Advertisement

ವಲಸೆ ತಪ್ಪಿಸಲು ನರೇಗಾ ಯೋಜನೆ ಪೂರಕ

02:47 PM Apr 25, 2022 | Team Udayavani |

ಪಾತಪಾಳ್ಯ: ಜನರು ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡುವ ಉದ್ದೇಶದಿಂದ ನರೇಗಾ ಯೋಜನೆ ಅನುಷ್ಠಾನ ಮಾಡಲಾಗಿದೆ ಎಂದು ನಾರೇಮದ್ದೇಪಲ್ಲಿ ಗ್ರಾಪಂ ಅಧ್ಯಕ್ಷೆ ವಿ.ಅಂಬಿಕಾ ತಿಳಿಸಿದರು.

Advertisement

ನಾರೇಮದ್ದೇಪಲ್ಲಿಯಲ್ಲಿ ಭಾನುವಾರ ನಡೆದ ರೋಜ್‌ಗಾರ್‌ ದಿವಸ್‌ ಕಾರ್ಯಕ್ರಮದಲ್ಲಿ ಮಾತನಾಡಿ, ನರೇಗಾ ಯೋಜನೆಯಡಿ ಫ‌ಲಾ ನು ಭವಿಗಳಿಗೆ ಹೊಸ ಉದ್ಯೋಗ ಚೀಟಿ ನೀಡುವ, ವೇತನ, ನಿರುದ್ಯೋಗ ಭತ್ಯೆ ಪಡೆ ಯಲು ಅವಕಾಶವಿದೆ. ಕಾಯಕಬಂಧು ಗಳು, ಸ್ವಯಂಸೇವಾ ಸಂಘದ ಸದಸ್ಯರು, ಗ್ರಾಮದ ಕೂಲಿ ಕಾರ್ಮಿಕರು, ತಾಂತ್ರಿಕ ಸಹಾಯಕರ ಸಮ್ಮುಖದಲ್ಲಿ ಕಾಮಗಾರಿ ನಡೆಯಬೇಕು.  ದನದ ದೊಡ್ಡಿ, ಸಸಿ ನೆಡುವುದು, ಅರಣ್ಯೀಕರಣ, ತೋಟಗಾರಿಕೆ ಇಲಾಖೆ ಕಾಮಗಾರಿಗಳು, ಆಟದ ಮೈದಾನ, ನಮ್ಮ ಹೊಲ ನಮ್ಮ ದಾರಿ, ಗೋದಾಮ ಮುಂತಾದ ಕಾಮಗಾರಿಗಳನ್ನು ಜನರಿಗೆ ಪರಿಚಯಿಸಬೇಕು ಎಂದರು.

ಪಿಡಿಒ ವೆಂಕಟರವಣಪ್ಪ, ಉಪಾಧ್ಯಕ್ಷೆ ಪ್ರಮೀಳಾ, ಸದಸ್ಯರಾದ ಎನ್‌.ಎಚ್‌.ಮೌಲಾಲಿ, ನಂಜಮ್ಮ, ವನಿತಾ, ಮಂಜುಳ, ಲಕ್ಷ್ಮೀದೇವಮ್ಮ, ರಾಜಮ್ಮ, ರೆಡ್ಡಪ್ಪ, ಉತ್ತನ್ನ, ತುಳಸಮ್ಮ, ಕೃಷ್ಣಪ್ಪ, ರವಿ, ಕರ ವಸೂಲಿಗಾರ ಕೃಷ್ಣಪ್ಪ, ಗುಮಾಸ್ತ ರಿಯಾಜ್‌, ಬಿ.ಎಫ್.ಟಿ.ಶ್ರೀನಿವಾಸ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next