Advertisement

ಹಿರಿಯರಿಗೂ ಹುಮ್ಮಸ್ಸು ನೀಡಿದ ನರೇಗಾ!

01:59 PM May 17, 2022 | Team Udayavani |

ಬೆಂಗಳೂರು: ಕೊರೊನಾ ಬಳಿಕ ನರೇಗಾ ದ ಮೂಲಕ ಉದ್ಯೋಗ ಪಡೆಯುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಇದೀಗ ವಿಶೇಷವಾಗಿ 60ವರ್ಷಮೇಲ್ಪಟ್ಟ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಪಡೆಯುವ ಮೂಲಕ ಮುಪ್ಪಿನಲ್ಲಿಯೂ “ಕಾಯಕ’ದಲ್ಲಿ ತೊಡಗಿದ್ದಾರೆ.

Advertisement

ಗ್ರಾಮೀಣ ಭಾಗದ ಬಡ ಕುಟುಂಬಗಳ ಜೀವನೋಪಾಯದ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ರಾಜ್ಯದಲ್ಲಿ ವ್ಯವಸ್ಥಿತವಾಗಿ ಅಳವಡಿಸಿಕೊಂಡಿದೆ. ಜತೆಗೆ ಗ್ರಾಮೀಣ ಸಮಾಜದಲ್ಲಿ ವಿವಿಧ ದುರ್ಬಲ ಗುಂಪುಗಳಿಗೆ ಸಾಮಾಜಿಕಸಂರಕ್ಷಣೆ ಒದಗಿಸುವ ನಿಟ್ಟಿನಲ್ಲಿ ವಿಶೇಷ ರಿಯಾಯಿತಿ ನೀಡುತ್ತಿದೆ. ಕೊರೊನಾ ಬಳಿಕ ಅಂಗವಿಕಲರು, ಹಿರಿಯ ನಾಗರಿಕರು ನರೇಗಾದಡಿಯಲ್ಲಿ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ಇದುವರೆಗೆ 3.85 ಲಕ್ಷ ಮಂದಿ 60 ವರ್ಷದಿಂದ 80ವರ್ಷ ಮೇಲ್ಪಟ್ಟ ವರು ನೋಂದಾಯಿಸಿ ಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 83 ಸಾವಿರ ಹಿರಿಯ ನಾಗರಿಕರು ಉದ್ಯೋಗ ಪಡೆದು ಕೊಂಡಿದ್ದಾರೆ. ವರ್ಷದಿಂದವರ್ಷಕ್ಕೆ ಹಿರಿಯ ನಾಗರಿಕರಲ್ಲಿ ಉದ್ಯೋಗ ಪಡೆಯುವವರ ಸಂಖ್ಯೆ ಕನಿಷ್ಠ ಶೇ.10ರಿಂದ ಶೇ.30 ಏರಿಕೆಯಾಗುತ್ತಿದೆ.ವಿಶೇಷವೆಂದರೆ 80ವರ್ಷ ಮೇಲ್ಪಟ್ಟವರಲ್ಲಿ 2019-22 ರವರೆಗೆ ಸುಮಾರು20,000 ಮಂದಿ ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ.

ವಿಶೇಷ ವ್ಯವಸ್ಥೆ: ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರಿಗೆ ಉದ್ಯೋಗ ಮಾಡುವ ಹುಮ್ಮಸ್ಸು ಇದ್ದರೂ, ಕೆಲಸ ನೀಡುವವರು ಕಡಿಮೆ. ಈ ನಿಟ್ಟಿನಲ್ಲಿ 2014ರಲ್ಲಿ ಕೂಲಿ ಕೆಲಸದಲ್ಲಿ ಶೇ.25ರಷ್ಟು ರಿಯಾಯಿತಿಯನ್ನು ಇದೀಗ ಶೇ.50 ಏರಿಕೆ ಮಾಡಲಾಗಿದೆ. ಇತರೆ ಕಡೆಯಲ್ಲಿ ಎಲ್ಲರಂತೆ ಕೂಲಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಅಸಾಧ್ಯ ಹಾಗೂ ಜನರು ಕೂಲಿ ಕೆಲಸ ನೀಡದೆ ಇರುವುದರಿಂದಇದೀಗ ನರೇಗಾದಡಿಯಲ್ಲಿ ಉದ್ಯೋಗ ಬಯಸಿ ಬರುವ ಹಿರಿಯ ನಾಗರಿಕರ ಸಂಖ್ಯೆ ಅಧಿಕವಾಗಿದೆ.

ಬೆಳಗಾವಿ ಮೊದಲು :

Advertisement

ಬೆಳಗಾವಿ ಜಿಲ್ಲೆಯಲ್ಲಿ 9200 ಮಂದಿ ಹಿರಿಯ ನಾಗರಿಕರು ಉದ್ಯೋಗ ಪಡೆಯುವ ಮೂಲಕ ಅತ್ಯಧಿಕ ಸಂಖ್ಯೆಯಲ್ಲಿ ಹಿರಿಯ ನಾಗರಿಕರಿಗೆ ಉದ್ಯೋಗ ನೀಡಿದ ಕೀರ್ತಿಗೆ ಪಾತ್ರವಾಗಿದೆ. ನಗರ ಪ್ರದೇಶಕ್ಕೆ ಹೋಲಿಕೆ ಮಾಡಿದರೆ ಗ್ರಾಮೀಣ ಭಾಗದಲ್ಲಿ ನರೇಗಾದಡಿಯಲ್ಲಿ ಪಾಲ್ಗೊಳ್ಳುವಿಕೆ ಹೆಚ್ಚಿದೆ. ಕೊಪ್ಪಳ, ಕಲ ಬುರಗಿ, ಬಳ್ಳಾರಿ, ರಾಯ ಚೂರು ಜಿಲ್ಲೆಗಳು ಅಗ್ರ 5 ಸ್ಥಾನ ಪಡೆದು ಕೊಂಡಿದೆ. ಉಳಿದಂತೆ ಬೆಂಗಳೂರು ನಗರದಲ್ಲಿ 34 ಮಂದಿ ಮಾತ್ರ ಉದ್ಯೋಗ ಪಡೆದುಕೊಂಡಿ ದ್ದು, ದಾವಣಗೆರೆ, ಕೊಡಗು, ವಿಜಯಪುರ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಹಿರಿಯ ನಾಗರಿಕರು ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ.

 

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next