Advertisement
ನೆರೆದೇಶಗಳ ಸ್ನೇಹ, ಸಮರ್ಥ ರಾಜತಾಂತ್ರಿಕತೆ, ಗುರಿ ಸಾಧನೆಯ ಆಡಳಿತ, ದೇಶದ ಸಂಸ್ಕೃ ತಿಯ ಪುನರುಜ್ಜೀವನ, ಸ್ವತ್ಛ ಭಾರತ, ಜನ್‌ಧನ್, ಆಯುಷ್ಮಾನ್ ಭಾರತ, ನಮಾಮಿ ಗಂಗಾ, ಬೇಟಿ ಪಡಾವೋ, ಬೇಟಿ ಬಚಾವೋ, ಸುಕನ್ಯಾ ಸಮೃದ್ಧಿ, ಡಿಬಿಟಿ, ಡಿಜಿಟಲ್ ಇಂಡಿಯಾ , ಉಜ್ವಲ್, ಉಡಾನ್, ಮೇಕ್ ಇನ್ ಇಂಡಿಯಾ, ಕಿಸಾನ್ ಸಮ್ಮಾನ್, ಆತ್ಮನಿರ್ಭರ ಭಾರತ, ನೂತನ ಶಿಕ್ಷಣ ನೀತಿ, ಜಲ್ ಜೀವನ್ ಮಿಷನ್ ಮುಂತಾದ ಯಶಸ್ವಿ ಯೋಜನೆಗಳಿಂದ ದೇಶಕ್ಕೊಂದು ಸ್ಪಷ್ಟ ಗುರಿ ಹಾಗೂ ಅದನ್ನು ಸಾಧಿಸುವ ಹಾದಿಯನ್ನು ತೋರಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್- ಎಂಬ ಮಂತ್ರದೊಂದಿಗೆ ಭಾರತವನ್ನು ಮತ್ತು ಭಾರತೀಯರನ್ನು ಅಭಿವೃದ್ಧಿಯ ಹಾದಿಯಲ್ಲಿ ನಡೆಸುತ್ತಿದ್ದಾರೆ.
Related Articles
Advertisement
ಪಿಪಿಇ ಕಿಟ್, ಸ್ಯಾನಿಟೈಸರ್ ತಯಾರಿಕೆಯಲ್ಲಿ ತೊಡಗಿ ಸ್ವಾವಲಂಬಿ ದೇಶವಾಗಿದೆ. ಕೊರೊನಾ ಸಂದರ್ಭದಲ್ಲಿ ರೈತರು ದಾಖಲೆ ಪ್ರಮಾಣದಲ್ಲಿ ಬೆಳೆ ಬೆಳೆದಿದ್ದನ್ನು ಮನಗಂಡ ಮೋದಿ ಸರಕಾರ ದಾಖಲೆ ಪ್ರಮಾಣದಲ್ಲಿ ರೈತರಿಂದ ಅವರ ಉತ್ಪನ್ನಗಳನ್ನು ಖರೀದಿಸಿದೆ. ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ.
