ಕಾರವಾರ: ಮಹಿಳಾ ಸಬಲೀಕರಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸ್ವ-ಉದ್ಯೋಗ ಸೃಷ್ಟಿಸಿಕೊಳ್ಳಲು ಸಾಕಷ್ಟು ಅವಕಾಶಗಳಿದ್ದು, ಸ್ವ-ಸಹಾಯ ಸಂಘಗಳ ಮಹಿಳೆಯರು ಪಾಲ್ಗೊಂಡುಯೋಜನೆಯ ಲಾಭದೊಂದಿಗೆ ಜನರಿಗೆ ಅರಿವುಮೂಡಿಸಬೇಕಿದೆ ಎಂದು ಎನ್‌ಆರ್‌ಎಲ್‌ಎಂ ಜಿಲ್ಲಾ ಯೋಜನಾ ನಿರ್ದೇಶಕ ಕರೀಂ ಅಸದಿ ಅಭಿಪ್ರಾಯಪಟ್ಟರು.
ನಗರದ ಜಿಪಂ ಸಭಾಂಗಣದಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸ್ವ-ಸಹಾಯ ಸಂಘಗಳ ಮಹಿಳೆಯರ ಪಾಲ್ಗೊಳ್ಳುವಿಕೆ ಹಾಗೂ ಎನ್‌ಆರ್‌ಎಲ್‌ಎಂ ಒಗ್ಗೂಡಿಸುವಿಕೆ ಕುರಿತು ನಡೆದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಸ್ವ-ಸಹಾಯ ಸಂಘಗಳ ಮಹಿಳೆಯರು ನರೇಗಾದಡಿ ಲಭ್ಯವಿರುವ ಸಸಿ ಬೆಳೆಸುವುದು (ನರ್ಸರಿ), ವರ್ಕ್ ಶೆಡ್, ಕುರಿ, ಕೋಳಿ, ದನ, ಹಂದಿಶೆಡ್, ಬಚ್ಚಲ ಗುಂಡಿ ನಿರ್ಮಾಣ, ಎರೆಹುಳು ಗೊಬ್ಬರತಯಾರಿಕೆ, ಪೌಷ್ಠಿಕ ಕೈತೋಟ, ವಿವಿಧ ಹೂವು, ಹಣ್ಣುಗಳ ತೋಟ ಸೇರಿದಂತೆ ಹಲವು ಕಾಮಗಾರಿಗಳಲಾಭ ಪಡೆಯಲು ಅವಕಾಶವಿದೆ. ಜೊತೆಗೆ ಸ್ವಯಂಉದ್ಯೋಗ ಸೃಷ್ಟಿಕೊಳ್ಳಬಹುದಾಗಿದೆ. ಇದರಿಂದಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದಂತಾಗುತ್ತದೆ. ಹೀಗಾಗಿ ಸ್ವ-ಸಹಾಯಸಂಘಗಳ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಿ ಲಾಭದ ಜೊತೆಗೆ ಗ್ರಾಮೀಣ ಜನರುನರೇಗಾ ಯೋಜನೆಯ ಫಲಾನುಭವಿ ಆಗುವಂತೆಅರಿವು ಮೂಡಿಸಬೇಕಿದೆ. ಇದಕ್ಕೆಲ್ಲ ಪೂರಕವಾಗಿಸಿಬ್ಬಂದಿಗೆ ನರೇಗಾ ಕುರಿತು ಮಾಹಿತಿ ತಿಳಿಸುವ ಉದ್ದೇಶದಿಂದ ಈ ಕಾರ್ಯಗಾರ ಆಯೋಜಿಸಿದ್ದು,ಭಾಗವಹಿಸಿದ ಸಿಬ್ಬಂದಿ ಸೂಕ್ತ ಮಾಹಿತಿ ಪಡೆದು ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯ ಪ್ರವೃತ್ತರಾಗಬೇಕುಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಮುಖ್ಯ ಯೋಜನಾಧಿಕಾರಿ ವಿನೋದ್ ಅಣೇಕರ ಮಾತನಾಡಿ, ಗ್ರಾಮಾಂತರಪ್ರದೇಶದಲ್ಲಿ ಸ್ವ-ಸಹಾಯ ಮಹಿಳಾ ಸಂಘಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ.ಆದ್ದರಿಂದ ಈ ಕಾರ್ಯಗಾರದಲ್ಲಿ ನರೇಗಾದಡಿಅಗತ್ಯವಿರುವ ಕಾಮಗಾರಿಗಳು ಹಾಗೂ ಅವುಗಳನ್ನುಅನುಷ್ಠಾನಗೊಳಿಸುವುದು ಹೇಗೆ ಎಂಬ ಮಾಹಿತಿಕೊಡಲಾಗುತ್ತದೆ. ಕಾರ್ಯಾಗಾರದಲ್ಲಿ ಭಾಗವಹಿಸಿರುವಎನ್‌ಆರ್‌ಎಲ್‌ಎಂ ಸಿಬ್ಬಂದಿ ಸರಿಯಾಗಿತಿಳಿದುಕೊಂಡು ತಮಗೆ ನೀಡಿರುವ ಜವಾಬ್ದಾರಿಯನ್ನುಸರಿಯಾಗಿ ನಿಭಾಯಿಸಿ ಗ್ರಾಮೀಣ ಪ್ರದೇಶದ ಜನರಿಗೆ ಯೋಜನೆಯ ಸದುಪಯೋಗ ಪಡೆಯುವಂತೆಪ್ರಚಾರ ಕೈಗೊಳ್ಳಬೇಕು ಎಂದರು.
ಅಂಕೋಲಾ ತಾಪಂ ಸಹಾಯಕ ನಿರ್ದೇಶಕ ಸುನಿಲ್ ಎಂ, ಡಿಐಇಸಿ ಸಚಿನ್ ಬಂಟ್, ಕಾರವಾರ ತಾಲೂಕು ತಾಂತ್ರಿಕ ಸಂಯೋಜಕ ಅನಿಲ ಗಾಯತ್ರಿ, ಹೊನ್ನಾವರ ತಾಲೂಕಿನ ತೋಟಗಾರಿಕೆ ವಿಭಾಗದ ತಾಂತ್ರಿಕ ಸಹಾಯಕಿ ಕಾವೇರಿ ಬಿ.ಆರ್., ಜಿಲ್ಲೆಯ ಎಲ್ಲಾ ತಾಲೂಕಿನ ಎನ್‌ಆರ್‌ಎಲ್‌ಎಂ ಸಿಬ್ಬಂದಿಗೆ ನರೇಗಾ ಯೋಜನೆ ಹಾಗೂ ಕಾಮಗಾರಿಗಳ ಅನುಷ್ಠಾನ ಕುರಿತು ಪಿಪಿಟಿ ಮೂಲಕ ವಿವರವಾಗಿ ತಿಳಿಸಿಕೊಟ್ಟರು.
ಎಸ್‌ಬಿಎಂ ಜಿಲ್ಲಾ ಸಂಯೋಜಕ ಸೂರ್ಯನಾರಾಯಣ ಭಟ್ಟ ನಿರೂಪಿಸಿದರು.ಜಿಪಂ ಸಹಾಯಕ ಯೋಜನಾಧಿಕಾರಿ(ಡಿಆರ್‌ಡಿಎ)ಸುರೇಶ ನಾಯ್ಕ, ಎಡಿಪಿಸಿ ನಾಗರಾಜ್ ನಾಯ್ಕ,ಡಿಐಎಂಎಸ್ ಶಿವಾಜಿ ಬೊಬ್ಲಿ, ಎನ್‌ಆರ್‌ಎಲ್ ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ನಾಗರಾಜ್‌ಕಲ್ಮನೆ. ಜಿಲ್ಲಾ ವ್ಯವಸ್ಥಾಪಕ ಶ್ರಿಕಾಂತ ಮೇಲಿನಮನಿ, ಪುಂಡಲಿಕ ಶಿರ್ಶಿಕರ, ತಾಲೂಕು ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಸೇರಿದಂತೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.