Advertisement
2 ತಿಂಗಳುಗಳಿಂದ ನರೇಗಾ ಯೋಜನೆಗೆ ಇಂಥ ದುಸ್ಥಿತಿ ಬಂದೊದಗಿದೆ. ಸಾಮಗ್ರಿ ವೆಚ್ಚದ ಮೊತ್ತ ತಡವಾಗುವುದು ಸಾಮಾನ್ಯವಾಗಿತ್ತು. ಆದರೆ ಈಗ ಕೂಲಿ ಹಣವೂ ಬಾಕಿಯಾಗಿದೆ. 1,73,56,162 ಕಾರ್ಮಿಕರು ನರೇಗಾ ಕೆಲಸಕ್ಕೆ ನೋಂದಾಯಿತರಾಗಿದ್ದು, ಈ ವರ್ಷ 8,14,384 ಕಾರ್ಮಿಕರು ಯೋಜನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಇವರಿಗೆ 130 ಕೋಟಿ ರೂ.ಗಳಿಗೂ ಅ ಧಿಕ ಕೂಲಿ ಹಣ ಪಾವತಿಯಾಗಿಲ್ಲ.
Related Articles
Advertisement
ಹಣ ಸ್ಥಗಿತಗೊಂಡಿದ್ದರಿಂದ ಅ ಧಿಕಾರಿಗಳೂ ಕೈ ಚೆಲ್ಲಿದ್ದಾರೆ. ಗುರಿ ಬೆನ್ನು ಹತ್ತಿ ಕೆಲಸ ಮಾಡುತ್ತಿದ್ದ ಅವರು ಉದ್ಯೋಗ ಖಾತ್ರಿ ಕಾಮಗಾರಿ ಕೈಗೊಳ್ಳಲು ಪ್ರೇರೇಪಿಸುವುದನ್ನು ಕೈ ಬಿಟ್ಟಿದ್ದಾರೆ. ಬಾಕಿ ಹಣ ಬಿಡುಗಡೆಗೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ಸಾಮಗ್ರಿ ವೆಚ್ಚ 348 ಕೋ.ರೂ ಬಾಕಿ :
ಉದ್ಯೋಗ ಖಾತ್ರಿ ಯೋಜನೆಯಲ್ಲಿ 130,38,07,291 ರೂ. ಕೂಲಿ ಹಣ ಬಾಕಿ ಉಳಿದಿದ್ದರೆ, ಸಾಮಗ್ರಿ ವೆಚ್ಚದ ಬಾಕಿ 348 ಕೋಟಿ ರೂ.ಗಳಿಗೆ ಏರಿದೆ. ಹೀಗಾಗಿ ಈ ಬಾರಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಾಕಿ ಮೊತ್ತ 478.38 ಕೋಟಿ ರೂ.ಗಳಿಗೆ ಏರಿದೆ.
ಎರಡು ತಿಂಗಳ ಉದ್ಯೋಗ ಖಾತ್ರಿ ಯೋಜನೆ ಹಣ ಬಂದಿಲ್ಲ. ಏಕೆ ಎನ್ನುವುದು ನಮಗೂ ತಿಳಿದಿಲ್ಲ. ಈ ಬಗ್ಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರ ಜತೆ ಮಾತನಾಡಿದ್ದೇನೆ. ಶೀಘ್ರ ಹಣ ಬಿಡುಗಡೆ ಬಗ್ಗೆ ಭರವಸೆ ನೀಡಿದ್ದಾರೆ. ಮೊದಲ ಹಂತವಾಗಿ ಎಸ್‌ಸಿ-ಎಸ್‌ಟಿ ಕೂಲಿಕಾರರಿಗೆ ಹಣ ಜಮೆಯಾಗಲಿದ್ದು, ಬಳಿಕ ಉಳಿದ ಕೂಲಿ ಕಾರ್ಮಿಕರಿಗೆ ಪಾವತಿಯಾಗಲಿದೆ. –ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ
-ಮಲ್ಲಿಕಾರ್ಜುನ ಚಿಲ್ಕರಾಗಿ