Advertisement

ಅರಟಾಳ ಗ್ರಾಪಂನಲ್ಲಿ ನರೇಗಾ ಸಭೆ

05:49 PM Feb 03, 2020 | Suhan S |

ಕೋಹಳ್ಳಿ: ನರೇಗಾ ಯೋಜನೆಯಲ್ಲಿ ಸಾಕಷ್ಟು ಕೆಲಸ ಮಾಡಲು ಅವಕಾಶವಿದೆ. ಗ್ರಾಮದ ಅಭಿವೃದ್ಧಿಪಡಿಸಲು ನರೇಗಾ ಯೋಜನೆ ಸಹಕಾರಿಯಾಗುತ್ತದೆ. ದುಡಿಯುವ ಜನರಿಗೆ ಕೆಲಸ ಒದಗಿಸುವುದು ಗ್ರಾಪಂ ವತಿಯಿಂದ ಕೆಲಸ ನೀಡಬೇಕು ಎಂದು ಸಾಮಾಜಿಕ ಪರಿಶೋಧನಾ ತಾಲೂಕು ಸಂಯೋಜಕ ಡಿ.ಎಫ್‌. ಮುಗಡ್ಲಿ ಹೇಳಿದರು.

Advertisement

ಅರಟಾಳ ಗ್ರಾಪಂ ಕಾರ್ಯಾಲಯದಲ್ಲಿ ನಡೆದ ಮಹಾತ್ಮಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಲ್ಲಿ ಕೆಲಸ ಪ್ರಾರಂಭಿಸಲು ಗ್ರಾಪಂ ಠರಾವು ಅತೀ ಮುಖ್ಯವಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಯಿಂದ ನರೇಗಾ ಯೋಜನೆಯಲ್ಲಿ ಕಾಮಗಾರಿಗಳು ನಡೆದಿವೆ. ಇಲ್ಲಿ ಹೆಚ್ಚು ಕೂಲಿ ಕಾರ್ಮಿಕರು ದುಡಿಯುವವರು ಇದ್ದಾರೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರಿಗೆ ಕೆಲಸ ಕೊಡುವ ವ್ಯವಸ್ಥೆಯನ್ನು ಗ್ರಾಪಂ ವತಿಯಿಂದ ಮಾಡಬೇಕು ಎಂದರು.

ತಾಲೂಕು ಅಕ್ಷರ ದಾಸೋಹ ಅಧಿ ಕಾರಿ ಸರಿತಾ ಗಸ್ತಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶಾರಕ್ಕ ಗೌಡಪನ್ನವರ, ಪಿಡಿಒ ಎ ಜಿ. ಎಡಕೆ, ಕಾರ್ಯದರ್ಶಿ ಜಿತೇಂದ್ರ ಗದಾಡೆ, ಗ್ರಾಪಂ ಉಪಾಧ್ಯಕ್ಷ ಶಿವಾನಂದ ಹೊನಗೌಡ, ಸದಸ್ಯರಾದ ಸಿದ್ದು ಹಳ್ಳಿ, ಮಾಳಪ್ಪ ಕಾಂಬಳೆ, ಚಂದ್ರಪ್ಪ ನಾಟೀಕರ, ಮಾಲಾ ತೊಗರಿ, ಸೀಮಾ ಮುಧೋಳ, ಸುಶೀಲಾ ಜಂಬಗಿ, ಸಿದ್ದವ್ವ ಪೂಜಾರಿ, ಅಕ್ಕಾತಾಯಿ ಹಟ್ಟಿ, ಮಾಲಾ ಕಾಂಬಳೆ, ಎಂ.ಪಿ. ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next