Advertisement

ಪ್ರಧಾನಿ ನರೇಂದ್ರ ಮೋದಿ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟನೆ?

04:03 PM Jun 21, 2017 | Sharanya Alva |

ನವದೆಹಲಿ: ದೇಶದ ಅತ್ಯಂತ ಜನಪ್ರಿಯ ರಾಜಕಾರಣಿ, ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಸಿನಿಮಾ ಸೆಟ್ಟಲೇರಲಿದೆಯೇ? ಸದ್ಯದ ಊಹಾಪೋಹದ ಸುದ್ದಿಯ ಪ್ರಕಾರ ನರೇಂದ್ರ ಮೋದಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು ಸೂಕ್ತ ಎಂದು ಹರಿದಾಡುತ್ತಿದೆ. ಈ ಹಿಂದೆ ನಟ ಪರೇಶ್ ರಾವಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. 

Advertisement

ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾದಲ್ಲಿ ಪ್ರಧಾನಿ ಅವರ ಪಾತ್ರವನ್ನು ಅಕ್ಷಯ್ ಕುಮಾರ್ ಅವರು ಮಾಡಬೇಕೆಂದು ನಿರ್ಮಾಪಕರು ಬೇಡಿಕೆ ಇಟ್ಟಿರುವುದಾಗಿ ವರದಿ ಹೇಳಿದೆ.  ಮೋದಿ ಜೀವನದ ಬಗ್ಗೆ ಸಿನೆಮಾ ನಿರ್ಮಾಣ ಇನ್ನೂ ವಿಚಾರದ ಹಂತದಲ್ಲಿದ್ದು, ನಾಯಕ ನಟನ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.  ಪರೇಶ್ ರಾವಲ್ ಹಾಗೂ ಅನುಪಮ್ ಖೇರ್ ಅವರಿಗಿಂತ ಹೆಚ್ಚಾಗಿ ಅಕ್ಷಯ್ ಕುಮಾರ್ ಉತ್ತಮ ಆಯ್ಕೆ ಎಂಬ ಮಾತು ಕೇಳಿಬಂದಿದೆ. 

ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ನಿರ್ವಹಿಸಲು ಅಕ್ಷಯ್ ಕುಮಾರ್ ಸರಿಯಾದ ಆಯ್ಕೆ ಎಂಬುದು ನಟ, ಬಿಜೆಪಿ ಮುಖಂಡ ಶತ್ರುಘ್ನ ಸಿನ್ನಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಅಕ್ಷಯ್ ಕುಮಾರ್ ಮಿಸ್ಟರ್ ಕ್ಲೀನ್ ಆಫ್ ಇಂಡಿಯಾ, ಈ ಹಿನ್ನೆಲೆಯಲ್ಲಿ ನೂತನ ಶೈನಿಂಗ್ ಇಂಡಿಯಾದಲ್ಲಿ ಅಕ್ಷಯ್ ವ್ಯಕ್ತಿತ್ವ ಮತ್ತಷ್ಟು ಎತ್ತರಕ್ಕೆ ಏರಲಿದೆ ಎಂದು ತಿಳಿಸಿದ್ದಾರೆ. 

ಸೆನ್ಸಾರ್ ಮಂಡಳಿ ಮುಖ್ಯಸ್ಥ ಫಹಲಾಜ್ ನಿಹಲಾನಿ ಕೂಡಾ, ಪ್ರಧಾನಿ ಮೋದಿ ಅವರ ಪಾತ್ರ ಮಾಡಲು ಅಕ್ಷಯ್ ಗಿಂತ ಉತ್ತಮವಾದ ಆಯ್ಕೆ ಇಲ್ಲ ಎಂದು ಹೇಳಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ಟಾಯ್ಲೆಟ್, ಏಕ್ ಪ್ರೇಮ್ ಕಥಾ ಸಿನಿಮಾ ಆಗಸ್ಟ್ 11ರಂದು ಬಿಡುಗಡೆಗೆ ಸಿದ್ಧವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next