Advertisement

ಹುಳದೇನಹಳ್ಳಿಯಲ್ಲಿ ನರೇಗಾ ಜಾಗೃತಿ

04:49 PM Oct 19, 2019 | Suhan S |

ಟೇಕಲ್‌: ಹೋಬಳಿಯ ಹುಳದೇನಹಳ್ಳಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಡಿ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೈಗೊಂಡಿರುವ ಪ್ರಚಾರದ ವಾಹನ ಶುಕ್ರವಾರ ಗ್ರಾಮಗಳಲ್ಲಿ ಸಂಚರಿಸಿತು.

Advertisement

ಈ ವೇಳೆ ನಡೆದ ಕಾರ್ಯಕ್ರಮಕ್ಕೆ ಗ್ರಾಪಂ ಕಾರ್ಯದರ್ಶಿ ಅಶ್ವತ್ಥಪ್ಪ ಚಾಲನೆ ನೀಡಿ, ನರೇಗಾ ಯೋಜನೆಯಲ್ಲಿ ಕೈಗೊಳ್ಳುವ ಕಾಮಗಾರಿಗಳ ಬಗ್ಗೆ ಮಾತನಾಡಿದರು. ಸ್ಮಶಾನ ಅಭಿವೃದ್ಧಿ, ಕಾಂಕ್ರೀಟ್‌ ರಸ್ತೆ, ಪ್ರವಾಹ ನಿಯಂತ್ರಣ ಮತ್ತು ಸಂರಕ್ಷಣಾ ಕಾಮಗಾರಿ, ಕೊಳವೆ ಬಾವಿ ಮರುಪೂರಣ ಘಟಕ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಾಣ, ರಾಜೀವ್‌ಗಾಂಧಿ ಸೇವಾ ಕೇಂದ್ರ, ಅಂಗನವಾಡಿ ಕಟ್ಟಡ ನಿರ್ಮಾಣ, ಹಳ್ಳಿ ಸಂತೆ, ಶಾಲಾ ಶೌಚಾಲಯ, ರಸ್ತೆ ಬದಿ ಗಿಡ ನೆಡುವುದು ಸಹ ಸರ್ಕಾರದ ಯೋಜನೆಗಳೊಂದಿಗೆ ಕೈಗೊಳ್ಳಬಹುದು ಎಂದರು.

ನರೇಗಾ ಯೋಜನೆಯಡಿ ಕೆಲಸ ಮಾಡುವವರಿಗೆ ದಿನಕ್ಕೆ 249 ರೂ. ಕೂಲಿ ದೊರೆಯುತ್ತದೆ. ಕೆಲಸಕ್ಕೆ ಅರ್ಜಿ ಸಲ್ಲಿಸಿದವರು ವರ್ಷದಲ್ಲಿ 100 ದಿನಗಳ ಕಾಲ ಕೆಲಸ ನಿರ್ವಹಿಸಬಹುದು ಎಂದು ತಿಳಿಸಿದರು. ಇದರ ಜೊತೆಗೆ ತೋಟಗಾರಿಕೆ, ರೇಷ್ಮೆ, ಕೃಷಿ, ವಸತಿ ಯೋಜನೆಯಗಳಲ್ಲಿಯೂ ನರೇಗಾ ಯೋಜನೆ ಬಳಸಿಕೊಳ್ಳಬ ಹುದು. ಮುಖ್ಯವಾಗಿ ರೈತರು “ನಮ್ಮ ಉದ್ಯೋಗ ನಮ್ಮ ಹಳ್ಳಿಗೆ’ “ನಮ್ಮ ಗ್ರಾಮ ಅಭಿವೃದ್ಧಿ ನಮ್ಮ ಕೈಯಲ್ಲಿ’ ಎಂಬುದನ್ನು ಅರಿಯಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next