Advertisement

ಲವ್‌-ಡ್ರಗ್ಸ್‌ ಜೆಹಾದ್‌: ಪಾದ್ರಿಗೆ  ಬೆಂಬಲ

01:12 AM Sep 15, 2021 | Team Udayavani |

ತಿರುವನಂತಪುರ/ಕೊಟ್ಟಾಯಂ: ಕೇರಳ­ದಲ್ಲಿ ಲವ್‌ ಮತ್ತು ಮಾದಕ ವಸ್ತು ಜೆಹಾದ್‌ ವಿವಾ­ದಕ್ಕೆ ಶ್ರೀಕಾರ ನೀಡಿದ ಪಾಲದ ಕ್ರೈಸ್ತ ಧರ್ಮಗುರು ಜೋಸೆಫ್ ಕಲ್ಲರನ್‌ಘಾಟ್‌ ಅವರಿಗೆ  ಸೈರೋ ಮಲಬಾರ್‌ ಚರ್ಚ್‌ನ  ಚಂಗನಶ್ಮೇರಿ ಡಯಾಸಿಸ್‌ನ ಬಿಷಪ್‌ ಜೋಸೆಫ್ ಪೆರುಮ ತ್ತೋಟ್ಟಂ ಬೆಂಬಲ ನೀಡಿದ್ದಾರೆ.

Advertisement

ಮಲಯಾಳ ದಿನಪತ್ರಿಕೆ “ದೀಪಿಕಾ’ದಲ್ಲಿ ಬರೆದಿರುವ ಲೇಖನದಲ್ಲಿ “ಲವ್‌ ಜೆಹಾದ್‌, ಡ್ರಗ್ಸ್‌ ಮೂಲಕ ಭಯೋತ್ಪಾದನೆ ಜತೆಯಾಗಿಯೇ ಸಾಗುತ್ತಿದೆ. ಹೀಗಾಗಿ ಚರ್ಚ್‌ ಮೌನವಾಗಿ ಉಳಿಯಲು ಸಾಧ್ಯವಿಲ್ಲ. ಕ್ರಿಶ್ಚಿಯನ್‌ ಸಮುದಾಯದವರ ಆತಂಕಗಳ ಬಗ್ಗೆ  ಚರ್ಚಿಸಬೇಕು. ರಾಜಕೀಯ ಪಕ್ಷಗಳು, ಮಾಧ್ಯಮಗಳು ತಾರತಮ್ಯ ಧೋರಣೆ ಹೊಂದಿರಬಾರದು’ ಎಂದಿದ್ದರು.

ಬಿಜೆಪಿ ಈ ವಿಚಾರ ಮುಂದಿಟ್ಟುಕೊಂಡು ಕೇರಳದಲ್ಲಿ ಸಮುದಾಯಗಳ ನಡುವೆ ಕೋಮು ವೈಷಮ್ಯ ಸೃಷ್ಟಿಸಲು ಮುಂದಾಗಿದೆ ಎಂದು ಸಿಪಿಎಂ ಕೇರಳ ಘಟಕದ ಪ್ರಭಾರ ಕಾರ್ಯದರ್ಶಿ ಎ. ವಿಜಯರಾಘವನ್‌ ಆರೋಪಿಸಿದ್ದಾರೆ. ಆದರೆ ಅವರು ಮಾದಕ ವಸ್ತು ಜೆಹಾದ್‌ ಎಂಬ ಪದ ಪ್ರಯೋಗ ಮಾಡಿಲ್ಲ. ಕಾಂಗ್ರೆಸ್‌ ಕೂಡ ಕೋಮುವಾದಿ ಶಕ್ತಿಗಳ ಜತೆಗೆ ಕೈಜೋಡಿಸಿದೆ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next