ಶಿಡ್ಲಘಟ್ಟ: ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳನ್ನು ಮಾದರಿಯಾಗಿ ಪರಿವರ್ತಿಸಿದ ಬಳಿಕ ಇದೀಗ ಗ್ರಾಮ ನೈರ್ಮಲ್ಯ ಕಾಪಾಡಲು ಬಚ್ಚಲಗುಂಡಿ (ಸೋಕ್ ಫಿಟ್), ಪೌಷ್ಟಿಕ ತೋಟ, ಅಣಬೆ ಬೇಸಾಯ, ಹೈನುಗಾರಿಕೆ ಉತ್ತೇಜನಕ್ಕೆ ದನಕರುಗಳ ಶೆಡ್ ನಿರ್ಮಿ ಸಲು ಜಿಪಂ ಸಿಇಒ ಫೌಝೀಯಾ ತರು ನುಮ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ
ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಪ್ರತಿ ಗ್ರಾಪಂ ಕೇಂದ್ರಗಳಲ್ಲಿ ಕನಿಷ್ಠ 50 ಬಚ್ಚಲುಗುಂಡಿ (ವೈಯಕ್ತಿಕ ಮತ್ತು ಸಮು ದಾಯ), 20 ಪೌಷ್ಟಿಕ ತೋಟ, ಮಹಿಳಾ ಸ್ವಸಹಾಯಗಳ ಮೂಲಕ ಗ್ರಾಪಂಗೊಂದು ಅಣಬೆ ಬೇಸಾಯ ಮಾಡಲು ಶೆಡ್ ನಿರ್ಮಿಸಿ, ಹೈನುಗಾರಿಕೆಯಲ್ಲಿ ತೊಡಗುವ ರೈತರಿಗೆ ದನಕರುಗಳಿಗೆ ಶೆಡ್ ನಿರ್ಮಿಸಲು ಯೋಜನೆ ರೂಪಿಸಿ, ಗುರಿ ಸಾಧಿಸಲು ಜಿಲ್ಲೆಯ ತಾಪಂ ಇಒ, ನರೇಗಾ ಸಹಾಯಕ ನಿರ್ದೇಶಕರು ಮತ್ತು ಪಿಡಿಒಗಳಿಗೆ ಜಿಪಂ ಸಿಇಒ ನಿರ್ದೇಶನ ನೀಡಿದ್ದಾರೆ.
ನರೇಗಾ ಯೋಜನೆ ಮೂಲಕ ಈಗಾಗಲೇ ಸರ್ಕಾರಿ ಶಾಲೆ, ಕಚೇರಿಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿ, ನೀರು ಶೇಖರಣೆ ಮಾಡಲಾಗುತ್ತಿದೆ. ಅಲ್ಲದೆ, ಅಂತರ್ಜಲ ವೃದ್ಧಿಸಲು ಬಹುಕಮಾನ್ ಚೆಕ್ ಡ್ಯಾಮ್, ಬದು, ಕಾಲುವೆ, ಕೃಷಿ ಹೊಂಡ, ಕೆರೆ, ಗೋಕುಂಟೆ, ಕಲ್ಯಾಣಿ ಅಭಿವೃದ್ಧಿಗೊಳಿಸಲಾಗಿದೆ. ಸರ್ಕಾರಿ ಶಾಲೆಗೆ ಕಾಂಪೌಂಡ್ ನಿರ್ಮಿಸಿ, ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 50 ಸರ್ಕಾರಿ ಶಾಲೆ, ಅಂಗನ ವಾಡಿ ಕೇಂದ್ರ ಮಾದರಿಯಾಗಿ ಅಭಿವೃದ್ಧಿಗೊಳಿಸಲು ಸಿಇಒ ಕ್ರಮ ಕೈಗೊಂಡಿದ್ದಾರೆ.
ಕೋವಿಡ್ ಸಂಕಷ್ಟದ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ, ವಲಸೆ ಹೋಗುವು ದನ್ನು ತಪ್ಪಿಸಲು ನರೇಗಾ ಯೋಜನೆ ಮೂಲಕ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಸುಧಾರಣೆಗಾಗಿ ರೈತರ ಅಭಿವೃದ್ಧಿಗೆ ಪೂರಕ ಯೋಜನೆ ಜಾರಿಗೊಳಿಸಿ ಇದೀಗ ಅಂತರ್ಜಲ ವೃದ್ಧಿಗೊಳಿಸಲು ಸಾಂಕ್ರಾಮಿಕ ರೋಗ ತಡೆಗಟ್ಟಲು ಮತ್ತು ರೈತರಿಗೆ ಅನುಕೂಲ ಕಲ್ಪಿಸುವ ಯೋಜನೆ ಆರಂಭಿಸಲಾಗಿದೆ.
