Advertisement
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ಹುಟ್ಟುಹಬ್ಬದ ಅಂಗವಾಗಿ ಬುಧವಾರ, ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ಬುಧವಾರ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
Related Articles
ಲಕ್ನೋದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಾಜಪೇಯಿಯವರ 25 ಅಡಿ ಎತ್ತರವುಳ್ಳ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಗೊಳಿಸಿದರು. ಈ ವಿಶ್ವವಿದ್ಯಾಲಯಕ್ಕಾಗಿ ಉತ್ತರ ಪ್ರದೇಶ ಸರಕಾರ 50 ಎಕರೆ ಜಮೀನನ್ನು ನೀಡಿದೆ. ಈ ಸಮಾರಂಭದಲ್ಲಿ, ಬಿಜೆಪಿ ಧುರೀಣ ಎಲ್.ಕೆ. ಆಡ್ವಾಣಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ವಾಜಪೇಯಿ ಕುಟುಂಬ ಸದಸ್ಯರು ಹಾಜರಿದ್ದರು. ವಾಜಪೇಯಿ ಅವರು ಸಂಸತ್ತಿನಲ್ಲಿ ಲಕ್ನೋವನ್ನು ಐದು ಬಾರಿ ಪ್ರತಿನಿಧಿಸಿದ್ದರು.
Advertisement
ಗಣ್ಯರಿಂದ ಪುಷ್ಪನಮನಮಾಜಿ ಪ್ರಧಾನಿ ವಾಜಪೇಯಿಯವರ 95ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿರುವ ಅವರ ಸ್ಮಾರಕವಾದ “ಸದೈವ ಅಟಲ್’ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ವಾಜಪೇಯಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಧುರೀಣ ಎಲ್.ಕೆ. ಆಡ್ವಾಣಿ ಹಾಗೂ ವಾಜಪೇಯಿ ಕುಟುಂಬದ ಸದಸ್ಯರು ಸಹಿತ ಹಲವಾರು ಮಂದಿ ಪುಷ್ಪನಮನ ಸಲ್ಲಿಸಿದರು. ಸುರಂಗಕ್ಕೆ ಅಟಲ್ ಹೆಸರು
ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣಗಳಾದ ಮಲಾಲಿಯಿಂದ ಕಾಶ್ಮೀರದ ಲೇಹ್ ಸರೋವರದ ನಡುವೆ ನಿರ್ಮಿಸಲಾಗುತ್ತಿರುವ 8.8 ಕಿ.ಮೀ. ಉದ್ದದ ರೋಹrಂಗ್ ಸುರಂಗ ಮಾರ್ಗಕ್ಕೆ ಅಟಲ್ ಬಿಹಾರಿ ವಾಜಪೇಯಿ ಹೆಸರಿಡಲಾಗಿದೆ. ನಾಮಕರಣ ನೆರವೇರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಿಮಾಚಲ ಪ್ರದೇಶದ ಬಹು ದಿನಗಳ ಆಸೆಯಂತೆ ನಾಮಕರಣ ನೆರವೇರಿಸಲಾಗಿದೆ ಎಂದರು. ಸರ್ವ ಋತುವಿನ ಈ ಸುರಂಗ ಮಾರ್ಗವು, ಮನಾಲಿ- ಲೇಹ್ ನಡುವಿನ ಅಂತರವನ್ನು 46 ಕಿ.ಮೀ.ಗಳಷ್ಟು ಕಡಿಮೆ ಮಾಡಲಿದೆ. ಅಲ್ಲದೆ, ಸಮುದ್ರ ಮಟ್ಟದಿಂದ 9842.52 ಅಡಿ ಎತ್ತರದಲ್ಲಿ ನಿರ್ಮಾಣವಾಗುತ್ತಿರುವ ಇದು, ವಿಶ್ವದ ಅತೀ ಎತ್ತರದ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. 2020ಕ್ಕೆ ಇದು ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ. ಅಟಲ್ ಭೂಜಲ ಯೋಜನೆ ಉದ್ಘಾಟನೆ
ದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಅಟಲ್ ಭೂಜಲ ಯೋಜನೆಗೆ ಪ್ರಧಾನಿ ಮೋದಿ ಬುಧವಾರ ಚಾಲನೆ ನೀಡಿದರು. ಅದಕ್ಕಾಗಿ ಒಟ್ಟು 6 ಸಾವಿರ ಕೋಟಿ ರೂ. ಮೀಸಲಾಗಿ ಇರಿಸಲಾಗಿದೆ. ಕರ್ನಾಟಕ ಸಹಿತ ಏಳು ರಾಜ್ಯಗಳ 78 ಜಿಲ್ಲೆಗಳ 8,300 ಹಳ್ಳಿಗಳಿಗೆ ಯೋಜನೆ ಲಾಭ ಸಿಗಲಿದೆ. ಗ್ರಾ.ಪಂ.ಗಳ ಮೂಲಕ ಅದನ್ನು ಅನುಷ್ಠಾನಗೊಳಿಸಲಾಗುತ್ತದೆ. ಪಂಚಾಯಿತಿ ಮಟ್ಟದಲ್ಲಿ ಅಂತರ್ಜಲ ಹೆಚ್ಚಿಸಲು ಪ್ರೋತ್ಸಾಹದಾಯಕ ಕ್ರಮ ಕೈಗೊಳ್ಳಲಾಗುತ್ತದೆ. ಅಂತರ್ಜಲ ಮಟ್ಟ ಏರಿಕೆ ಮಾಡುವ ನಿಟ್ಟಿನಲ್ಲಿ ಹಲವು ಯೋಜನೆ ಜಾರಿ ಮಾಡುವ ರಾಜ್ಯಗಳಿಗೆ ಪ್ರೋತ್ಸಾಹ, ನೀರಿನ ಬಳಕೆ ಮಾಡುವ, ಅಂತರ್ಜಲ ನಿರ್ವಹಣೆ ಮೇಲೆ ನಿಗಾ ಈ ಯೋಜನೆ ವ್ಯಾಪ್ತಿಯಲ್ಲಿ ಬರುತ್ತದೆ.