Advertisement

ನರೇಗಾ: ಮಧುಗಿರಿ ಫ‌ಸ್ಟ್‌, ತುಮಕೂರು ಲಾಸ್ಟ್‌

05:43 PM Nov 08, 2020 | Suhan S |

ತುಮಕೂರು: ನರೇಗಾ ಕಾಮಗಾರಿ ಅನುಷ್ಟಾನದಡಿ ನ.6ರವರೆಗಿನ ಎಂಐ ಎಸ್‌ ವರದಿ ಪ್ರಕಾರ, ಜಿಲ್ಲೆಯಲ್ಲಿ55.18 ಲಕ್ಷ ಮಾನವ ದಿನ ಸೃಜನೆ ಮಾಡುವ ಮೂಲಕ ಜಿಲ್ಲೆ ಪ್ರಗತಿಯತ್ತ ಸಾಗುತ್ತಿದೆ ಎಂದು ಜಿಪಂ ಸಿಇಒ ಶುಭ ಕಲ್ಯಾಣ್‌ ತಿಳಿಸಿದರು.

Advertisement

ನರೇಗಾ ಕಾಮಗಾರಿಯಲ್ಲಿಯೇ ಮಧುಗಿರಿ ತಾಲೂಕಿನಲ್ಲಿ ನರೇಗಾ ಕಾಮಗಾರಿಗಳ ಅನುಷ್ಟಾನದಲ್ಲಿ ಮೊದಲನೇ ಸ್ಥಾನದಲ್ಲಿದ್ದು ತುಮಕೂರುತಾಲೂಕು ಕೊನೇ ಸ್ಥಾನದಲ್ಲಿದೆ ಎಂದು ತಿಳಿಸಿದರು. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಯಾವುದೇ ವ್ಯಕ್ತಿ ಅಥವಾ ಕುಟುಂಬ ಕಾಮಗಾರಿ ಕೈಗೊಳ್ಳ ಬೇಕೆಂದರೆ, ಉದ್ಯೋಗ ಚೀಟಿ ಹೊಂದುವುದು ಕಡ್ಡಾಯ. ಈ ಯೋಜನೆಯಡಿ ದಿನಕ್ಕೆ ಗಂಡು, ಹೆಣ್ಣಿಗೆ 275 ರೂ.ಗಳ ಸಮಾನ ಕೂಲಿ ನೀಡಲಾಗುತ್ತಿದೆ. ಆಸಕ್ತ ರೈತರು, ಗ್ರಾಮಸ್ಥರು ಕೆಲಸಕ್ಕೆ ಅಥವಾ ಕಾಮಗಾರಿ ಬೇಡಿಕೆಗೆ ಹತ್ತಿರದ ಗ್ರಾಪಂಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಮನವಿ ಮಾಡಿದ್ದಾರೆ.

ರೈತರ ಕ್ರಿಯಾ ಯೋಜನೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2021-22ನೇ ಸಾಲಿನ ಕಾರ್ಮಿಕರ ಆಯವ್ಯಯತಯಾರಿಸುವ ಸಲುವಾಗಿ ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ರೈತರ ಕ್ರಿಯಾ ಯೋಜನೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮನವಿ ಮಾಡಿದ್ದಾರೆ.

ಈ ಅಭಿಯಾನದಡಿ ರೈತರು ವೈಯಕ್ತಿಕ ಕಾಮಗಾರಿಗಳ ಬೇಡಿಕೆಯನ್ನು ಆಯಾ ಗ್ರಾಪಂಗಳಲ್ಲಿ ಇಟ್ಟಿರುವ ಕಾಮಗಾರಿ ಬೇಡಿಕೆ ಪೆಟ್ಟಿಗೆಯಲ್ಲಿ ಹಾಕುವ ಮೂಲಕ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ದೊರೆಯುವ ಸೌಲಭ್ಯ ಪಡೆಯಬಹುದಾಗಿದೆ ಎಂದರು.