ಲಸಿಕಾ ಕಾರ್ಯಕ್ರಮ: ಕೋವಿಡ್ ವಿರುದ್ಧ ನಮ್ಮನ್ನು ನಾವು ಸುರಕ್ಷಿತವಾಗಿಟ್ಟುಕೊಳ್ಳಲು ನಮಗಿರುವ ಏಕಮಾತ್ರ ಅಸ್ತ್ರ ಲಸಿಕೆ ಎನ್ನುವುದನ್ನು ಅರಿತ ಪ್ರಧಾನಿಗಳು ವಿಶ್ವದಲ್ಲಿಯೇ ಅತೀ ದೊಡ್ಡ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ನಮ್ಮ ನಡುವಿನ ಸಾಧಕರಿಗೆ ಪ್ರಶಸ್ತಿ: ನಮ್ಮ ನಡುವಿನ ಅಸಾಮಾನ್ಯ ಸಾಧಕರನ್ನು ಗುರುತಿಸಿ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡುವಂತೆ ಮಾಡಿದ್ದು ನಮ್ಮ ಪ್ರಧಾನಿಗಳು. ಅನೇಕ ಪ್ರತಿಭಾವಂತರು ಅಸಾಧಾರಣ ಕೆಲಸಗಳನ್ನು ಎಲೆ ಮರೆಯ ಕಾಯಿಯಂತೆ ಮಾಡುತ್ತಿದ್ದಾರೆ. ಹೆಚ್ಚಿನವರು ಹೊರ ಪ್ರಪಂಚಕ್ಕೆ ತಿಳಿಯುವುದೇ ಇಲ್ಲ ಎಂದು ಅರಿತುಕೊಂಡು ಸ್ಫೂರ್ತಿದಾಯಕ, ಅಸಾಮಾನ್ಯರನ್ನು ಗುರುತಿಸಿ ಅವರಿಗೆ ಸಮ್ಮಾ¾ನ ಮಾಡುವ ಮೂಲಕ ಭಾರತದ ಮೂಲೆ ಮೂಲೆಗಳಲ್ಲಿ ಸದ್ದಿಲ್ಲದೇ ಕೆಲಸ ಮಾಡುತ್ತಿರುವ ಸಾಧಕರನ್ನು ಗುರುತಿಸುವ ಕೆಲಸ ಮಾಡಿದ್ದಾರೆ.
ನವೋದಯ: ಎಲ್ಲರನ್ನು ಒಳಗೊಳ್ಳುವ, ಯಾವುದೇ ತಾರತಮ್ಯವಿಲ್ಲದ ಸಮಸಮಾಜ ಕಟ್ಟುವ ನಿಟ್ಟಿನಲ್ಲಿ ಮೋದಿಯವರ ಆಶಯ- ಎಲ್ಲರೊಂದಿಗೆ ಎಲ್ಲರ ವಿಕಾಸ ಅವರ ಧ್ಯೇಯ ಮತ್ತು ಗುರಿ. ಈ ಗುರಿ ಸಾಧನೆಯ ಹಾದಿಯಲ್ಲಿ ಯಾವುದೇ ಅಡ್ಡಿ ಆತಂಕಗಳು ಎದುರಾದರೂ ಧೃತಿಗೆಡದೆ ಅಭಿವೃದ್ಧಿಯತ್ತ ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದಾರೆ. ಇದರ ಪರಿಣಾಮವಾಗಿ ಇಡೀ ವಿಶ್ವವೇ ಇಂದು ಭಾರತದತ್ತ ತಿರುಗಿ ನೋಡುವಂತಾಗಿದೆ. ಭಾರತದೀ ನೆಲದ ಮೇಲೆ ನವೋದಯವನ್ನು ತೆರೆದಿದೆ ಎಂದರೆ ಅತಿಶಯೋಕ್ತಿಯೇನಲ್ಲ.
ಅಂದಂದಿಗಾದನಿತು ಬುಡಕಟ್ಟಿ ಕಳೆ ತೆಗೆದುಚೆಂದಳಿರು ದಿನದಿನಮುಮೊಗೆಯೆ ನೀರೆರೆದು
ಸಂದಬಲದಿಂದ ಜಗದಶ್ವತ್ಥ ಸೇವೆಯಲಿ
ನಿಂದಿರುವುದಲೆ ಧರ್ಮ-ಮಂಕುತಿಮ್ಮ ಡಿವಿಜಿಯವರು ಕಗ್ಗದಲ್ಲಿ ಹೇಳಿರುವಂತೆ ನಮ್ಮ ಸಾಮಾಜಿಕ ಜೀವನ ದಲ್ಲಿರುವ ಕಳೆಗಳನ್ನು ಪ್ರತಿನಿತ್ಯ ತೆಗೆದು ದಣಿವಿರದ ಜೀವನೋತ್ಸಾಹ ದಿಂದ, ಸತತ ಪರಿಶ್ರಮದಿಂದ ಮತ್ತು ಸಾಮಾಜಿಕ ಕಳಕಳಿಯಿಂದ ಭಾರತವನ್ನು ಶ್ರೀಮಂತಗೊಳಿ ಸುತ್ತಿದ್ದಾರೆ ನರೇಂದ್ರ ಮೋದಿ. – ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