Advertisement

ನರೇಗಾ ಕಾರ್ಮಿಕರ ವೇತನ ಪಾವತಿಗೆ ಆಗ್ರಹ

03:48 PM Jul 23, 2019 | Team Udayavani |

ಶಿರಹಟ್ಟಿ: ಹುಲ್ಲೂರ ಗ್ರಾಪಂ ವ್ಯಾಪಿಯಲ್ಲಿನ ನರೇಗಾ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸಿದ ಕಾರ್ಮಿಕರಿಗೆ ಮೂರು ತಿಂಗಳಾದರೂ ವೇತನ ನೀಡಿಲ್ಲ. ಹೀಗಾಗಿ ಶೀಘ್ರ ವೇತನ ನೀಡುವಂತೆ ಆಗ್ರಹಿಸಿ ತಾಪಂ ಇಒ ಆರ್‌.ವೈ. ಗುರಿಕಾರಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ವಿ.ಸಿ. ಮುದಕಣ್ಣವರ ಮಾತನಾಡಿ, ನರೇಗಾ ಯೋಜನೆಯಡಿ ಮಳೆ ನೀರನ್ನು ಭೂಮಿಯಲ್ಲೇ ಇಂಗಿಸುವ (ಬದುವು ನಿರ್ಮಾಣ ) ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ ಕಾರ್ಮಿಕರಿಗೆ ಸುಮಾರು ಮೂರು ತಿಂಗಳಾದರೂ ವೇತನ ದೊರಕಿಲ್ಲ. ಒಂದು ವಾರದಲ್ಲಿ ವೇತನ ಭರಿಸುವುದಾಗಿ ಹೇಳಿದ್ದರಿಂದ ಕಾರ್ಯನಿರ್ವಹಿಸಲಾಗಿತ್ತು. ದಿನನಿತ್ಯ ಸುಮಾರು 180ರಿಂದ 200ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ತಿಂಗಳವರೆಗೆ ನಿರಂತರವಾಗಿ ಕೆಲಸ ನಿರ್ವಹಿಸಿದ್ದು, ಈಗಾಗಲೇ ಎರಡು ತಿಂಗಳಾಗಿವೆ. ಸರಕಾರದಿಂದ ಅಂದಾಜು 1.90 ಕೋಟಿ ಮೊತ್ತದ ಕ್ರಿಯಾ ಯೋಜನೆ ಅನುಮೋದನೆಗೊಂಡಿದೆ. ಕಾರ್ಯ ಮುಗಿಸಿ ಎರಡು ತಿಂಗಳಾದರೂ ವೇತನ ಬಾರದೇ ಕೂಲಿ ಕಾರ್ಮಿಕರು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ. ಅಧಿಕಾರಿಗಳು ಯಾವುದೇ ಕಾರಣ ನೀಡದೆ ಶೀಘ್ರ ವೇತನ ಒದಗಿಸಲು ಮುಂದಾಗಬೇಕೆಂದು ಆಗ್ರಹಿಸಿದರು. ತಾಪಂ ಇಒ ಆರ್‌.ವೈ. ಗುರಿಕಾರ ಮನವಿ ಸ್ವೀಕರಿಸಿ ಮಾತನಾಡಿ, ಕಾಮಗಾರಿಗೆ ಸಂಬಂಧಿಸಿದಂತೆ ಎಲ್ಲ ಪತ್ರ ವಹಿವಾಟು ಆಗಿದ್ದು, ಕೆಲವೇ ದಿನಗಳಲ್ಲಿ ನೇರವಾಗಿ ಕಾರ್ಮಿಕರ ಬ್ಯಾಂಕ್‌ ಖಾತೆಗೆ ಹಣ ಬರಲಿದೆ. ಇಲಾಖೆಯಿಂದ ಎಲ್ಲ ತಾಂತ್ರಿಕ ಅಡತಡೆ ನಿವಾರಿಸಲಾಗಿದ್ದು, ಆದಷ್ಟು ಬೇಗನೆ ಹಣ ಜಮಾಮಾಗಲಿದೆ ಎಂದು ಹೇಳಿದರು.

ಎಫ್‌.ಎಂ. ಕತ್ತಿಶೆಟ್ಟಿ, ವಿರೂಪಾಕ್ಷಪ್ಪ ಹಡಗಲಿ, ಎಸ್‌.ಬಿ. ಮೂಕಿ, ಸುರೇಶ ಮೂಕಿ, ಎಸ್‌.ಎಫ್‌. ಮೂಕಿ, ನಬೀಸಾಬ, ಶಿದ್ಧಪ್ಪ ಶಿರಹಟ್ಟಿ, ದೇವಪ್ಪ ಮೂಕಿ, ಎನ್‌.ಎಂ. ಬಡಿಗೇರ, ಈಶಪ್ಪ ಮೂಕಿ, ಚಾಂದಸಾಬ, ಮಜಫರ್‌ ನದಾಫ್‌, ಎನ್‌.ವೈ. ನದಾಫ್‌ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next