Advertisement
ಬೈಲೂರಿನಲ್ಲಿರುವ ಪರಶುರಾಮ ಥೀಂ ಪಾರ್ಕ್ ಪರಿಸರದಲ್ಲಿ ಮಾದರಿ ಗ್ರಾಮ ನಿರ್ಮಿಸಲಾಗಿದ್ದು ರಾಜೀವ್ ಗಾಂಧಿ ಸೇವಾ ಕೇಂದ್ರ, ಪಂ. ಕಟ್ಟೆ, ನರೇಗಾ ಯೋಜನೆಯಲ್ಲಿ ಅಭಿವೃದ್ಧಿ ಕಾರ್ಯಗಳ ಮಾದರಿ, ಕಾಲುಸಂಕ, ಅಮೃತ ಸರೋವರ, ಕುರಿ, ಮೇಕೆ, ದನದ ಶೆಡ್, ಕೋಳಿಗೂಡು, ಸ್ಮಾರ್ಟ್ ಶಾಲೆ, ಕಾಂಪೌಂಡ್, ಮೈದಾನ, ಕಲ್ಯಾಣಿ, ಅರಣ್ಯ, ರಸ್ತೆ, ಮಾದರಿ ಮನೆ ನಿರ್ಮಿಸಲಾಗಿದೆ.
Related Articles
Advertisement
ಜಲಸಂಜೀವಿನಿ ಮಾದರಿನೈಸರ್ಗಿಕ ವಿಪತ್ತಿನಿಂದಾಗುವ ಹಾನಿಯನ್ನು ತಡೆಯಲು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಜಲಸಂಜೀವಿನಿ ಕ್ರಿಯಾ ಯೋಜನೆಗಳನ್ನು ಗ್ರಾ.ಪಂ. ಮಟ್ಟದಲ್ಲಿ ಜಾರಿಗೆ ತರಲಾಗುತ್ತಿದ್ದು, ಅದರ ಮಾದರಿಯನ್ನು ಕೂಡ ಇಲ್ಲಿ ನಿರ್ಮಿಸಲಾಗಿದೆ. ಸಂಪೂರ್ಣ ಮಾಹಿತಿ
ಪ್ರತಿಯೊಂದು ಕಾಮಗಾರಿಗೆ ತಗಲುವ ಅಂದಾಜು ಮೊತ್ತ, ಕೂಲಿ ರೂಪದಲ್ಲಿ ದೊರೆಯುವ ಮೊತ್ತ, ಸಾಮಗ್ರಿ ಖರೀದಿಗೆ ದೊರೆಯುವ ಹಣ ಹಾಗೂ ಎಷ್ಟು ಮಾನವ ದಿನಗಳು ಬೇಕಾಗುತ್ತದೆ ಎಂಬ ಮಾಹಿತಿಯ ಫಲಕಗಳನ್ನು ಪ್ರದರ್ಶಿಸಲಾಗಿದೆ. ನರೇಗಾ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡಲ್ಲಿ ಜನರಿಗೆ ಉದ್ಯೋಗ ದೊರೆಯುತ್ತದೆ, ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ ಎಂಬ ಅನಿಸಿಕೆ ನರೇಗಾ ಗ್ರಾಮವನ್ನು ನೋಡಿದ ಬಳಿಕ ರೈತರಲ್ಲಿ ಮೂಡಿದೆ. ಕೇಳಿ ಪಡೆಯುವುದಕ್ಕಿಂತ ನೋಡಿ ತಿಳಿದುಕೊಳ್ಳುವುದು ಹೆಚ್ಚು ಪರಿಣಾಮಕಾರಿ. ಬೇಗ ಅರ್ಥವಾಗುತ್ತದೆ ಎನ್ನುವ ಕಾರಣಕ್ಕೆ ಮಾದರಿ ಗ್ರಾಮ ನಿರ್ಮಿಸಲಾಗಿದೆ. ಸಾರ್ವಜನಿಕರ ಮೇಲೆ ಇದು ಉತ್ತಮ ಪರಿಣಾಮ ಬೀರಿದೆ.
-ಬಾಬು, ಯೋಜನ ನಿರ್ದೇಶಕರು, ಉಡುಪಿ ಜಿ.ಪಂ.