Advertisement

10 ವರ್ಷ ತೆರಿಗೆ ವಿನಾಯಿತಿ ; ಚೀನ ತ್ಯಜಿಸುವ ಕಂಪೆನಿ ಸೆಳೆಯಲು ತಂತ್ರ

03:04 AM May 13, 2020 | Hari Prasad |

ಹೊಸದಿಲ್ಲಿ: ಚೀನದಿಂದ ಹೊರಬರಲು ಸಿದ್ಧತೆ ನಡೆಸಿರುವ ಕಂಪೆನಿಗಳನ್ನು ಭಾರತದತ್ತ ಸೆಳೆಯಲು ಮುಂದಾಗಿರುವ ಕೇಂದ್ರ ಸರಕಾರವು, 10 ವರ್ಷಗಳ ತೆರಿಗೆ ರಜೆ ನೀಡಲು ಚಿಂತನೆ ನಡೆಸುತ್ತಿದೆ.

Advertisement

ಕೋವಿಡ್ ನಿಂದಾಗಿ ಇಡೀ ಜಗತ್ತಿನ ಆರ್ಥಿಕತೆ ಕುಸಿತದ ಹಂತದಲ್ಲಿದೆ. ಜತೆಗೆ ಜಗತ್ತಿಗೆ ಕೋವಿಡ್ ನೀಡಿರುವ ಚೀನದ ವಿರುದ್ಧವೂ ಸಿಟ್ಟು ಹೆಚ್ಚಾಗುತ್ತಿದೆ. ಹೀಗಾಗಿಯೇ ಅಮೆರಿಕ, ಜಪಾನ್‌, ದಕ್ಷಿಣ ಕೊರಿಯಾ ಸೇರಿದಂತೆ ಹಲವಾರು ದೇಶಗಳ ಕಂಪೆನಿಗಳು ಭಾರತದತ್ತ ಬರಲು ಸಿದ್ಧತೆ ನಡೆಸಿವೆ.

ಇದನ್ನೇ ಅವಕಾಶವಾಗಿ ಬಳಸಿಕೊಳ್ಳಲು ಮುಂದಾಗಿರುವ ಕೇಂದ್ರ ಸರಕಾರವು, ಇಲ್ಲಿ ಹೂಡಿಕೆ ಮಾಡಬಯಸುವ ಕಂಪೆನಿಗಳಿಗೆ 10 ವರ್ಷ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲು ಯೋಜನೆಯೊಂದನ್ನು ಸಿದ್ಧಪಡಿಸಿದೆ.

ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವಾಲಯ ನೀಲನಕ್ಷೆ ಸಿದ್ಧಪಡಿಸಿದ್ದು, ಸದ್ಯ ಹಣಕಾಸು ಇಲಾಖೆ ಬಳಿ ಈ ಪ್ರಸ್ತಾವನೆ ಇದೆ ಎಂಬುದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಯಾರಿಗೆ ಅನ್ವಯ?
1. ಜೂ.1ರಿಂದ ಆರಂಭವಾಗಿ ಮುಂದಿನ 3 ವರ್ಷಗಳ ಒಳಗೆ 500 ದಶಲಕ್ಷ ಡಾಲರ್‌ ಹೂಡಿಕೆ ಮಾಡುವ ಕಂಪೆನಿಗಳಿಗೆ 10 ವರ್ಷಗಳ ತೆರಿಗೆ ವಿನಾಯಿತಿ. ಈ ಹಣವನ್ನು ವೈದ್ಯಕೀಯ ಉಪಕರಣ, ಎಲೆಕ್ಟ್ರಾನಿಕ್ಸ್‌, ಟೆಲಿಕಾಂ ಉಪಕರಣ ಮತ್ತು ಕ್ಯಾಪಿಟಲ್‌ ಗೂಡ್ಸ್‌ ಮೇಲೆ ಹೂಡಿಕೆ ಮಾಡಬೇಕು.

Advertisement

2. ನೂರು ದಶಲಕ್ಷ ಡಾಲರ್‌ ಹಣವನ್ನು ಹೂಡಿಕೆ ಮಾಡುವ ಕಂಪೆನಿಗಳಿಗೆ 4 ವರ್ಷಗಳವರೆಗೆ ತೆರಿಗೆ ರಜೆ. ಇವರು ಜವುಳಿ, ಆಹಾರ ಸಂಸ್ಕರಣೆ, ಚರ್ಮ ಮತ್ತು ಪಾದರಕ್ಷೆ ಉದ್ಯಮದಲ್ಲಿ ಹಣ ಹೂಡಿಕೆ ಮಾಡಬೇಕಾಗುತ್ತದೆ. ಜತೆಗೆ ಮುಂದಿನ 6 ವರ್ಷಗಳಿಗೆ ಕೇವಲ ಶೇ.10 ಕಾರ್ಪೊರೇಟ್‌ ತೆರಿಗೆ ನಿಗದಿ ಮಾಡುವ ಬಗ್ಗೆಯೂ ಪ್ರಸ್ತಾವನೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next