Advertisement

ನರೇಗಾ: ಜಿಲ್ಲೆಯಲ್ಲಿ ಶೇ.95.9 ಗುರಿ ಸಾಧನೆ

08:45 AM Jun 12, 2020 | Suhan S |

ಶಿವಮೊಗ್ಗ: 2020-21ನೇ ಸಾಲಿನಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಜೂ.10ರವರೆಗೆ ಶಿವಮೊಗ್ಗ ಜಿಲ್ಲೆ ಶೇ.95.09 ಗುರಿ ಸಾಧನೆ ಮೂಲಕ ರಾಜ್ಯದಲ್ಲೇ ನಾಲ್ಕನೇ ಸ್ಥಾನ ಗಳಿಸಿ ಉತ್ತಮ ಪ್ರಗತಿ ಸಾಧಿಸಿದೆ.

Advertisement

ಪ್ರಸಕ್ತ ವರ್ಷ 1.4.2020 ರಿಂದ 2021ರ ಮಾರ್ಚ್‌ ಅಂತ್ಯದ ವೇಳೆಗೆ ಕೆರೆ ಹೊಳೆತ್ತುವುದು, ಇಂಗುಗುಂಡಿ ಹಾಗೂ ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ಅಡಕೆ ತೋಟ ನಿರ್ಮಾಣ, ಕೃಷಿ ಹೊಂಡ, ಬದು ನಿರ್ಮಾಣ ಮತ್ತು ಅಂತರ್ಜಲ ಚೇತನ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದ್ದು ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಲು ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರಿಂದ ಈ ಸಾಲಿನಲ್ಲಿ 45 ಲಕ್ಷ ಮಾನವ ದಿನಗಳ ಬಳಕೆ ಮಾಡಿಕೊಳ್ಳಲು ನಿಗದಿಪಡಿಸಲಾಗಿದೆ.

ಇದರನ್ವಯ ಜೂನ್‌ ಅಂತ್ಯಕ್ಕೆ 14.40 ಲಕ್ಷ ಮಾನವ ದಿನಗಳ ಬಳಕೆ ಮೂಲಕ ವಿವಿಧ ಕಾಮಗಾರಿ ಕೈಗೊಳ್ಳಲು ಗುರಿ ನೀಡಲಾಗಿದ್ದು ಜೂ.10ರವರೆಗೆ 13.69 ಲಕ್ಷ ಮಾನವ ದಿನ ಬಳಕೆ ಮೂಲಕ ಶೇ.95.09 ಗುರಿ ಸಾಧನೆ ಮಾಡಿರುವುದು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದೆ.

ಪ್ರತಿ ತಾಲೂಕಿನಲ್ಲೂ ಶೇ.100ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದ 10 ಗ್ರಾಪಂಗಳು ಹಾಗೂ ಅತಿ ಕಡಿಮೆ ಕಾರ್ಯ ನಿರ್ವಹಿಸಿದ 10 ಗ್ರಾಪಂಗಳ ಪಟ್ಟಿ ಮಾಡಲಾಗಿದೆ. ಮಳೆಗಾಲದಿಂದಾಗಿ ಕೆಲ ಗ್ರಾಪಂಗಳಲ್ಲಿ ಕೆರೆ ಹೊಳೆತ್ತುವ ಕಾಮಗಾರಿಗಳಿಗೆ ಅಡಚಣೆ ಉಂಟಾಗುವುದರಿಂದ ಅಂತಹ ಗ್ರಾಪಂಗಳಲ್ಲಿ ಇತರೆ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಶೇ.100 ರಷ್ಟು ಪ್ರಗತಿ ಸಾಧಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವರು ಈಗಾಗಲೇ ಅಧಿ ಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಿರು ವುದರಿಂದ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡಲ್ಲಿ ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನ ಅಲಂಕರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next