Advertisement

ಮೋದಿ ಸುಸಂಸ್ಕೃತರು: ಚಾರುಕೀರ್ತಿ ಭಟ್ಟಾರಕ ಶ್ರೀ

06:15 AM Feb 20, 2018 | Team Udayavani |

ಶ್ರವಣಬೆಳಗೊಳ: ಪ್ರಧಾನಿ ನರೇಂದ್ರ ಮೋದಿ ಶ್ರವಣಬೆಳಗೊಳಕ್ಕೆ ಆಗಮಿಸಿರುವುದು ಸುವರ್ಣಾಕ್ಷರದಲ್ಲಿ ಬರೆದಿಡುವ ಕ್ಷಣ ಎಂದು ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದ್ದಾರೆ.

Advertisement

ಮಹಾಮಜ್ಜನ ಕಾರ್ಯಕ್ರಮವನ್ನು ರಾಷ್ಟ್ರಪತಿಯಿಂದ ಉದ್ಘಾಟಿಸಬೇಕೆಂಬ ಬಯಕೆ ಇತ್ತು. ಅದರಂತೆ ರಾಷ್ಟಪತಿ ರಾಮನಾಥ ಕೋವಿಂದ್‌ ಆಗಮಿಸಿ ಮಹಾಮಜ್ಜನಕ್ಕೆ ಚಾಲನೆ ನೀಡಿದರು.

ವಿಂಧ್ಯಗಿರಿ ಬೆಟ್ಟಕ್ಕೆ ಹೊಸದಾಗಿ ಮೆಟ್ಟಿಲು ಮಾಡಿಸಬೇಕೆಂದು ಕೇಂದ್ರ ಸಂಸ್ಕೃತಿ ಸಚಿವರನ್ನು ಕೇಳಿಕೊಂಡಾಗ ಅವರು ಪುರಾತತ್ವ ಇಲಾಖೆ ಮೂಲಕ ಹೊಸ ಮೆಟ್ಟಿಲುಗಳನ್ನು ಮಾಡಿಸಿದ್ದು ಅದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿದೆ. 630 ನೂತನ ಮೆಟ್ಟಿಲುಗಳನ್ನು ಪ್ರಧಾನಿ ಉದ್ಘಾಟಿಸುತ್ತಿರು ವುದು ಸಂತಸದ ವಿಷಯ ಎಂದರು.

ಮಹಾಮಜ್ಜನದಲ್ಲಿ ಕೇವಲ ಉತ್ಸವ ನಡೆಯುತ್ತಿಲ್ಲ. ಇಲ್ಲಿ ಸಾಮಾಜಿಕ ಕಾರ್ಯಗಳಿಗೂ ಆದ್ಯತೆ ನೀಡಲಾಗುತ್ತಿದ್ದು, ಇನೋಕ್ಸ್‌ ಸಂಸ್ಥೆಯ ಸಹಯೋಗದೊಂದಿಗೆ 5 ಕೋಟಿ ರೂ. ವೆಚ್ಚದಲ್ಲಿ ಉಚಿತ ಸಾರ್ವಜನಿಕ ಆಸ್ಪತ್ರೆ ತೆರೆಯಲಾಗಿದೆ.
ಅದನ್ನೂ ಪ್ರಧಾನಿ ಉದ್ಘಾಟಿಸಿರುವುದು ಸಂತೋಷ ತಂದಿದೆ ಎಂದು ಹೇಳಿದರು.ಅಬ್ದುಲ್‌ ಕಲಾಂ ಅವರು ರಾಷ್ಟ್ರಪತಿಯಾಗಿದ್ದಾಗ ಶ್ರೀಕ್ಷೇತ್ರಕ್ಕೆ ಆಗಮಿಸಿ ಮಕ್ಕಳ ಆಸ್ಪತ್ರೆ ಉದ್ಘಾಟಿಸಿದ್ದರು ಎಂದರು.

ತಾಯಿ ಪ್ರೇರಣೆ: ಪ್ರಧಾನಿ ನರೇಂದ್ರ ಮೋದಿಗೆ ಅವರ ತಾಯಿ ಪ್ರೇರಣೆ ಇದೆ. ಪ್ರಧಾನಿ ಹುದ್ದೆಯಲ್ಲಿದ್ದರೂ ತಾಯಿಯ ಆಶೀರ್ವಾದ ಪಡೆದು ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಚಾವುಂಡರಾ ಯನಿಗೂ ಅವರ ತಾಯಿ ಪ್ರೇರಣೆಯಾಗಿದ್ದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ
ಮಹಾಮಸ್ತಕಾಭಿಷೇಕದ ಲಾಂಛನ ಇರುವ ಚಿನ್ನದ ಧ್ವಜ ಹಾಗೂ ರಜತ ಕಳಶ ನೀಡಿ ಗೌರವಿಸಲಾಯಿತು. ರಾಜ್ಯಪಾಲ ವಿ.ಆರ್‌.ವಾಲಾ, ಕೇಂದ್ರ ಸಚಿವರಾದ ಅನಂತ ಕುಮಾರ್‌, ಸದಾನಂದಗೌಡ, ಪಿಯೂಷ್‌ ಗೋಯಲ್‌, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಶಾಸಕ ಸಿ.ಎನ್‌.ಬಾಲಕೃಷ್ಣ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಉಪಸ್ಥಿತರಿದ್ದರು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಇದ್ದರೂ ಗೈರು ಹಾಜರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next