Advertisement

ಇಂದಿನಿಂದ ನಾರಾಯಣನ ಆನ್‌ಲೈನ್‌ ಬುಕ್ಕಿಂಗ್‌

09:50 AM Dec 24, 2019 | Lakshmi GovindaRaj |

ರಕ್ಷಿತ್‌ ಶೆಟ್ಟಿ ಅಭಿನಯದ “ಅವನೇ ಶ್ರೀಮನ್ನಾರಾಯಣ’ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಅದಕ್ಕೆ ಪೂರಕವಾಗಿ ಸಿನಿಮಾದ ಕ್ರೇಜ್‌ ಕೂಡಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಚಿತ್ರದ ಟ್ರೇಲರ್‌ ದೊಡ್ಡ ಮಟ್ಟದಲ್ಲಿ ಹಿಟ್‌ ಆದ ಬೆನ್ನಲ್ಲೇ, ಬಿಡುಗಡೆಯಾದ “ಹ್ಯಾಂಡ್ಸಾಪ್‌’ ಹಾಡು ಸಖತ್‌ ವೈರಲ್‌ ಆಗಿದೆ. ಆ ಹಾಡಿನಲ್ಲಿ ರಕ್ಷಿತ್‌ ಶೆಟ್ಟಿ ಹಾಕಿರುವ ಸ್ಟೆಪ್‌ ಅನ್ನು ವಿಡಿಯೋ ಮಾಡಿ, ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.

Advertisement

ಈ ನಡುವೆಯೇ ಚಿತ್ರದ ಆನ್‌ಲೈನ್‌ ಬುಕ್ಕಿಂಗ್‌ ಓಪನ್‌ ಆಗಿದೆ. ಇಂದಿನಿಂದ “ಅವನೇ ಶ್ರೀಮನ್ನಾರಾಯಣ’ ಚಿತ್ರದ ಆನ್‌ಲೈನ್‌ ಬುಕ್ಕಿಂಗ್‌ ಓಪನ್‌ ಆಗುತ್ತಿದೆ. ಈ ಮೂಲಕ ಫ‌ಸ್ಟ್‌ ಡೇ ಫ‌ಸ್ಟ್‌ ಶೋ ಸಿನಿಮಾ ಮಾಡಬೇಕೆಂದು ಕಾಯುತ್ತಿದ್ದವರು ಖುಷಿಪಡುವಂತಾಗಿದೆ. ಸಾಮಾನ್ಯವಾಗಿ ಮೂರು ದಿನಗಳ ಮೊದಲು ಆನ್‌ಲೈನ್‌ ಬುಕ್ಕಿಂಗ್‌ ಮಾಡಲಾಗುತ್ತದೆ. ಆದರೆ, “ಅವನೇ ಶ್ರೀಮನ್ನಾರಾಯಣ’ ಚಿತ್ರದ ಹವಾ ಜೋರಾಗಿರುವುದರಿಂದ ಒಂದು ವಾರ ಮೊದಲೇ ಬುಕ್ಕಿಂಗ್‌ ಆರಂಭವಾಗುತ್ತಿದೆ.

ಈ ನಡುವೆಯೇ ಬೆಂಗಳೂರಿನ ಊರ್ವಶಿ ಹಾಗೂ ಕಾವೇರಿ ಚಿತ್ರಮಂದಿರಗಳಲ್ಲಿ ಈಗಾಗಲೇ ಆನ್‌ಲೈನ್‌ ಬುಕ್ಕಿಂಗ್‌ ಆರಂಭವಾಗಿದ್ದು, ಮೊದಲ ದಿನದ ಎಲ್ಲಾ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ. ಈ ಚಿತ್ರ ಐದು ಭಾಷೆಗಳಲ್ಲಿ ತಯಾರಾಗಿದೆ. ಆರಂಭದಲ್ಲಿ ಐದು ಭಾಷೆಗಳಲ್ಲೂ ಒಂದೇ ದಿನ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿತ್ತು. ಆದರೆ, ಈಗ ಬೇರೆ ಬೇರೆ ಭಾಷೆಗಳ ಚಿತ್ರದ ಬಿಡುಗಡೆಯಲ್ಲಿ ಒಂದಷ್ಟು ಬದಲಾವಣೆಯಾಗಿದೆ. ಕನ್ನಡದಲ್ಲಿ “ಅವನೇ ಶ್ರೀಮನ್ನಾರಾಯಣ’ ಚಿತ್ರ ಡಿಸೆಂಬರ್‌ 27 ರಂದು ತೆರೆಕಂಡರೆ ತೆಲುಗಿನಲ್ಲಿ ಜನವರಿ 1, ತಮಿಳು ಹಾಗೂ ಮಲಯಾಳಂ ಜನವರಿ 3 ಹಾಗೂ ಹಿಂದಿಯಲ್ಲಿ ಜನವರಿ 17ರಂದು ತೆರೆಕಾಣುತ್ತಿದೆ.

ಕನ್ನಡಿಗರು ಸದಭಿರುಚಿಯ ಚಿತ್ರಗಳನ್ನು ಪ್ರೋತ್ಸಾಹಿಸುವುದರಿಂದ “ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡಿ, ಇಲ್ಲಿಂದ ಚಿತ್ರದ ಯಶಸ್ವಿ ಪಯಣ ಮುಂದುವರೆಯಬೇಕೆಂಬುದು ಚಿತ್ರತಂಡದ ಆಶಯ. ಆ ಕಾರಣಕ್ಕಾಗಿ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ. ಬೇರೆ ಬೇರೆ ಭಾಷೆಯ ಪ್ರಮುಖ ವಿತರಕರು ಚಿತ್ರದ ವಿತರಣೆಗೆ ಮುಂದೆ ಬಂದಿರುವ ಮೂಲಕ ಆಯಾ ಭಾಷೆಗಳಲ್ಲೂ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ. ಸಚಿನ್‌ ನಿರ್ದೇಶನದ ಈ ಚಿತ್ರವನ್ನು ಪುಷ್ಕರ್‌ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next