Advertisement

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

01:00 AM May 28, 2024 | Team Udayavani |

ಉಡುಪಿ: ಕರಾವಳಿಯಲ್ಲಿ ಅತ್ಯಗತ್ಯ ವಾಗಿರುವ ಕಾಲುಸಂಕಗಳನ್ನು ನರೇಗಾ ಯೋಜನೆ ಯಡಿ ನಿರ್ಮಿಸಲು ಜಿಲ್ಲಾ ಪಂಚಾಯತ್‌ ಹಾಗೂ ಜಿಲ್ಲಾಡಳಿತಗಳು ಕಳೆದ ವರ್ಷ ಎಲ್ಲ ಪಂಚಾಯತ್‌ಗಳಿಗೂ ಅನುಮತಿ ನೀಡಿದ್ದವು. ಹೀಗಾಗಿ ಅನೇಕ ಗ್ರಾ.ಪಂ.ಗಳಲ್ಲಿ ಕಾಲುಸಂಕ ನಿರ್ಮಾಣ ಆಗಿದೆ. ಆದರೆ ಈಗ ಸರಕಾರ ನರೇಗಾದಡಿ ಕಾಲುಸಂಕ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದಿರುವುದು ಗ್ರಾ.ಪಂ.ಗಳಲ್ಲಿ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಜಿ.ಪಂ. ಕೂಡ ಇಕ್ಕಟ್ಟಿಗೆ ಸಿಲುಕಿದೆ.

Advertisement

ನರೇಗಾದಡಿ ಕಾಲುಸಂಕ ನಿರ್ಮಿಸಲು ಅವಕಾಶ ಕೋರಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯುವ ಮೊದಲೇ ಜಿಲ್ಲೆಯಲ್ಲಿ ಕಾಲುಸಂಕ ನಿರ್ಮಿಸಲು ಸೂಚನೆ ಹೊರಡಿಸಲಾಗಿತ್ತು. ಅನಂತರ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಆಯುಕ್ತರು ಕೇಂದ್ರ ಸಚಿವಾಲಯಕ್ಕೆ ಪತ್ರ ಬರೆದು ಅನುಮತಿ ಕೋರಿದ್ದರು. ಆದರೆ ಕೇಂದ್ರದಿಂದ ನರೇಗಾದಡಿ ಕಾಲುಸಂಕ ನಿರ್ಮಿಸಲು ಅನುಮತಿ ಕೊಟ್ಟಿಲ್ಲ, ಬದಲಾಗಿ ಮೋರಿಗಳನ್ನು ಸ್ಥಾಪಿಸಬಹುದು ಎಂದಷ್ಟೇ ಹೇಳಿದೆ. ಹೀಗಾಗಿ ಈಗ ಕಾಲುಸಂಕ ನಿರ್ಮಾಣಕ್ಕೆ ನರೇಗಾದಡಿ ಅವಕಾಶ ಕೊಡಲಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಹಣ ಬರುತ್ತಿಲ್ಲ
ಜಿ.ಪಂ. ಸೂಚನೆಯಂತೆ 7 ಮೀಟರ್‌ಗಿಂತ ಕಡಿಮೆ ವ್ಯಾಪ್ತಿಯ ಕಾಲು ಸಂಕಗಳನ್ನು ನರೇಗಾದಡಿ ನಿರ್ಮಿಸಲು ಗ್ರಾ.ಪಂ.ಗಳಲ್ಲಿ ಕಳೆದ ವರ್ಷ ಕ್ರಿಯಾ ಯೋಜನೆಯಲ್ಲಿ ಜೋಡಿಸಿ ಜಿ.ಪಂ.ಗೆ ಕಳುಹಿಸಿಕೊಡಲಾಗಿತ್ತು. ಅದರಂತೆ ಅನೇಕ ಕಡೆ ಕಾಲುಸಂಕ ನಿರ್ಮಾಣ ಆಗಿದೆ. ಆದರೀಗ ನರೇಗಾದಡಿ ಕಾಲುಸಂಕ ನಿರ್ಮಿಸಲು ಅವಕಾಶವಿಲ್ಲ ಎನ್ನುವ ಸರಕಾರದ ನಿರ್ದೇಶನವು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಲುಸಂಕ ನಿರ್ಮಿಸಿದ ಗುತ್ತಿಗೆದಾರರಿಗೆ ಸಂಕಷ್ಟ ತಂದೊಡ್ಡಿದೆ. ಕೂಲಿಯಾಗಿ ದುಡಿದವರ ಹಣ ಅವರ ಖಾತೆಗೆ ಸಂದಾಯವಾಗಿದೆ. ಆದರೆ ಸಾಮಗ್ರಿ ಹಾಗೂ ಯಂತ್ರೋಪಕರಣಕ್ಕೆ ಸಂಬಂಧಿಸಿ ಶೇ. 40ರಷ್ಟು ಅನುದಾನ ಇನ್ನೂ ಬಂದಿಲ್ಲ.