ಏನಿದು ಯೋಜನೆ? : ಗ್ರಾಮೀಣ ಜನರು ವೈಯಕ್ತಿಕವಾಗಿ ಬಚ್ಚಲುಗುಂಡಿ ನಿರ್ಮಿಸಿಕೊಂಡರೇ ನರೇಗಾ ಯೋಜನೆ ಮೂಲಕ 17 ಸಾವಿರ ರೂ. ವರೆಗೆ ಸಹಾಯಧನ ನೀಡಲಾಗುತ್ತದೆ. ಅಲ್ಲದೆ, ಸಮುದಾಯ ಕಾಮಗಾರಿಗಳು ಸಹ ನಡೆಸಬಹುದು. ಕ್ಲೀನ್ ಆ್ಯಂಡ್ ಗ್ರೀನ್ ಕಲ್ಪನೆಯೊಂದಿಗೆ ಪೌಷ್ಟಿಕ ತೋಟ(ಕಿಚನ್ ಗಾರ್ಡನ್) ನಿರ್ಮಿಸಿಕೊಂಡರೂ ಸಹಾಯಧನ ವಿತರಿಸಲು ಯೋಜನೆ ರೂಪಿಸಲಾಗಿದೆ. ಮಹಿಳಾ ಸ್ವಸಹಾಯ ಸಂಘಗಳು ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕುಟುಂಬ ನಿರ್ವಹಣೆ ಮಾಡಿಕೊಳ್ಳಲು ಅನುಕೂಲ ಕಲ್ಪಿಸುವ ಸಲುವಾಗಿ ಅಣಬೆ ಬೇಸಾಯಕ್ಕೆ ಶೆಡ್ ನಿರ್ಮಿಸಿ ಅಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಅಣಬೆ ಬೇಸಾಯ ತರಬೇತಿ ನೀಡಲು ಮಾಸ್ಟರ್ ಪ್ಲಾನ್ ಮಾಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಅವರಿಂದ ಚಾಲನೆ ನೀಡಲಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ನಾಲ್ಕು ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮಾಸಾಚರಣೆ ನಡೆಸಲಾಗುತ್ತಿದೆ.
17 ಸಾವಿರ ನೆರವು : ಪ್ರತಿಯೊಬ್ಬರ ಮನೆಯಲ್ಲಿ ಬಟ್ಟೆ ಮತ್ತು ಪಾತ್ರೆ ತೊಳೆಯುವ ನೀರು ಚರಂಡಿಗೆ ಬಿಡುವ ಅಭ್ಯಾಸ. ಇದರಿಂದ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ದುರ್ನಾತ ಬೀರುವ ದೂರುಗಳು ಕೇಳಿ ಬರುತ್ತದೆ. ಜೊತೆಗೆ ಚರಂಡಿಗಳಲ್ಲಿ ತ್ಯಾಜ್ಯ ನೀರು ಶೇಖರಣೆಯಾಗಿ ಸೊಳ್ಳೆಗಳಿಗೆ ಆಶ್ರಯತಾಣವಾಗಿ ಪರಿವರ್ತನೆ ಆಗುತ್ತದೆ. ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಬಚ್ಚಲುಗುಂಡಿ ನಿರ್ಮಿಸಲು ಯೋಜನೆ ರೂಪಿಸಿ ಅದಕ್ಕೆ 17 ಸಾವಿರ ರೂ. ಸಹಾಯಧನ ಕಲ್ಪಿಸಲಾಗುತ್ತದೆ. ಗ್ರಾಮಸ್ಥರು ಈ ಯೋಜನೆ ಸದುಪಯೋಗ ಮಾಡಿಕೊಂಡರೇ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಿಕೊಂಡು ಸಾಂಕ್ರಾಮಿಕ ರೋಗ ದೂರ ಮಾಡಲು ಸಹಕಾರಿಯಾಗುತ್ತದೆ.
ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ ನಿರ್ಮಿಸಲು ಕ್ರಮ ಕೈಗೊಂಡು ಸಫಲರಾಗಿದ್ದೇವೆ. ಇದೀಗ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಸಲುವಾಗಿ ಬಚ್ಚಲು ಗುಂಡಿ, ಪೌಷ್ಟಿಕ ತೋಟ, ಅಣಬೆ ಬೇಸಾಯ, ದನಕರುಗಳಿಗೆ ಶೆಡ್ ನಿರ್ಮಿಸುವ ಮಾಸಾಚರಣೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ ನೀಡಲಾಗಿದೆ. ಗುರಿ ಮೀರಿ ಪ್ರಗತಿಸಾಧಿಸಲು ದೃಢಸಂಕಲ್ಪ ಮಾಡಿದ್ದೇವೆ. ಇದಕ್ಕೆ ಪೂರಕವಾಗಿ ನಮ್ಮ ಅ ಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
– ಬಿ.ಫೌಝೀಯಾ ತರುನ್ನುಮ್, ಜಿಪಂ ಸಿಇಒ, ಚಿಕ್ಕಬಳ್ಳಾಪುರ
– ಎಂ.ಎ.ತಮೀಮ್ ಪಾಷ