ಬಂಗಾರಪೇಟೆ: ಗ್ರಾಮೀಣ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆಗಟ್ಟುವ ಸಲುವಾಗಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದ್ದು, ನಿರುದ್ಯೋಗ ಕೂಲಿ ಕಾರ್ಮಿಕರಿಗೆ ಇದು ವರದಾನವಾಗಿದೆ ಎಂದು ತಾಪಂ ಇಒ ಎನ್.ವೆಂಕಟೇಶಪ್ಪ ಹೇಳಿದರು.
ನರೇಗಾ ಯೋಜನೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಜಿಲ್ಲಾದ್ಯಂತ ಪ್ರಚಾರ ನಡೆಸುತ್ತಿರುವ ರೋಜ್‌ಗಾರ್ ಸಂಚಾರಿ ವಾಹನಕ್ಕೆ ಪಟ್ಟಣದ ತಾಪಂ ಕಚೇರಿ ಮುಂದೆ ಚಾಲನೆ ನೀಡಿ ಮಾತ ನಾಡಿದರು. ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಡಿ 32 ಕಾರ್ಯಕ್ರಮ ಜಾರಿಗೆ ತರಲಾಗಿದೆ. ಬಡಜನರಿಗೆ ಹಕ್ಕು ಆಧಾರಿತ, ಕಾರ್ಯಬದ್ಧ, ಉದ್ಯೋಗ ಬಯಸುವವರಿಗೆ ಕೆಲಸ ನೀಡುವ ಉದ್ದೇಶದಿಂದ ಗ್ರಾಪಂಗಳ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳ ಲಾಗುತ್ತಿದೆ ಎಂದು ವಿವರಿಸಿದರು.
ಗ್ರಾಪಂನ ಪ್ರತಿಯೊಂದು ಕಾಮಗಾರಿ ಆನ್‌ಲೈನ್‌ನಲ್ಲಿ ನಮೂದು ಮಾಡು ವುದರ ಮೂಲಕ ಸಾಮಾನ್ಯದ ಜನರಿಗೂ ಮಾಹಿತಿ ಸಿಗುವ ಕೆಲಸ ಮಾಡಲಾಗಿದೆ. ಪ್ರತಿಯೊಬ್ಬ ಕಾರ್ಮಿಕನಿಗೆ ತ್ಯ 249 ರೂ. ನೀಡಲಾಗುತ್ತಿದೆ. ಬಂಗಾರಪೇಟೆ ತಾಲೂಕು ಈಗಾಗಲೇ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವುದರಿಂದ ಪ್ರತಿಯೊಂದು ಜಾಬ್ ಕಾಡ್ ಗೆ 150 ಮಾನವ ದಿನಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದರು.
ಅರ್ಜಿ ಸಲ್ಲಿಸಬಹುದು: ಕೆಲಸ ಮಾಡುವ ಕೈಗಳಿಗೆ ಕೆಲಸ ನೀಡುವ ಅಧಿಕಾರವನ್ನು ಗ್ರಾಪಂ ಅಡಳಿತ ಮಂಡಳಿ ಅಧಿಕಾರ ಹೊಂದಿರುವುದರಿಂದ ಯಾರೇ ಬೇಡಿಕೆ ಸಲ್ಲಿಸಿದರೂ 15 ದಿನಗೊಳಗಾಗಿ ಕೆಲಸ ನೀಡಲು ಅವಕಾಶ ಇರುವುದರಿಂದ ಎಲ್ಲರೂ ಸಂಬಂಧಪಟ್ಟ ಗ್ರಾಪಂಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು. ಕೂಲಿ ಕಾರ್ಮಿಕರು ವಾಸವಿರುವ ಸ್ಥಳದಿಂದ 5 ಕಿ.ಮೀ.ಗಿಂತ ಹೆಚ್ಚಿನ ದೂರದಲ್ಲಿ ಕೆಲಸವನ್ನು ನೀಡಿದರೆ, ನಿಗದಿತ ಕೂಲಿಗಿಂತ ಶೇ.10 ಹೆಚ್ಚುವರಿಯಾಗಿ ಸಾರಿಗೆ ಮತ್ತು ಜೀವನ ವೆಚ್ಚ ನೀಡಲಾಗುತ್ತದೆ. ಪ್ರತಿಯೊಂದು ಕೆಲಸ ನಡೆಯುವ ಜಾಗದಲ್ಲಿ ಗ್ರಾಪಂನಿಂದ ಕುಡಿಯುವ ನೀರು, ಕನಿಷ್ಠ ಮೂಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಹೇಳಿದರು.
ತಾಪಂ ಸಹಾಯಕ ನಿರ್ದೇಶಕ ಮಂಜುನಾಥ್, ಸಿಬ್ಬಂದಿ ಹರಿತಾ, ಸುಬ್ರಮಣಿರೆಡ್ಡಿ, ಸೋಮಶೇಖರ್, ಗೋವಿಂದಪ್ಪ, ಪಾಪಣ್ಣ ಇತರರಿದ್ದರು.