Advertisement

ಕೋವಿಡ್-19 ಸಂಕಷ್ಟದಲ್ಲಿಯೂ ಅಂತರ ಕಾಪಾಡಿಕೊಂಡು ನರೇಗಾ ಉದ್ಯೋಗ

02:21 PM Apr 24, 2020 | keerthan |

ಗಂಗಾವತಿ: ಕೋವಿಡ್-19 ಮಹಾಮಾರಿ ಕಾರಣದಿಂದ ಕೃಷಿ ಕೂಲಿಕಾರ್ಮಿಕರು ಉದ್ಯೋಗ ಇಲ್ಲದೇ ಸಂಕಷ್ಟದಲ್ಲಿದ್ದು ಜಿಲ್ಲಾಡಳಿತ ಕ್ರಮಕೈಗೊಂಡು ಅವಕಾಶ ಇರುವಲ್ಲಿ ನರೇಗಾ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಕಲ್ಪಿಸಿದ್ದಾರೆ.

Advertisement

ಕನಕಗಿರಿ ತಾಲ್ಲೂಕಿನ ವಡಕಿ ಗ್ರಾಮದಲ್ಲಿ ಹೊಲಗಳಲ್ಲಿ ಬದು ನಿರ್ಮಾಣದ ಕಾಮಗಾರಿ ಕೈಗೊಂಡು 160 ಜನ ಕೂಲಿಕಾರ್ಮಿಕರಿಗೆ ಉದ್ಯೋಗ ನೀಡಲಾಗಿದೆ.

ಸ್ಥಳಕ್ಕೆ ತಾ.ಪಂ ಇಒ‌ ಡಾ.ಮೋಹನಕುಮಾರ ತಾಲೂಕು ಸಹಾಯಕ ಕೃಷಿ ಅಧಿಕಾರಿ ತಿಪ್ಪೇಸ್ವಾಮಿ ಭೇಟಿ ನೀಡಿ ಕೋವಿಡ್-19 ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿದರು.

ಭೌತಿಕ ಅಂತರ ಕಾಪಾಡುವ ಜತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅನ್ಯ ಸ್ಥಳಗಳಿಂದ ಹೊಸಬರು ಬಂದರೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಲು ಪ್ರೇರಣೆ ನೀಡಬೇಕು. ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಲಾಯಿತು

Advertisement

Udayavani is now on Telegram. Click here to join our channel and stay updated with the latest news.

Next