Advertisement

ಚಕ್ಕರ್‌ ಸಂಸದರಿಗೆ ಪ್ರಧಾನಿ ಚಾಟಿ

02:10 AM Jul 17, 2019 | sudhir |

ಹೊಸದಿಲ್ಲಿ: “ಎಲ್ಲ ಸಂಸದರೂ ಸಂಸತ್‌ ಕಲಾಪಗಳ ವೇಳೆ ಹಾಜರಿರಬೇಕು. ಸುಖಾ ಸುಮ್ಮನೆ ಸದನಕ್ಕೆ ಗೈರಾಗುವುದನ್ನು ನಾನು ಸಹಿಸುವುದಿಲ್ಲ. ಇಂದು ಸಂಜೆಯೊಳಗೆ ನನಗೆ ಗೈರಾದವರ ಪಟ್ಟಿ ಬೇಕು’.

Advertisement

-ಹೀಗೆಂದು ಖಡಕ್ಕಾಗಿ ಪಕ್ಷದ ಸಂಸದರಿಗೆ ಚಾಟಿ ಬೀಸಿರುವುದು ಪ್ರಧಾನಿ ನರೇಂದ್ರ ಮೋದಿ. ಪಕ್ಷದ ಸಂಸದರು ಸದನಕ್ಕೆ ಗೈರಾಗುತ್ತಿರುವ ಬಗ್ಗೆ ತಿಂಗಳಲ್ಲಿ ಎರಡನೇ ಬಾರಿಗೆ ಅಸಮಾಧಾನ ಹೊರಹಾಕಿರುವ ಮೋದಿ, ಮಂಗಳವಾರ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರ ಚಳಿ ಬಿಡಿಸಿದ್ದಾರೆ.

ಸದನದಲ್ಲಿ ಹಾಜರಿರಬೇಕೆಂದು ಸೂಚಿಸಿದ್ದರೂ ಅನೇಕರು ಗೈರಾಗಿರುವುದು ಗೊತ್ತಾಗಿದೆ. ನಿಮ್ಮ ನಿಮ್ಮ ಕರ್ತವ್ಯಗಳನ್ನು ಅರಿತುಕೊಳ್ಳಿ. ಅಶಿಸ್ತನ್ನು ನಾನು ಸಹಿಸಲ್ಲ. ಯಾರ್ಯಾರು ಸದನಕ್ಕೆ ಹಾಜರಾಗಿಲ್ಲವೋ ಅಂಥವರ ಪಟ್ಟಿ ನನಗೆ ಇಂದು ಸಂಜೆಯೊಳಗೆ ಬೇಕು ಎಂದು ಹೇಳಿದ್ದಾರೆ. ಇದೇ ವೇಳೆ, ಅಗತ್ಯಬಿದ್ದರೆ ಸರಕಾರದ ಅಜೆಂಡಾಗಳನ್ನು ಅಂಗೀಕಾರಗೊಳಿಸುವ ಉದ್ದೇಶದಿಂದ ಪ್ರಸ್ತುತ ಅಧಿವೇಶನದ ಅವಧಿಯನ್ನು ವಿಸ್ತರಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ.

ಅಭಿವೃದ್ಧಿ ಕಾರ್ಯದಲ್ಲಿ ಮೊದಲಿಗರಾಗಿ
ಕುಷ್ಠ ರೋಗ, ಕ್ಷಯ ಸಹಿತ ಜನರಿಗೆ ತೊಂದರೆ ಯಾಗುವಂಥ ಸಮಸ್ಯೆಗಳ ಪರಿಹಾರದತ್ತ ಗಮನ ಹರಿಸ ಬೇಕು. ಸಂಸದರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಮೊದ ಲಿಗರಾಗಬೇಕು ಎಂದೂ ಪ್ರಧಾನಿ ಮೋದಿ ಕಿವಿಮಾತು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಮೊದಲು ರೂಪು ಗೊಳ್ಳುವ ಅಭಿಪ್ರಾಯವೇ ಕೊನೆಯವರೆಗೂ ಇರುತ್ತದೆ ಎಂದು ಪಕ್ಷದ ವತಿಯಿಂದ ಮೊದಲ ಬಾರಿಗೆ ಆಯ್ಕೆಯಾದ ಸಂಸದರನ್ನು ಉದ್ದೇಶಿಸಿ ತಿಳಿಸಿದ್ದಾರೆ. ಮಹಾತ್ಮಾ ಗಾಂಧೀಜಿಯವರ ಹೇಳಿಕೆಯನ್ನು ಪ್ರಸ್ತಾವಿಸಿದ ಪ್ರಧಾನಿ ಮೋದಿ ಕುಷ್ಠ ರೋಗಿಗಳಿಗೆ ಸಂಬಂಧಿಸಿದ ಆಸ್ಪತ್ರೆ ಉದ್ಘಾಟನೆಗೆ ಮಹಾತ್ಮಾ ಗಾಂಧಿ ಅವರನ್ನು ಆಹ್ವಾನಿಸಿದ್ದಾಗ ಅದಕ್ಕೆ ಬೀಗ ಹಾಕಿ. ಆಸ್ಪತ್ರೆ ಉದ್ಘಾಟನೆಯ ಬದಲಾಗಿ, ರೋಗ ನಿವಾರಣೆ ನಿಟ್ಟಿನಲ್ಲಿ ಮುಂಜಾಗರೂಕತೆ, ಜಾಗೃತಿ ರೂಪಿಸುವ ಕ್ರಮಗಳು ಬೇಕು ಎಂದಿದ್ದರು. ಅದೇ ರೀತಿ ಸಂಸದರೂ ಕಾರ್ಯ ಪ್ರವೃತ್ತರಾಗಬೇಕು ಎಂದು ಮೋದಿ ಅವರು ಸಲಹೆ ನೀಡಿದ್ದಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next