ತವನ್ನು ಮರುಪಾವತಿಸದೆ ಬಾಕಿ ಇಟ್ಟಿರುವ ಕಂಪೆನಿಗಳ ಹೆಸರನ್ನು ಒಳಗೊಂಡ ಪಟ್ಟಿಯನ್ನು ಮೋದಿ ಸರಕಾರ ಅತ್ಯಂತ ರಹಸ್ಯಾತ್ಮಕವಾಗಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿದೆ. ಇದಲ್ಲದೆ ಇನ್ನೂ 7,000ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕನಿಷ್ಠ  ತಲಾ ಐದು ಲಕ್ಷಕ್ಕೂ ಅಧಿಕ ಮೊತ್ತದ ಸಾಲವನ್ನು ಬಾಕಿ ಇರಿಸಿರುವ ಕಂಪೆನಿಗಳ ಹೆಸರುಗಳನ್ನು ಕೂಡ ಕೋರ್ಟಿಗೆ ಸಲ್ಲಿಸಿದೆ.  

ರಿಸರ್ವ್‌ ಬ್ಯಾಂಕ್‌ ಸಲಹೆಯ ಪ್ರಕಾರ, ದೇಶದ ಆರ್ಥಿಕ ಹಿತಾಸಕ್ತಿಯಲ್ಲಿ, ಬ್ಯಾಂಕ್‌ ಸಾಲ ಸುಸ್ತಿಗಾರ ಕಂಪೆನಿಗಳ ಹೆಸರುಗಳನ್ನು ಸರಕಾರ ಬಹಿರಂಗಪಡಿಸಿಲ್ಲ ಎಂದು ಮೂಲಗಳು ಹೇಳಿವೆ. 

ಬ್ಯಾಂಕ್‌ ಸಾಲ ಸುಸ್ತಿಗಾರ ಕಂಪೆನಿಗಳ ಹೆಸರುಗಳ ಪಟ್ಟಿಯನ್ನು ತನಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಈ ವರ್ಷ ಜನವರಿಯಲ್ಲಿ ಕೇಂದ್ರ ಸರಕಾರಕ್ಕೆ ಆದೇಶ ನೀಡಿತ್ತು. ಆ ಪ್ರಕಾರ ಕೇಂದ್ರ ಹಣಕಾಸು ಸಚಿವಾಲಯವು ಅಫಿದಾವಿತ್‌ ಮೂಲಕ ಬ್ಯಾಂಕ್‌ ಸಾಲ ಸುಸ್ತಿಗಾರ ಕಂಪೆನಿಗಳ ಹೆಸರುಗಳುಳ್ಳ ಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವುದಾಗಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next