Advertisement
ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಗುರುವಾರ ಯೋಧರ ಜತೆಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ, ಯೋಧರನ್ನುದ್ದೇಶಿಸಿ ಈ ಮಾತುಗಳನ್ನಾಡಿದ್ದಾರೆ.
ಜಗತ್ತಿನಲ್ಲಿ ಯುದ್ಧ ತಂತ್ರಗಳು ಬದಲಾವಣೆಯಾಗುತ್ತಿವೆ. ಅದಕ್ಕೆ ಪೂರಕವಾಗಿ ದೇಶದ ಸೇನಾಪಡೆಯೂ ಹೊಂದಿಕೊಂಡು ಅಂಥ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಅದಕ್ಕಾಗಿ ಗಡಿ ಪ್ರದೇಶಗಳಲ್ಲಿ ಬೇಕಾಗಿರುವ ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದರು. “ಯೋಧರ ಹೋರಾಟ, ತ್ಯಾಗಕ್ಕೆ ಮೆಚ್ಚುಗೆ ಇದೆ. ನಿಮ್ಮ ಮೇಲೆ ಭಾರತ ಮಾತೆಯ ಸುರಕ್ಷಾ ಕವಚ ಇದೆ. ನೀವು ದೇಶದ ಗಡಿಗಳನ್ನು ಕಾಯುತ್ತಿರುವುದರಿಂದಲಾಗಿಯೇ ದೇಶದ ಜನರು ನೆಮ್ಮದಿಯಿಂದ ಇರುವಂತಾಗಿದೆ’ ಎಂದು ಹೇಳಿದರು.
Related Articles
ದೇಶ ಹೊಂದಿರುವ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವುದು ಎಲ್ಲರ ಹೊಣೆ. ನಾವು ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ದೇಶದ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ (ಸ್ವಾವಲಂಬನೆ) ಹೊಂದುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ ಪ್ರಧಾನಿ, ರಕ್ಷಣಾ ಬಜೆಟ್‌ನ ಶೇ.65ರಷ್ಟು ಪ್ರಮಾಣವನ್ನು ದೇಶದೊಳಗೆ ಬಳಕೆ ಮಾಡಲಾಗುತ್ತದೆ. ಸದ್ಯ ದೇಶದಲ್ಲಿಯೇ ರಕ್ಷಣೆಗೆ ಸಂಬಂಧಿಸಿದ 200 ವಸ್ತುಗಳನ್ನು ಉತ್ಪಾದಿಸಲಾಗುತ್ತದೆ ಎಂದರು. ಅದನ್ನು ಶೀಘ್ರವೇ ಇನ್ನ ಷ್ಟು ವಿಸ್ತರಿಸಲಾಗುತ್ತದೆ ಎಂದೂ ಹೇಳಿ ದ ರು. ಕಾರ್ಯಕ್ರಮದಲ್ಲಿ ಯೋಧರಿಗೆ ಪ್ರಧಾನಿಯವರೇ ಖುದ್ದಾಗಿ ಸಿಹಿ ವಿತರಿಸಿದರು. 2019ರ ಬಳಿಕ ಪ್ರಧಾನಿಯವರು ಗಡಿ ಭಾಗದಲ್ಲಿರುವ ಯೋಧರ ಜತೆಗೆ ದೀಪಾವಳಿ ಆಚರಿಸುತ್ತಿದ್ದಾರೆ.
Advertisement
ಯೋಧರ ಜತೆ ಹಬ್ಬ ಆಚರಿಸಿದ ಉತ್ತರಾಖಂಡ ರಾಜ್ಯಪಾಲ, ಸಿಎಂಉತ್ತರಾಖಂಡದ ರಾಜ್ಯಪಾಲ ಲೆ.ಜ.(ನಿವೃತ್ತ) ಗುರ್ಮೀತ್ ಸಿಂಗ್ ಮತ್ತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೂ ಗಡಿಭಾಗದ ಗ್ರಾಮ ಮನಾದಲ್ಲಿರುವ ಯೋಧರ ಜತೆಗೆ ದೀಪಾವಳಿ ಆಚರಿಸಿಕೊಂಡಿದ್ದಾರೆ. ಚಮೋಲಿ ಜಿಲ್ಲೆಯಲ್ಲಿರುವ ಈ ಗ್ರಾಮ, ಚೀನಾ ಜತೆಗೆ ಗಡಿಯನ್ನು ಹೊಂದಿಕೊಂಡಿರುವ ದೇಶದ ಕೊನೆಯ ಭಾಗವಾಗಿದೆ. ಜತೆಗೆ ಬದರಿನಾಥ ಕ್ಷೇತ್ರದಿಂದ ಕೆಲವೇ ಕಿಲೋಮೀಟರ್‌ಗಳ ದೂರದಲ್ಲಿದೆ. ಭಾರತ-ಪಾಕ್ ಸಿಹಿ ವಿನಿಮಯ
ಗುಜರಾತ್ ಮತ್ತು ರಾಜಸ್ಥಾನದ ಗಡಿ ಪ್ರದೇಶಗಳಲ್ಲಿ ಭಾರತದ ಬಿಎಸ್‌ಎಫ್ ಯೋಧರು ಮತ್ತು ಪಾಕಿಸ್ತಾನದ ರೇಂಜರ್ ಗಳು ದೀಪಾವಳಿ ನಿಮಿತ್ತ ಗುರುವಾರ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ. ಹಬ್ಬಗಳ ಸಮಯದಲ್ಲಿ ಈ ರೀತಿ ಸಿಹಿ ವಿನಿಮಯ ಹಾಗೂ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಪರಸ್ಪರರ ನಡುವೆ ಸಾಮರಸ್ಯ, ಭಾತೃತ್ವ ಹೆಚ್ಚಿಸುತ್ತದೆ. ಅಲ್ಲದೇ, ಗಡಿಯುದ್ದಕ್ಕೂ ಸ್ನೇಹ ಪರ ಮತ್ತು ಶಾಂತಿಯುತ ವಾತಾವರಣ ನಿರ್ಮಾಣವಾಗುವುದಕ್ಕೂ ಸಹಾಯ ಮಾಡುತ್ತದೆ ಎಂದು ಬಿಎಸ್‌ಎಫ್ ಹೇಳಿದೆ. ಇದನ್ನೂ ಓದಿ : ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರಿಡುವಂತೆ ಒತ್ತಾಯಿಸಿ ಮೌನ ಪ್ರತಿಭಟನೆ