Advertisement

ನರೇಗಾ: ಪಿಂಚಣಿ ಯೋಜನೆಯ ಪರಿಶೋಧನೆ

10:46 PM Jul 23, 2019 | mahesh |

ಹಳೆಯಂಗಡಿ: ಸರಕಾರದ ಪಿಂಚಣಿ ಯೋಜನೆಯ ಬಗ್ಗೆ ಪ್ರಸ್ತುತ ಇರುವ ಸ್ಥಿತಿಗತಿಯನ್ನು ಅಭ್ಯಸಿಸುವ ಆಂತರಿಕ ಪರಿಶೋಧನೆ (ಆಡಿಟ್‌)ಯನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ (ನರೇಗಾ) ತಂಡಕ್ಕೆ ನೀಡಲಾಗಿದ್ದು ಪರಿಶೋಧನೆಯು ರಾಜ್ಯದ ಪ್ರತೀ ಗಾ.ಪಂ.ನಲ್ಲಿ ನಡೆಸುತ್ತಿದೆ.

Advertisement

ಪಿಂಚಣಿ ಯೋಜನೆಯಾದ ವೃದ್ಧಾಪ್ಯ, ವಿಕಲಚೇತನ, ವಿಧವಾ, ಮನಸ್ವಿನಿ, ಸಂಧ್ಯಾ ಸುರಕ್ಷತೆಯ ಸಹಿತ ಇತರ ಯೋಜ ನೆಯಲ್ಲಿನ ಫಲಾನುಭವಿಗಳು ಸಂಪೂರ್ಣ ದಾಖಲೆಗಳನ್ನು ಸಂಗ್ರಹಿಸು ತ್ತಿರುವ ನರೇಗಾ ತಂಡವು ಕಳೆದ ಮೇ ತಿಂಗಳಿನಿಂದ ಆರಂಭಿಸಿದ್ದು ಅಕ್ಟೋಬರ್‌ ವರೆಗೆ ನಡೆಯಲಿದೆ. ಪ್ರಪ್ರಥಮವಾಗಿ ನಡೆಯುತ್ತಿರುವ ಈ ಪರಿಶೋಧನೆಯ ಅವ ಧಿಯಲ್ಲಿ 19 ಸಾವಿರ ಮಂದಿಯ ಟಾರ್ಗೆಟ್‌ನ್ನು ಮಂಗಳೂರು ತಾಲೂ ಕಿನ 55 ಗ್ರಾ.ಪಂ.ಗಳಲ್ಲಿ ಪ್ರಥಮ ಹಂತ ವಾಗಿ ನಡೆಸಲಿದೆ. ಟಾರ್ಗೆಟ್‌ ತಲುಪದಿದ್ದಲ್ಲಿ ಎರಡನೇ ಹಂತದಲ್ಲಿ ಮುಂದುವರಿಯುವ ಸಾಧ್ಯತೆ ಇದೆ.

ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ವಿಧವೆಯರಿಗೆ ವಿಧವಾ ವೇತನ, ಅಂಗವಿಕಲರು ಪಡೆಯುವ ಅಂಗವಿಕಲ ವೇತನಗಳು, ವಿಚ್ಛೇದಿತರು, ಅವಿವಾಹಿತರ ಮನಸ್ವಿನಿ ಯೋಜನೆಯ ಜತೆಗೆ ಇತರ ಯೋಜನೆಗಳಾದ ತೃತೀಯ ಲಿಂಗಿಗಳ ಮೈತ್ರಿ ಯೋಜನೆಯ ಫಲಾ ನು ಭವಿಗಳು ನೇರವಾಗಿ ಆಯಾಯ ಗ್ರಾಮ ಪಂಚಾಯತ್‌ಗೆ ಬಂದು ಅವರಲ್ಲಿನ ಮಂಜೂ ರಾದ ಭಾವಚಿತ್ರವಿರುವ ಮೂಲ ಪ್ರತಿ ಮತ್ತು ಗುರುತಿಗಾಗಿ ಆಧಾರ್‌ ಕಾರ್ಡ್‌ ಇವುಗಳನ್ನು ತಂದು ನಿರ್ದಿಷ್ಟ ದಿನದಂದು ಕಚೇರಿಯಲ್ಲಿ 20 ಪ್ರಶ್ನೆಗಳಿರುವ ಅರ್ಜಿಯನ್ನು ತುಂಬುವಂತಹ ಕೆಲಸ ನಡೆಯುತ್ತಿದೆ. ಅನಾ ರೋಗ್ಯದ ಕಾರಣ ಅಥವಾ ಮನೆಯಿಂದ ಹೊರಗೆ ಬರಲಾಗದ ಅಶಕ್ತ ಫಲಾನುಭವಿಗಳು ತಮ್ಮ ಮನೆಯ ಇತರ ಸದಸ್ಯರ ಮೂಲಕ ದಾಖಲೆಗಳನ್ನು ಕಳುಹಿಸಿಕೊಡಬಹುದು.

