Advertisement

ದೇಶಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿದ ಮೋದಿ: ಮಾಳವಿಕಾ

04:43 PM Apr 11, 2019 | pallavi |
ಅಕ್ಕಿಆಲೂರು: ಪ್ರಧಾನಿ ನರೇಂದ್ರ ಮೋದಿಯವರು ಹೆತ್ತತಾಯಿ ಹಾಗೂ ಪೋಷಿಸಿದ ಭಾರತಮಾತೆಯ ಋಣ ತೀರಿಸಲು ಜನಿಸಿದ ದೈವತ್ವದ ವ್ಯಕ್ತಿ, ವಿಶ್ವದಲ್ಲಿರುವ ಭಾರತದ ವಿರೋಧಿ ಗಳ ಅವಸಾನದ ಕಾಲ ಹತ್ತಿರವಾಗುತ್ತಿದೆ ಎಂದು ನಟಿ ಮಾಳವಿಕಾ ಅವಿನಾಶ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಾವೇರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಮತಯಾಚಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ವಿಶ್ವಗುರುವನ್ನಾಗಿಸಲು ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಕೆಲಸ ನಿರ್ವಹಿಸುತ್ತಿರುವ ಏಕೈಕ ನಾಯಕರಾಗಿದ್ದಾರೆ. ಮೋದಿ ಪ್ರಧಾನಿಯಾದರೆ ಕಾಂಗ್ರೆಸ್‌ ಮತ್ತು ಪಾಕಿಸ್ತಾನಕ್ಕೆ ಸಂಕಷ್ಟ ಹತ್ತಿರವಾಗುತ್ತದೆ ಎಂಬುದು ಖಚಿತವಾಗಿದೆ. ಕಳೆದ ಐದು ವರ್ಷಗಳಿಂದ ಒಂದೇ ಒಂದು ದಿನ ತನಗೋಸ್ಕರ ಕಳೆಯದೆ, ದೇಶಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿದ ಮೋದಿ,
ಭಾರತವನ್ನು ವಿಶ್ವದಲ್ಲಿ ಗುರು ಸ್ಥಾನಕ್ಕೆ ಕೊಂಡೊಯಲು ಸಂಕಲ್ಪ ಮಾಡಿರುವ ಶ್ರೇಷ್ಠ ವ್ಯಕ್ತಿ. ಮೋದಿಯವರಿಗೆ ಬಹುಮತದ ಗೆಲುವು ನೀಡದೇ, ಅತ್ಯಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ರಾಷ್ಟ್ರ ಮುನ್ನಡೆಸಲು ನಾವೆಲ್ಲರೂ ಅವರಿಗೆ ಬಲ ತುಂಬಬೇಕಿದೆ ಎಂದರು.
ರಾಜ್ಯ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿ, ಗಾಂಧಿ  ಹೆಸರಿನ ಮೇಲೆ ರಾಜಕಾರಣ ಮಾಡುವ ಕಾಂಗ್ರೆಸ್‌ ಗಾಂಧಿ  ತತ್ವ ಅನುಸರಿಸಿದೆಯೇ ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ವಿದೇಶಿ ಅಧಿಕಾರಿಗಳು ಭಾರತಕ್ಕೆ ಬಂದಾಗ ಭಾರತೀಯರನ್ನು ಗುಲಾಮರಂತೆ ಬಿಂಬಿಸುತ್ತಿದ್ದ ನೆಹರೂ ಪರಂಪರೆ ಈಗ ಬದಲಾಗಿದೆ. ವಿಶ್ವದ ಇತರ ರಾಷ್ಟ್ರಗಳು ಭಾರತವನ್ನು ದೇವರ ಮನೆಯಂತೆ ಕಾಣುವಂತೆ ಪ್ರಧಾನಿ ಮೋದಿಯವರು ಮಾಡಿದ್ದಾರೆ ಎಂದು ಹೇಳಿದರು.
ಶಾಸಕ ಸಿ.ಎಂ. ಉದಾಸಿ ಮಾತನಾಡಿ, ಅಲ್ಪಸಂಖ್ಯಾತರನ್ನು ಮತಬ್ಯಾಂಕ್‌ ಮಾಡಿಕೊಂಡಿರುವ ಕಾಂಗ್ರೆಸ್‌, ಕಳೆದ 60 ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಆಸೆ ತೋರಿಸಿ, ಮತ ಹಾಕಿಸಿಕೊಂಡಿದೆಯೇ ಹೊರತು ಅವರನ್ನು ಉದ್ಧಾರ ಮಾಡಿಲ್ಲ. ಅಲ್ಪಸಂಖ್ಯಾತರ ಭವಿಷ್ಯ ಉಜ್ವಲವಾದರೆ, ಕಾಂಗ್ರೆಸ್‌ಗೆ ಭಾರತದಲ್ಲಿ ಅಸ್ಥಿತ್ವವಿಲ್ಲ ಎಂಬುದು ಕಾಂಗ್ರೆಸ್‌ ನಾಯಕರಿಗೆ ತಿಳಿದಿದೆ. ಇತಂಹ ನೀಚ ರಾಜಕೀಯ ಬಿಟ್ಟು ತುಷ್ಠಿಕರಣ ನೀತಿ ಹೊರತಾಗಿ, ಮೋದಿ ಎಲ್ಲರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದಾರೆ
ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಕಳೆದ ವಿಧಾನ ಸಭೆಯಲ್ಲಿ ಕಾಂಗ್ರೆಸ್‌ನಿಂದ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುಖಂಡ ಚಂದ್ರಪ್ಪ ಜಾಲಗಾರ ಬಿಜೆಪಿಗೆ ಸೇರ್ಪಡೆಯಾದರು.
ಆರ್‌ಎಸ್‌ಎಸ್‌ ಸಂಸ್ಕಾರ ಎಂತಹ ವ್ಯಕ್ತಿಯಲ್ಲಿಯು ವ್ಯಕ್ತಿತ್ವ ವಿಕಾಸ ಮಾಡುವ ಸಾಮರ್ಥ್ಯ ಹೊಂದಿದೆ. ನಾನು
ಚಿಕ್ಕವನಿದ್ದಾಗ ಶಾಖೆಗೆ ಹೋಗುತ್ತಿದ್ದ ಪರಿಣಾಮ ಸಾಮಾಜಿಕ ಪರಿಕಲ್ಪನೆ ನನಗಿದೆ. ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ಅವು ಇಷ್ಟವಾಗಿರುವುದರಿಂದ ಬಿಜೆಪಿಗೆ ಬಂದಿದ್ದೇನೆ. ಹಾನಗಲ್ಲ ತಾಲೂಕಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಗಂಗಾಮತಸ್ಥರ ಸಮುದಾಯದ ಪ್ರಮುಖರು ನನ್ನ ಈ ನಿರ್ಧಾರ ಬೆಂಬಲಿಸಿದ್ದಾರೆ. ಚಂದ್ರಪ್ಪ ಜಾಲಗಾರ, ಬಿಜೆಪಿಗೆ ಸೇರ್ಪಡೆಯಾದ ಕಾಂಗ್ರೆಸ್‌ ನಾಯಕ
Advertisement

Udayavani is now on Telegram. Click here to join our channel and stay updated with the latest news.

Next