ಗ್ರಾಮದ ಪ್ರತಿಯೊಬ್ಬ ರೈತರೂ ಈ ಕ್ರಿಯಾ ಯೋಜನೆಯಲ್ಲಿ ಪಾಲ್ಗೊಳ್ಳ ಬೇಕೆಂಬ ಉದ್ದೇಶದಿಂದ ಗ್ರಾಪಂಗಳಲ್ಲಿ ಆಟೋಪ್ರಚಾರದಮೂಲಕ ಯೋಜನೆಯಡಿ ದೊರೆಯುವ ಸೌಲಭ್ಯಗಳ ಬಗ್ಗೆ ಪ್ರಚಾರ ಮಾಡಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ರೈತರು ತಮ್ಮ ಸ್ವಂತ ಜಮೀನುಗಳಲ್ಲಿ ಕೈಗೊಳ್ಳಬಹುದಾದ ಕಾಮಗಾರಿ ಸೇರಿದಂತೆ ಇತರೆ ವೈಯಕ್ತಿಕ ಕಾಮಗಾರಿಗಳಿಗೆ ಅರ್ಜಿ ಮೂಲಕ ಹಾಗೂ ನರೇಗಾ ವೆಬ್‌ಸೈಟ್‌ ಮೂಲಕವು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

Advertisement

ಜಿಲ್ಲೆಯ ಎಲ್ಲಾ ತಾಲೂಕುಗಳಿಂದ 3500ಕ್ಕೂ ಹೆಚ್ಚು ಕಾಮಗಾರಿ ಬೇಡಿಕೆ ಅರ್ಜಿಗಳು ನರೇಗಾ ವೆಬ್‌ಸೈಟ್‌ ಮೂಲಕ ಸಲ್ಲಿಕೆಯಾಗಿವೆ. ಈ ಅರ್ಜಿಗಳ ಸಂಖ್ಯೆ ಮತ್ತಷ್ಟು ಹೆಚ್ಚಬೇಕಿದೆ. ಗ್ರಾಮಸ್ಥರು ಹಾಗೂ ರೈತರು ವೈಯಕ್ತಿಕ ಕಾಮ ಗಾರಿಗಳ ಬೇಡಿಕೆಯನ್ನು ಹೆಚ್ಚು ಹೆಚ್ಚುಸಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.

ಬಚ್ಚಲು ಗುಂಡಿ ನಿರ್ಮಾಣ ಪ್ರಗತಿ :  ಜಿಲ್ಲೆಗೆ16500 ಬಚ್ಚಲು ಗುಂಡಿಗಳ ನಿರ್ಮಾಣದ ಗುರಿ ನೀಡಿದ್ದು, ಈ ಪೈಕಿ ಈಗಾಗಲೇ 11518 ಕಾಮಗಾರಿಗೆ ಅನುಮೋದನೆ ದೊರೆತು, ಬಹುತೇಕ ಕಾಮಗಾರಿ ನಿರ್ಮಾಣ ಹಂತದಲ್ಲಿದ್ದರೆ,ಕೆಲವುಕಾಮಗಾರಿ ಈಗಾಗಲೇ ಪೂರ್ಣಗೊಂಡಿವೆ. ಗ್ರಾಮೀಣ ಭಾಗದಲ್ಲಿ ಅದರಲ್ಲೂ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಭಾಗಗಳಲ್ಲಿ ಗ್ರಾಮಸ್ಥರು ಬಚ್ಚಲು ಗುಂಡಿ ನಿರ್ಮಿಸಿ ಮನೆಯ ತ್ಯಾಜ್ಯ ನೀರನ್ನು ಈ ಗುಂಡಿಯಲ್ಲಿ ಬಿಡುವುದರಿಂದ ಗ್ರಾಮದ ಜನತೆ ಆರೋಗ್ಯದಿಂದ ಜೀವನ ಸಾಗಿಸಲು ಸಹಕಾರಿ ಆಗುತ್ತದೆ ಎಂದು ಸಿಇಒ ಶುಭಕಲ್ಯಾಣ್‌ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next