Advertisement
ಸಮೀಪದ ಏಳುಬೆಂಚೆ ಗ್ರಾಮದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಾತನಾಡಿದರು.
Related Articles
Advertisement
ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷ ಮಾತನಾಡಿ, ಸ್ಥಳವನ್ನು ಪರಿಶೀಲನೆ ಮಾಡಿ ಎಸ್ಟುಮೆಂಟ್ ಮಾಡಿ ಮುಂದಿನ ದಿನಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ತಿಮ್ಮಲಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಬೋರ್ ವೆಲ್ ಗಳು ನಿನಗುದಿಗೆ ಬಿದ್ದು ಹೋಗಿವೆ. ಬೇಸಿಗೆ ಸಮೀಪಸುತ್ತಿದ್ದು, ಬೋರ್ ವೆಲ್ ವ್ಯವಸ್ಥೆ ಮಾಡಿಕೊಡಬೇಕೆಂದು ಸಭೆಯಲ್ಲಿ ಗ್ರಾಮಸ್ಥರು ಪ್ರಸ್ತಾಪಿಸಿದರು.
ಈಗಾಗಲೇ ತಿಮ್ಮಲಾಪುರ ಗ್ರಾಮಕ್ಕೆ 4 ಬೋರ್ ವೆಲ್ ಮಂಜೂರು ಮಾಡಲಾಗಿದೆ. ಅದಕ್ಕೆ ಬೇಕಾದ ಸಾಮಗ್ರಿಗಳು ಬಂದಿದ್ದು ಶೀಘ್ರವೇ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಏಳುಬೆಂಚಿ ಗ್ರಾಪಂ ಯಲ್ಲಿ ಕೆರೆ ನಿರ್ಮಾಣ ಗೊಂಡು 3 ರಿಂದ 4 ವರ್ಷ ಕಳೆದರೂ ಕರೆಯಿಂದ ಗ್ರಾಮಗಳಿಗೆ ಇನ್ನೂ ನೀರು ಸರಬರಾಜು ಆಗುತ್ತಿಲ್ಲ ಕೆಲ ಪ್ರದೇಶಗಳಿಗೆ ಮಾತ್ರ ತಲುಪುತ್ತಿವೆ ಆದ್ದರಿಂದ ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೇನಾ ಕೆರೆ ಎಂದು ಗ್ರಾಮದ ಮುಖಂಡರು ಪ್ರಶ್ನಿಸಿದರು.
ಇದಲ್ಲದೆ ಗ್ರಾಪಂ ಗೆ ತ್ಯಾಜ್ಯ ವಿಲೇವಾರಿ ವಾಹನಗಳು ನೇಮಕಗೊಂಡು ತಿಂಗಳುಗಳೇ ಗತಿಸಿದರು ಗ್ರಾಮದಲ್ಲಿ ವಾಹನಗಳು ತ್ಯಾಜ್ಯ ವಿಲೇವಾರಿ ಮಾಡಲು ಮುಂದಾಗದೆ ಎಲ್ಲಂದರಲ್ಲಿ ಬಿದ್ದು ಗಬ್ಬು ನಾರುತ್ತಿವೆ ಎಂದು ಆರೋಪಿಸಿದರು.
ಸಭೆಯ ಕೊನೆಯದಲ್ಲಿ 2021-22 ನೇ ಸಾಲಿನಲ್ಲಿ ವಸತಿ ರಹಿತ 40 ಪಲಾನುಭವಿಗಳಿಗೆ ಆಶ್ರಮ ಮನೆಗಳನ್ನು ಆಯ್ಕೆ ಮಾಡಲಾಯಿತು. ಇದರಲ್ಲಿ ಅಂಬೇಡ್ಕರ್ ಯೋಜನೆ ಅಡಿಯಲ್ಲಿ 10 ಹಾಗೂ ಬಸವ ವಸತಿ ಯೋಜನೆ ಅಡಿಯಲ್ಲಿ 30 ಮನೆಗಳನ್ನು ಆಯ್ಕೆ ಪ್ರಕ್ರಿಯೆ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ, ಸರ್ವ ಗ್ರಾಪಂ ಸದಸ್ಯರು, ಗ್ರಾಮದ ಮುಖಂಡರು, ಸಂಘ ಸಂಸ್ಥೆಯ ಮುಖಂಡರು ಸಭೆಯಲ್ಲಿ ಹಾಜರಿದ್ದರು.