ಈಗ ಅವಕಾಶವೇ ನೀಡುತ್ತಿಲ್ಲ
ನರೇಗಾದಡಿ ಕಾಲುಸಂಕ ನಿರ್ಮಿಸಲು ಅವಕಾಶವಿಲ್ಲ ಎಂದು ಸರಕಾರ ಲಿಖೀತವಾಗಿ ನಿರ್ದೇಶನ ನೀಡಿರುವುದರಿಂದ ಜಿ.ಪಂ.ಗಳು ಎಚ್ಚೆತ್ತುಕೊಂಡಿವೆ. ಈಗ ನರೇಗಾದಡಿ ಕಾಲುಸಂಕ ನಿರ್ಮಿಸಲು ಅನುಮತಿ ನೀಡುತ್ತಿಲ್ಲ. ಪ್ರಸ್ತಾವನೆ ನೀಡಿದ ಗ್ರಾ.ಪಂ.ಗಳಿಗೆ ನರೇಗಾದಡಿ ಅವಕಾಶ ನೀಡಲು ಆಗುತ್ತಿಲ್ಲ ಎಂದಷ್ಟೇ ಹೇಳುತ್ತಿದ್ದಾರೆ. ಯಾಕೆ ಅವಕಾಶ ಇಲ್ಲ ಮತ್ತು ಆಗಿರುವ ಸಮಸ್ಯೆ ಏನು ಎಂದು ಸ್ಪಷ್ಟವಾಗಿ ಹೇಳದೆ ಇರುವುದರಿಂದ ತಳಮಟ್ಟದಲ್ಲಿ ಗೊಂದಲ ಹಾಗೆಯೇ ಉಳಿದಿದೆ.

7 ಮೀ. ಕಡಿಮೆ
ಉದ್ದದ ಕಾಲುಸಂಕ
2 ವರ್ಷಗಳ ಹಿಂದೆ ಬೈಂದೂರು ತಾಲೂಕಿನ ಕಾಲೊ¤àಡು ಗ್ರಾಮದಲ್ಲಿ ಮಗುವೊಂದು ಕಾಲುಸಂಕದಿಂದ ನೀರಿಗೆ ಬಿದ್ದು ಮೃತಪಟ್ಟ ಬಳಿಕ ಉಭಯ ಜಿಲ್ಲೆಯಲ್ಲೂ ಗ್ರಾ.ಪಂ. ಪಿಡಿಒಗಳ ಮೂಲಕ ಕಾಲು ಸಂಕಗಳ ಸ್ಥಿತಿಗತಿ ಸರ್ವೇ ಮಾಡಲಾಗಿತ್ತು. ಎಲ್ಲ ಪಿಡಿಒಗಳು ತಮ್ಮ ವ್ಯಾಪ್ತಿಯ ಕಾಲುಸಂಕಗಳು, ಅಗತ್ಯವಾಗಿ ಆಗಬೇಕಿರುವ ಕಾಲುಸಂಕಗಳು, ದುರಸ್ತಿ ಕಾಣಬೇಕಿರುವ (ಕಚ್ಚಾ) ಕಾಲುಸಂಕಗಳ ಮಾಹಿತಿಯನ್ನು ಜಿ.ಪಂ.ಗೆ ಒದಗಿಸಿದ್ದರು. ಅದರಂತೆ 7 ಮೀಟರ್‌ಗಿಂತ ಕಡಿಮೆ ಉದ್ದದ ಕಾಲುಸಂಕಗಳನ್ನು ನರೇಗಾದಡಿ ನಿರ್ಮಿಸಲು ಜಿ.ಪಂ. ಅನುಮತಿ ನೀಡಿತ್ತು. 7 ಮೀಟರ್‌ಗಿಂತ ದೊಡ್ಡದಾದ ಕಾಲುಸಂಕ ಅಥವಾ ಅಣೆಕಟ್ಟು ಅಥವಾ ಕಿಂಡಿ ಅಣೆಕಟ್ಟು ಮತ್ತು ಸೇತುವೆಗಳನ್ನು ಸಣ್ಣ ನೀರಾವರಿ ಇಲಾಖೆ ಮತ್ತು ಪಿಡಬ್ಲ್ಯುಡಿ ಇಲಾಖೆ ಮಾಡಲಾಗುತ್ತಿದೆ.

Advertisement

ಇನ್ನೊಮ್ಮೆ ಮನವರಿಕೆ
ನರೇಗಾದಡಿ ಕಾಲುಸಂಕ ನಿರ್ಮಾಣಕ್ಕೆ ಅವಕಾಶ ಕೋರಿ ಇನ್ನೊಮ್ಮೆ ಕೇಂದ್ರಕ್ಕೆ ಪತ್ರ ರವಾನೆ ಮಾಡಲಿದ್ದೇವೆ. ಕರಾವಳಿ ಭಾಗದಲ್ಲಿ ಸಣ್ಣ ಸಣ್ಣ ಕಾಲು ಸಂಕಗಳು ಅವಶ್ಯವಾಗಿ ಆಗಬೇಕಿರುವು ದರಿಂದ ನರೇಗಾದಡಿ ಅವಕಾಶ ಕೊಡ ಬೇಕಾಗುತ್ತದೆ. ಕೇಂದ್ರ ಗ್ರಾಮೀಣಾಭಿ ವೃದ್ಧಿ ಸಚಿವಾಲಯಕ್ಕೆ ಸಮಸ್ಯೆಯ ಮನವರಿಕೆ ಮಾಡಿ ಅವಕಾಶ ಪಡೆಯ ಲಾಗುವುದು ಎಂದು ರಾಜ್ಯ ಪಂಚಾ ಯತ್‌ ರಾಜ್‌ ಹಾಗೂ ಗ್ರಾಮೀಣಾಭಿ ವೃದ್ಧಿ ಇಲಾಖೆಯ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯ ಅಧಿಕಾರಿ ಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

- ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next