Advertisement

ನರೇಗಾ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಒ

09:04 PM May 06, 2021 | Team Udayavani |

ತುಮಕೂರು:ಕೊರಟಗೆರೆ ತಾಲೂಕಿನ ವಿವಿಧಭಾಗಗಳಲ್ಲಿ ಪ್ರಗತಿಯ ಲ್ಲಿ ರುವ ನರೇ ಗಾಯೋಜನೆ ಕಾಮ ಗಾರಿ ಯನ್ನು ಜಿಪಂ ಸಿಇಒಡಾ.ಕೆ.ವಿದ್ಯಾಕುಮಾರಿ ಸ್ಥಳಕ್ಕೆ ಭೇಟಿ ನೀಡಿಪರಿಶೀಲನೆ ನಡೆಸಿದರು.

Advertisement

ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗಹೋಬಳಿ ವ್ಯಾಪ್ತಿಯ ಜೆಟ್ಟಿ ಅಗ್ರಹಾರ ಗ್ರಾಪಂವ್ಯಾಪ್ತಿಯ ಕಲ್ಲುಮನೆ ತೋಟ ಗ್ರಾಮದ ಸಂಜೀವಮ್ಮ ಕೋಂ ವೆಂಕಟಗಿರಯಪ್ಪನವರ ಜಮೀ ನಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಕೃಷಿಹೊಂಡಕಾಮ ಗಾರಿ ಯನ್ನು ವೀಕ್ಷಣೆ ಮಾಡಿದ ಅವರು,ನರೇಗಾ ಯೋಜನೆಯಡಿ ನಿಗದಿತ ಸಮಯಕ್ಕೆಕೂ ಲಿ ಹಣ ಪಾವತಿ ಯಾಗಿರುವ ಬಗ್ಗೆ ಕೂಲಿಕಾರ್ಮಿ ಕರೊಂದಿಗೆ ಚರ್ಚೆ ನಡೆಸಿದರು.

ಗ್ರಾಮೀ ಣ ಭಾಗಕ್ಕೆ ಬೆಂಗಳೂರು ಸೇರಿದಂತೆಇತರೆ ನಗರ ಪ್ರದೇಶದಿಂದ ಗ್ರಾಮ ಗಳಿಗೆ ಬಂದಿದ್ದರೆ, ಅವರಿಗೆ ಉದ್ಯೋಗ ಚೀಟಿ ಇದ್ದಲಿ ಅವರಿಗೂ ನರೇಗಾ ಅಡಿ ಕೆಲಸ ನೀಡ ಲಾಗುವುದು.ಇದನ್ನು ಗ್ರಾಮೀಣ ಭಾಗದ ಜನ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.ನಂತರ ಕಂಬದಹಳ್ಳಿ ಗ್ರಾಮದ ಸರ್ವೇನಂಬರ್‌ 5ರ ಅರಣ್ಯ ಪ್ರದೇಶದಲ್ಲಿ ಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದಅವರು, ಮಳೆಗಾಲ ಆರಂಭಕ್ಕೂ ಮುನ್ನ ಜಲಸಂರಕ್ಷಣಾ ಕಾಮ ಗಾರಿ ಕೈಗೊಳ್ಳುವುದರಿಂದ ಮಳೆ ಗಾಲದಲ್ಲಿ ಸುರಿದ ನೀರು ಸಂಗ್ರಹಗೊಂಡು ಅಂತರ್ಜಲ ವೃದ್ಧಿಯಾಗುತ್ತದೆ ಎಂದರು.

ಬುಕ್ಕಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಟ್ಲಹಳ್ಳಿ ಗ್ರಾಮದಲ್ಲಿ ನಿರ್ಮಾಣ ಗೊಂಡಿದ್ದನೂತನ ಅಂಗನವಾಡಿ ಕಟ್ಟಡವನ್ನು ವೀಕ್ಷಿಸಿಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಅಂಗನವಾಡಿ ಕಾರ್ಯಕರ್ತರೊಂದಿಗೆ ಮಾತ ನಾಡಿ ದಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾ ಣಇಲಾಖೆ ವತಿಯಿಂದ ನೀಡಲಾಗುವ ಸೌಲ ಭ್ಯಅರ್ಹರಿಗೆ ತಲುಪಿಸುವಂತೆ ತಾಕೀತು ಮಾಡಿದರು.

ಬುಕ್ಕ ಪಟ್ಟಣ ಗ್ರಾಮದ ದೊಡ್ಡಮ್ಮದೇವಸ್ಥಾನದ ಹತ್ತಿರ ನರೇಗಾಯೋಜ ನೆ ಯಡಿ ಪ್ರಗತಿಯಲ್ಲಿದ್ದ ಕಲ್ಯಾಣಿ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿ, ಜಲ ಸಂರಕ್ಷಣಾ ಕಾಮಗಾರಿಗೆ ಹೆಚ್ಚು ಆದ್ಯತೆ ನೀಡುವಂತೆನೆರೆದಿದ್ದ ಅಧಿಕಾರಿಗಳಿಗೆ ಸೂಚಿಸಿ ದರು.ಕೊರಟಗೆರೆ ತಾಪಂ ಇಒ ಎಸ್‌.ಶಿವಪ್ರಕಾಶ್‌,ಸಹಾಯಕ ಕಾರ್ಯಪಾಲಕ ಅಭಿಯಂತರಮಂಜುನಾಥ್‌, ಕೊರಟಗೆರೆ ತಾಪಂಸಹಾಯಕ ನಿರ್ದೇಶಕ ಕೆ.ಬಿ.ನಾಗರಾಜ್‌,ತಾಲೂಕು ಐಇಸಿ ಸಂಯೋಜಕ ಟಿ.ಕೆ.ವಿನುತ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಟಿ.ಎಸ್‌.ಮಂಜಮ್ಮ, ಎನ್‌.ಸುನೀಲ್‌ಕುಮಾರ್‌ ಹಾಗೂ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next