Advertisement

ಮೋದಿಜೀ ದಿನಕ್ಕೆ 5 ಅಣಬೆ ತಿನ್ನುತ್ತಾರೆ..ಅದರ ಬೆಲೆ ಎಷ್ಟು ಗೊತ್ತಾ?

06:12 PM Dec 12, 2017 | Team Udayavani |

ಅಹಮ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಚಿರಯೌವನಿಗರಂತೆ ಕಾಣುವ ನಿಟ್ಟಿನಲ್ಲಿ ದಿನಂಪ್ರತಿ ತೈವಾನಿನಿಂದ ಆಮದು ಮಾಡಿಕೊಂಡ ಅಣಬೆಯನ್ನೇ ತಿನ್ನುತ್ತಾರೆ. ಮೋದಿಜೀ ಅವರು ಪ್ರತಿದಿನ 5 ಅಣಬೆಯನ್ನು ತಿನ್ನುತ್ತಾರೆ. ಒಂದು ಅಣಬೆ ಬೆಲೆ 80 ಸಾವಿರ ಎಂದು ಕಾಂಗ್ರೆಸ್ ಮುಖಂಡ ಅಲ್ಪೇಶ್ ಠಾಕೂರ್ ಮಂಗಳವಾರ ತಿಳಿಸಿದ್ದಾರೆ.

Advertisement

ಗುಜರಾತ್ ವಿಧಾನಸಭಾ ಚುನಾವಣೆಯ ಕೊನೆಯ ದಿನದ ಪ್ರಚಾರದಲ್ಲಿ ತೊಡಗಿದ್ದ ಅಲ್ಪೇಶ್ ಸುದ್ದಿಗಾರರ ಜತೆ ಮಾತನಾಡುತ್ತ, ಮೋದಿಜೀ ಅವರು ತೈವಾನ್ ನಿಂದ ಆಮದು ಮಾಡಿಕೊಂಡ ಅಣಬೆಯನ್ನೇ ತಿನ್ನುತ್ತಾರೆ. ಒಂದು ಅಣಬೆ ಬೆಲೆ 80 ಸಾವಿರ, ಅವರು ಪ್ರತಿದಿನ 5 ಅಣಬೆಗೆ 4 ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ. ಮೋದಿಜೀ ಮೊದಲು ನನ್ನಂತೆ ಕಪ್ಪಗಿದ್ದರು, ಈಗ ತುಂಬಾ ಬೆಳ್ಳಗಾಗಿದ್ದಾರೆ..ಅದಕ್ಕೆ ಕಾರಣ ತೈವಾನ್ ಅಣಬೆ ಎಂದು ಹೇಳಿರುವುದಾಗಿ ಎಎನ್ ಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next