ನರೇಗಾ ಯೋಜನೆಯ ಪ್ರತ್ಯೇಕ ತಂಡವೇ ಈ ಕಾರ್ಯವನ್ನು ನಡೆಸುತ್ತಿದ್ದು, ಆರು ತಿಂಗಳಿಗೊಮ್ಮೆ ನಡೆಯುವ ಸಾಮಾ ಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆಯ ಮುಂಚಿತವಾಗಿ 3 ರಿಂದ 5 ದಿನಗಳಲ್ಲಿ ಪಿಂಚಣಿಯ ಪರಿಶೋಧನೆ ನಡೆಸುತ್ತಿದೆ. ನಿರ್ದಿಷ್ಟ ದಿನದಲ್ಲಿ ಹಾಜರಾಗದಿದ್ದಲ್ಲಿ ಅಕ್ಕಪಕ್ಕದ ಪಂಚಾಯತ್‌ನಲ್ಲಿ ನಡೆಯುವ ಪರಿಶೋಧನೆಯ ಸಮಯದಲ್ಲಿ ಅವ ಕಾಶವನ್ನು ಬಳಸಿಕೊಳ್ಳಬಹುದು. ಕೆಲವೊಂದು ಗ್ರಾ.ಪಂ.ನಲ್ಲಿ ಸದಸ್ಯರೇ ಮುಂದೆ ನಿಂತು ಫಲಾನುಭವಿಗಳಿಗೆ ಸಹಕಾರ ನೀಡುತ್ತಿರುವುದು ಕಂಡು ಬಂದಿದೆ.

ಪುನಶ್ಚೇತನದ ಉದ್ದೇಶ
ಪಿಂಚಣಿ ಯೋಜನೆಯ ಪರಿಶೋಧನೆಗೆ ಫಲಾನುಭವಿಗಳು ಯಾವುದೇ ಸಂಶಯ, ಆಂತಕವಿಲ್ಲದೇ ಮಾಹಿತಿ ನೀಡಬಹುದು. ಈ ಕಾರ್ಯದ ಹಿಂದೆ ಪ್ರಸ್ತುತ ಫಲಾನುಭವಿಗಳ ಸ್ಥಿತಿಗತಿಯನ್ನು ಸಹ ಅಭ್ಯಸಿಸಿ, ಪಿಂಚಣಿ ಆರಂಭವಾಗಿ ಅರ್ಧದಲ್ಲಿಯೇ ನಿಂತಿರುವುದು ಹಾಗೂ ಇಂದಿನ ದಿನದಲ್ಲಿ ಪಿಂಚಣಿ ಯೋಜನೆಯ ಮೊತ್ತ ಅತ್ಯಂತ ಕಡಿಮೆಯಾಗಿದೆ ಎಂಬ ಸಾರ್ವತ್ರಿಕ ಅಭಿಪ್ರಾಯವು ಸಹ ಸಂಗ್ರಹಗೊಂಡಿದೆ. ಇದರ ವರದಿಯು ಸರಕಾರಕ್ಕೂ ಸಲ್ಲಿಕೆಯಾಗಲಿದೆ. ಈ ಯೋಜನೆಯನ್ನು ಪುನಶ್ಚೇತನ ನಡೆಸಲು ಉದ್ದೇಶವಿ ದೆಯೇ ಹೊರತು ಯಾವುದೇ ರೀತಿಯಲ್ಲಿ ರದ್ದುಗೊಳ್ಳುವುದಿಲ್ಲ.

Advertisement

 ಮುಕ್ತವಾಗಿ ಮಾಹಿತಿ ನೀಡಿರಿ
ಪಿಂಚಣಿ ಯೋಜನೆಯ ಪರಿಶೋಧನೆಗಾಗಿ ಪ್ರತ್ಯೇಕವಾಗಿಯೇ ಕಾರ್ಯನಿರ್ವಹಿಸಲಾಗುತ್ತಿದೆ. ಪ್ರತೀ ಫಲಾನುಭವಿಗಳಿಂದ ಮಾಹಿತಿ ಪಡೆದು ದಾಖಲಿಸಲಾಗುತ್ತಿದೆ. ಪಂಚಾಯತ್‌ನ ನರೇಗಾ ಯೋಜನೆಯಲ್ಲಿನ ಪ್ರಗತಿಯ ಮುನ್ನೋಟದಿಂದ 3ರಿಂದ 5 ದಿನಗಳ ಅಂತರದಲ್ಲಿ ನಡೆಸಲಾಗುತ್ತಿದೆ. ನಿರ್ದಿಷ್ಟ ಗುರಿ ತಲುಪದಿದ್ದಲ್ಲಿ ಮುಂದಿನ ಹಂತದಲ್ಲಿ ನಡೆಸಲು ಸೂಚನೆ ಸಿಗಬಹುದು. ಫಲಾನುಭವಿಗಳು ಮುಕ್ತವಾಗಿ ಮಾಹಿತಿ ನೀಡಲು ಹಿಂಜರಿಯಬಾರದು.
– ಧನಲಕ್ಷ್ಮೀ, ತಾಲೂಕು ಸಂಯೋಜಕರು, ನರೇಗಾ ಯೋಜನೆ

Advertisement

Udayavani is now on Telegram. Click here to join our channel and stay updated with the latest news.

Next