ನಾರಾಯಣಪುರ: ತಮ್ಮ ಸರಳ ವ್ಯಕ್ತಿತ್ವದ ಮೂಲಕ ದೇಶದೆಲ್ಲಡೆ
ಸಂಚಾರ ಮಾಡಿ ಸನಾತನ ಧರ್ಮದ ಉಳಿಯುವಿಗಾಗಿ ಶ್ರಮಿಸಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಪೂಜ್ಯರು ಮಹಾನ ಸಂತರು ಎಂದು ಶ್ರೀ ಗುರು ದುರದುಂಡೇಶ್ವರ ವಿರಕ್ತಮಠದ ಪೂಜ್ಯ ಶ್ರೀ ಶಿವಕುಮಾರಸ್ವಾಮಿಗಳು ಬಣ್ಣಿಸಿದರು.
ಕೊಡೇಕಲ್ ಪಟ್ಟಣದ ಶ್ರೀ ದುರದುಂಡೇಶ್ವರ ಮಠದಲ್ಲಿ ರವಿವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ಮಹಾನ ಯತಿಗಳು ನಮ್ಮ ಮಠಕ್ಕೆ ಆಗಮಿಸಿದ್ದರು. ಅವರ ಅಗಲಿಕೆ ಯತಿಕುಲಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಬಸವಪೀಠಾಧಿಪತಿ ಮಹಲಿ ನಮಠದ ಶ್ರೀ ವೃಷಬೇಂದ್ರ ಅಪ್ಪನವರು, ಪ್ರಮುಖರಾದ ಬಸಣ್ಣ ಗೋಡ್ರಿ, ನೀಲಕಂಠ ವಿರಕ್ತಮಠ, ತಾಪಂ ಸದಸ್ಯ ಮೋಹನ ಪಾಟೀಲ, ಭೀಮನಗೌಡ ಮಾಲಿಪಾಟೀಲ ತೀರ್ಥ, ವೀರಸಂಗಪ್ಪ ಹಾವೇರಿ, ಸೋಮಲಿಂಗಪ್ಪ ದೋರಿ, ಸಂಗಪ್ಪ ಶಿವಪುರ, ಡಾ| ಬಿ.ಬಿ. ಬಿರಾದಾರ, ಅಯ್ಯಪ್ಪ ಪಡಶೆಟ್ಟಿ, ಚಂದ್ರಶೇಖರ ಹಾವೇರಿ, ಮಲ್ಲಣ್ಣ ಬಡಿಗೇರ, ಚಂದ್ರಶೇಖರ ಹೋಕ್ರಾಣಿ, ವೀರಸಂಗಪ್ಪ ಅಂಬ್ಲಿಹಾಳ, ಸಾತಪ್ಪ ಪಡಶೆಟ್ಟಿ, ಭೀಮನಗೌಡ ಬಿರಾದಾರ, ರಮೇಶ ಬಿರಾದಾರ, ರವೀಂದ್ರ ಅಂಗಡಿ, ಬಸವಂತ್ರಾಯ ಕುಲಕರ್ಣಿ, ಮಲ್ಲು ಜಂಗಳಿ, ಸಿದ್ದಣ್ಣ ಬಂಟನೂರ, ರುದ್ರಪ್ಪ ಅಂಗಡಿ, ವಿರೇಶ ಜೈನಾಪುರ, ವಿಜಯ ಮದರಿ, ಬಸವರಾಜ ಭದ್ರಗೋಳ, ಸಂಗನಬಸ್ಸು ಪಂಜಗಲ್ ಇದ್ದರು.