Advertisement

ಭಾರತಕ್ಕೆ ಸಿಗುತ್ತೆ ಸ್ವಿಸ್‌ ಮಾಹಿತಿ

11:21 AM Jun 17, 2017 | Team Udayavani |

ಬೆರ್ನೆ/ನವದೆಹಲಿ: ಕಪ್ಪುಹಣ ವಿರುದ್ಧದ ಹೋರಾಟದಲ್ಲಿ ಭಾರತದ ಪ್ರಯತ್ನ ಇದೀಗ ಫ‌ಲಿಸತೊಡಗಿದೆ. ಸ್ವಿಸ್‌ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಕೂಡಿಟ್ಟ ಶಂಕೆ ಇದ್ದಲ್ಲಿ ಕೂಡಲೇ ಖಾತೆದಾರರ ಕುರಿತ ಮಾಹಿತಿಗಳನ್ನು ಭಾರತ ಸೇರಿದಂತೆ ಇತರ 40 ದೇಶಗಳಿಗೆ ನೀಡಲು ಸ್ವಿಜರ್ಲೆಂಡ್‌ ಒಪ್ಪಿಗೆ ನೀಡಿದೆ. ತೆರಿಗೆ ವಂಚನೆ ಕುರಿತ ಪ್ರಕರಣಗಳಿದ್ದಲ್ಲಿ ಸ್ವಯಂಚಾಲಿತ (ಎಇಒಐ) ಹೆಸರಿನ ಜಾಗತಿಕ ವಿಧಾನದಲ್ಲಿ ಕೂಡಲೇ ಆ ಬಗ್ಗೆ ಮಾಹಿತಿಗಳನ್ನು ದೇಶಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಈ ವಿಧಾನವನ್ನು 2018ರಲ್ಲಿ ಅಳವಡಿಸಿಕೊಳ್ಳಲಾಗುತ್ತಿದ್ದು, 2019ರ ವೇಳೆಗೆ ಮೊದಲ ಹಂತದ ದತ್ತಾಂಶಗಳು ಭಾರತದ ಕೈಸೇರಲಿದೆ ಎಂದು ಸ್ವಿಸ್‌ ಫೆಡರಲ್‌ ಕೌನ್ಸಿಲ್‌ ಹೇಳಿದೆ.

Advertisement

ಶುಕ್ರವಾರ ನಡೆದ ಫೆಡರಲ್‌ ಕೌನ್ಸಿಲ್‌ ಸಭೆಯಲ್ಲಿ ಭಾರತ ಸೇರಿದಂತೆ ಇದರ ದೇಶಗಳ ಆಗ್ರಹದ ಮೇರೆಗೆ ಮಾಹಿತಿಯನ್ನು ನೀಡುವ ಬಗ್ಗೆ ತೀರ್ಮಾನಿಸಲಾಗಿದೆ. ಅದರಂತೆ ಎಇಒಐ ಚಾಲನೆಗೊಳಿಸಿ ಪ್ರತೀ ದೇಶಕ್ಕೂ ಮಾಹಿತಿಯನ್ನು ನೀಡಲಾಗುವುದು. ಈ ಮಾಹಿತಿ ಹಂಚುವಿಕೆ ಬಹುಪಕ್ಷೀಯ ಸಾಮರ್ಥ್ಯ ಪ್ರಾಧಿಕಾರ ಒಪ್ಪಂದ (ಎಮ್‌ಸಿಎಎ) ಪ್ರಕಾರ, ಅಂತಾರಾಷ್ಟ್ರೀಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಮಾನದಂಡ (ಒಇಸಿಡಿ)ಕ್ಕೆ ಅನುಗುಣವಾಗಿ ನಡೆಯಲಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next