Advertisement

ಮಂಗಳೂರಿನಿಂದ ಸ್ವಗ್ರಾಮಕ್ಕೆ ಮರಳಿದ ಕಾರ್ಮಿಕರು

01:30 PM May 01, 2020 | Naveen |

ನಾರಾಯಣಪುರ: ಉದ್ಯೋಗ ಅರಸಿ ಮಂಗಳೂರು ಜಿಲ್ಲೆಗೆ ಗುಳೆ ಹೋಗಿದ್ದ ಕೊಡೇಕಲ್‌ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಕೂಲಿ ಕಾರ್ಮಿಕರು ಬುಧವಾರ ಮತ್ತು ಗುರುವಾರ ಪ್ರತ್ಯೇಕ ಎರಡು ಸಾರಿಗೆ ಬಸ್‌ಗಳಲ್ಲಿ ತಮ್ಮ ಸ್ವಗ್ರಾಮಗಳಿಗೆ ಮರಳಿದರು.

Advertisement

ಮಂಗಳೂರಿನಿಂದ ಬುಧವಾರ ಕೊಡೇಕಲ್‌ ಆಗಮಿಸಿದ ಮಾರನಾಳ ಗ್ರಾಮದ 7 ಜನ ಬಲಶೆಟ್ಟಿಹಾಳ ಗ್ರಾಮದ ಇಬ್ಬರು ಕಾರ್ಮಿಕರನ್ನು ಕೊಡೇಕಲ್‌ ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಥರ್ಮಲ್‌ ಸ್ಕ್ರೀನಿಂಗ್‌ ಪರೀಕ್ಷೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಾಡ ಕಚೇರಿ ಉಪತಹಶೀಲ್ದಾರ್‌ ಮಹಾದೇವಪ್ಪಗೌಡ ಬಿರಾದಾರ, ಮಂಗಳೂರಿಗೆ ತೆರಳಿದ್ದ ವಲಯದ ಕಾರ್ಮಿಕರನ್ನು ಅಲ್ಲಿನ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಳುಹಿಸಿಕೊಟ್ಟಿದ್ದಾರೆ.

ಈಗಾಗಲೇ ಅವರು 14 ದಿನಗಳ ಕ್ವಾರಂಟೈನ್‌ ಪೂರ್ಣಗೊಳಿಸಿದ್ದು ಮತ್ತೆ ಸ್ಕ್ರೀನಿಂಗ್‌ ಮೂಲಕ ತಪಾಸಣೆ ಮಾಡಲಾಗಿದೆ. ಪ್ರತಿಯೊಬ್ಬರ ಮಾಹಿತಿ ದಾಖಲಿಸಿಕೊಂಡು ಮನೆಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು. ಗುರುವಾರ ಕೊಡೇಕಲ್‌ ಹೋಬಳಿ ವ್ಯಾಪ್ತಿಯ ಎಣ್ಣಿವಡಿಗೇರಿ ಮತ್ತು ಮದಲಿಂಗನಾಳ ಗ್ರಾಮಗಳಿಂದ ಗುಳೆ ಹೋಗಿದ್ದ ಕಾರ್ಮಿಕರು ಕೂಡ ಎರಡು ಪ್ರತ್ಯೇಕ ಬಸ್‌ಗಳಲ್ಲಿ ಸ್ವಗ್ರಾಮಗಳಿಗೆ ಮರಳಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೂ ಕೂಡ ಕೊಡೇಕಲ್‌ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಪವನರಾವ ತಪಾಸಣೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next